ಉತ್ತರ ಕರ್ನಾಟಕದ ಸುಪ್ರಿಸಿದ್ಧ ಜಾತ್ರೆಗಳಲ್ಲೊಂದಾಗಿರುವ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಜಾತ್ರೆಗೆ ಈ ಬಾರಿ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಿದ್ದಾರೆ. ರಥೋತ್ಸವಕ್ಕೆ ಇರದ ಭಕ್ತರು ನಂತರದ ದಿನಗಳಲ್ಲಿ ನಿತ್ಯವೂ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಮೇ.17): ಉತ್ತರ ಕರ್ನಾಟಕದ ಸುಪ್ರಿಸಿದ್ಧ ಜಾತ್ರೆಗಳಲ್ಲೊಂದಾಗಿರುವ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಜಾತ್ರೆಗೆ ಈ ಬಾರಿ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಿದ್ದಾರೆ. ರಥೋತ್ಸವಕ್ಕೆ ಇರದ ಭಕ್ತರು ನಂತರದ ದಿನಗಳಲ್ಲಿ ನಿತ್ಯವೂ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ನಿರೀಕ್ಷೆ ಮೀರಿ ಜನಸಾಗರ ಹರಿದು ಬರುತ್ತಿದೆ. ಕೋವಿಡ್ ವೇಳೆಯಲ್ಲಿ ತಗ್ಗಿದ್ದ ಭಕ್ತರ ಆಗಮನ, ನಂತರ ನಿಧಾನಕ್ಕೆ ಹೆಚ್ಚಾಗಲಾರಂಭಿಸಿತು. ಕೋವಿಡ್ ವೇಳೆಯಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು.
undefined
ಆದರೆ, ಆಗಿ ಹುಣ್ಣಿಮೆ ನಿಮಿತ್ತ ನಡೆಯುವ ಜಾತ್ರೆಗೆ ಹಿಂದಿನ ಎಲ್ಲ ದಾಖಲೆ ಮೀರಿ ಭಕ್ತ ಸಾಗರ ಹರಿದು ಬಂದಿದೆ. ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ನಾಲ್ಕಾರು ರಾಜ್ಯಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿಂದೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಉದಾಹರಣೆ ಇಲ್ಲ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ.
ನನ್ನ ಗೆಲುವಿನಲ್ಲಿ ಹೊನ್ನಾವರದ ಮತದಾರರ ಪಾತ್ರ ದೊಡ್ಡದು: ಶಾಸಕ ದಿನಕರ ಶೆಟ್ಟಿ
ನಿತ್ಯ2-3 ಲಕ್ಷ ಭಕ್ತರು: ಕಳೆದ ಮೂರು ದಿನಗಳಿಂದ ನಿತ್ಯವೂ 2-3 ಲಕ್ಷ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಇದರಲ್ಲಿ ಬಹುತೇಕರು ಇಲ್ಲಿಯೇ ತಂಗಿ ಹೋಗುವುದರಿಂದ ದೇವಸ್ಥಾನ ಸುತ್ತಮುತ್ತಲ ಪ್ರದೇಶದ ಒಂದೆರಡು ಕಿಮೀ ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರೂ ಅಲ್ಲಿ ಟೆಂಟ್ ಹಾಕಲಾಗಿದೆ. ಭಕ್ತರು ನದಿಯುದ್ದಕ್ಕೂ ತಂಗಿದ್ದಾರೆ. ಹೀಗಾಗಿ,ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಜನವೋ ಜನ ಎನ್ನುವಂತಾಗಿದೆ.
ಪ್ರಾಣಿ ಬಲಿ ಅವ್ಯಾಹತ: ದೇವಸ್ಥಾನ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಮಾಡಿ ವಿಶೇಷ ನಿಗಾ ಇಡಲಾಗಿದೆಯದಾರೂ ದೇವರ ಹೆಸರಿನಲ್ಲಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶಲ್ಲಿ ಪ್ರಾಣಿ ಬಲಿ ಲೆಕ್ಕವಿಲ್ಲದಂತೆ ನಡೆಯುತ್ತದೆ. ನಿತ್ಯವೂ ಹತ್ತಾರು ಸಾವಿರ ಕುರಿ, ಕೋಳಿ ಬಲಿ ನೀಡುವುದು ಅವ್ಯಾಹತವಾಗಿದೆ. ಇದಕ್ಕಾಗಿ ತಾವೇ ಟೆಂಟ್ ಹಾಕಿಕೊಂಡು, ಪ್ರಾಣಿಬಲಿ ನೀಡಿ, ದೇವರಿಗೆ ನೈವೇದ್ಯ ಮಾಡಲು ತೆಗೆದುಕೊಂಡು ಬರುತ್ತಾರೆ. ಇದಕ್ಕೆ ಸಾಕ್ಷಿ ಕೇಳಬೇಕಾಗಿಲ್ಲ, ದೇವಸ್ಥಾನ ಸುತ್ತ ಸುತ್ತಾಡಿದರೆ ಸಾಕು ಪ್ರಾಣಿಬಲಿ ನೀಡುತ್ತಿರುವುದು ಎಲ್ಲೆಂದರಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲ, ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕುರಿಗಳನ್ನು ಕರೆ ತಂದು, ದೇವಸ್ಥಾನದ ಸುತ್ತಲು ಪ್ರದಕ್ಷಿಣೆ ಹಾಕಿಸಲಾಗುತ್ತದೆ. ಬೃಹತ್ ಮೆರವಣಿಗೆಯಲ್ಲಿ ಕುರಿ, ಟಗರು ತರುವುದು ಸಾಲು ಸಾಲಾಗಿ ಬರುತ್ತಿರುವುದು ಕಾಣ ಸಿಗುತ್ತದೆ.
ಇಲ್ಲ ನಿಯಂತ್ರಣ: ದೇವಸ್ಥಾನ ವ್ಯಾಪ್ತಿಯಲ್ಲಿ ಒಂದಷ್ಟುಏರಿಯಾ ನಿಗದಿ ಮಾಡಿ, ಅಲ್ಲಿ ಮಾತ್ರ ಪ್ರಾಣಿ ಬಲಿ ನಿಷೇಧ ಮಾಡಿರುವ ಜಿಲ್ಲಾಡಳಿತ ಉಳಿದೆಡೆ ನಡೆಯುತ್ತಿರುವ ಪ್ರಾಣಿ ಬಲಿ ನಿಯಂತ್ರಣ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನಿಷೇಧ ಇದ್ದರೂ ದೇವಸ್ಥಾನ ವ್ಯಾಪ್ತಿಯಲ್ಲಿ ಪ್ರಾಣಿಗಳನ್ನು ಮೆರವಣಿಗೆಯಲ್ಲಿ ಕರೆ ತರುತ್ತಿದ್ದರು ನಿಯಂತ್ರಣ ಮಾಡದೆ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ರಥೋತ್ಸವದ ದಿನ ಭಕ್ತರು ಅಷ್ಟುದೊಡ್ಡ ಪ್ರಮಾಣದಲ್ಲಿ ಇರಲಿಲ್ಲ. ಆದರೆ, ಮರು ದಿನದಿಂದ ವಿಪರೀತ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿಂದಿನ ವರ್ಷಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ಭಕ್ತ ಸಾಗರ ಬಂದಿದೆ.
-ಅರವಿಂದ ಸುತ್ತಗುಂಡಿ, ಇಓ ದೇವಸ್ಥಾನ ಸಮಿತಿ
ದತ್ತರವರ ನೇತೃತ್ವದಲ್ಲಿ ಕಾರ್ಯಕರ್ತರ ಸಜ್ಜುಗೊಳಿಸಲು ಸಂಸದ ಪ್ರಜ್ವಲ್ ಕರೆ
ಈ ಹಿಂದಿನ ಎಲ್ಲ ದಾಖಲೆ ಮೀರಿ ಭಕ್ತ ಸಾಗರ ಶ್ರೀಹುಲಿಗೆಮ್ಮ ದೇವಿ ಜಾತ್ರೆಗೆ ಬರುತ್ತಿದ್ದು, ನೆರೆಯ ರಾಜ್ಯ ಸೇರಿದಂತೆ ರಾಜ್ಯಾದ್ಯಂತ ಬೃಹತ್ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
-ರಾಜಶೇಖರ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ