
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ನಮ್ಮ ಜೀವನ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಸೂಚನೆಗಳನ್ನು ನೀಡುತ್ತವೆ. ಅವುಗಳಲ್ಲಿ ಶುಭ ಸೂಚನೆಯೂ ಇರುತ್ತೆ. ಪ್ರತಿಯೊಂದು ಕನಸು ಏನನ್ನಾದರೂ ಹೇಳುತ್ತದೆ ಮತ್ತು ವ್ಯಕ್ತಿಯ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ. ಆದರೆ ಕೆಲವೊಂದು ಕನಸುಗಳನ್ನು ಯಾರೊಂದಿಗೂ, ವಿಶೇಷವಾಗಿ ನಿಮ್ಮ ಸಂಗಾತಿಯೊಂದಿಗೂ ಹಂಚಿಕೊಳ್ಳದಿರುವುದು ಒಳ್ಳೆಯದು. ಕೆಲವು ಕನಸುಗಳನ್ನು ಇತರರ ಜೊತೆ ಹಂಚಿಕೊಳ್ಳೋದರಿಂದ ಜೀವನದ ಮೇಲೆ ನಕಾರಾತ್ಮಕ ಪರಿಣಾಮ (negative effect) ಬೀರುತ್ತದೆ ಎಂದು ನಂಬಲಾಗಿದೆ. ಅಂತಹ ಕನಸುಗಳ ಬಗ್ಗೆ ತಿಳಿದುಕೊಳ್ಳೋಣ.
ಜ್ಯೋತಿಷ್ಯಶಾಸ್ತ್ರ ಪ್ರಕಾರ, ಈ 10 ಕನಸುಗಳು ನಿಮ್ಮನ್ನ ಅಗರ್ಭ ಶ್ರೀಮಂತರನ್ನಾಗಿಸುತ್ತೆ!
ನಿಮ್ಮ ಸಾವನ್ನು ನೋಡುವುದು
ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ನಿಮ್ಮ ಸಾವನ್ನು ಕಂಡರೆ, ಅದರಿಂದ ನೀವು ವಿಚಲಿತರಾಗೋದು ಖಚಿತಾ. ಹಾಗಂತ ಅದನ್ನು ನಿಮ್ಮ ಪತ್ನಿ ಬಳಿ ಹೇಳೋದಕ್ಕೆ ಹೋಗಬೇಡಿ. ಇದರಿಂದ ಕೆಟ್ಟದಾಗಬಹುದು. ಹಾಗಂತ ನಿಮ್ಮ ಸಾವಿನ ಕನಸು (dream of death) ಬಿದ್ರೆ ಭಯ ಪಡ್ಬೇಡಿ, ಇದು ದೀರ್ಘಾಯಸ್ಸನ್ನು ಸೂಚಿಸುತ್ತೆ
ಪೋಷಕರು ನೀರು ಕುಡಿಯುವ ಕನಸು
ಕನಸಿನಲ್ಲಿ ಪೋಷಕರು ನೀರು ಕುಡಿಯುವುದನ್ನು ನೋಡುವುದು ಶುಭವೆಂದು ಪರಿಗಣಿಸಲಾಗಿದೆ. ಇದರರ್ಥ ನೀವು ಶೀಘ್ರದಲ್ಲೇ ಬಡ್ತಿ ಪಡೆಯಬಹುದು. ಈ ಕನಸನ್ನು ನೀವು ಯಾರೊಂದಿಗೂ ಹೇಳಬೇಡಿ.
ಕನಸಲ್ಲಿ ಇವು ಕಂಡ್ರೆ ನಿಮಗೆ ಲಕ್ಷ್ಮೀ ಕಟಾಕ್ಷ! ಶ್ರೀಮಂತಿಕೆ ತನ್ನಿಂದ ತಾನೇ ಬರಲಿದೆ
ಕನಸಿನಲ್ಲಿ ಬೆಳ್ಳಿಯಿಂದ ತುಂಬಿದ ಪಾತ್ರೆಯನ್ನು ನೋಡುವುದು
ಕನಸಿನಲ್ಲಿ ಬೆಳ್ಳಿ ತುಂಬಿದ ಪಾತ್ರೆಯನ್ನು ನೋಡುವುದು ಶುಭವೆಂದು ಪರಿಗಣಿಸಲಾಗಿದೆ. ಇದನ್ನು ನೋಡುವುದರಿಂದ ಶೀಘ್ರದಲ್ಲೇ ನೀವು ಲಕ್ಷ್ಮಿ ದೇವಿಯ (Goddess Lakshmi) ಆಶೀರ್ವಾದ ಪಡೆಯಲಿದ್ದೀರಿ ಎಂದರ್ಥ. ಇದರರ್ಥ ಹಠಾತ್ ಸಂಪತ್ತನ್ನು ಸ್ವೀಕರಿಸುವುದು. ಇದನ್ನು ಎಂದಿಗೂ ಇತರರೊಂದಿಗೆ ಹೇಳಲೇಬೇಡಿ., ಇಲ್ಲದಿದ್ದರೆ ತಾಯಿ ಲಕ್ಷ್ಮಿ ನಿಮ್ಮ ಜೀವನದಿಂದ ಹಿಂದಿರುಗುವ ಸಾಧ್ಯತೆ ಇದೆ.
ಕನಸಿನಲ್ಲಿ ದೇವರನ್ನು ನೋಡುವುದು
ಕನಸಿನಲ್ಲಿ ದೇವರನ್ನು ನೋಡುವುದು ಶುಭವೆಂದು ಪರಿಗಣಿಸಲಾಗಿದೆ. ದೇವರನ್ನು ನೋಡುವುದು ಎಂದರೆ ನಿಮ್ಮ ಜೀವನದ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ಕೊನೆಗೊಳ್ಳುತ್ತವೆ ಎಂದರ್ಥ. ಆದ್ದರಿಂದ, ಇದನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
ಪದೇ ಪದೇ ಕನಸಲ್ಲಿ ಸತ್ತವರು ಕಾಣಿಸಿಕೊಂಡು ಅಳ್ತಾ ಇದ್ರೆ ಏನಾಗುತ್ತೆ ಗೊತ್ತಾ?
ನೀವು ಅಶುಭ ಕನಸು ಬಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಮಗೆ ಕೆಟ್ಟ ಕನಸು (bad dreams) ಬಿದ್ದರೆ ಮುಂಜಾನೆ ಸ್ನಾನ ಮಾಡಿ ದೇವರನ್ನು ಪೂಜಿಸಿ. ಹಸುವಿಗೆ ರೊಟ್ಟಿ ತಿನ್ನಿಸಿ ಮತ್ತು ಪಕ್ಷಿಗಳಿಗೆ ಆಹಾರವನ್ನು ನೀಡಿ, ಓಂ ನಮಃ ಶಿವಾಯದಂತಹ ಧಾರ್ಮಿಕ ಮಂತ್ರಗಳನ್ನು ಪಠಿಸಿ. ನಿಮ್ಮ ಮಾರ್ಗದರ್ಶಕರಿಂದ ಅಥವಾ ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಿರಿ.