ಗವಿಸಿದ್ದೇಶ್ವರ ರಥೋತ್ಸವಕ್ಕೂ ಮುನ್ನ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪಲ್ಲಕ್ಕಿ ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಲ್ಲಕ್ಕಿ ಹೊತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೊಪ್ಪಳ(ಜ.28): ನನ್ನ ಜೀವನದಲ್ಲಿಯೇ ಇಂಥ ದೊಡ್ಡ ಜಾತ್ರೆಯನ್ನು ನೋಡಿರಲಿಲ್ಲ. ಇದೇ ಮೊದಲು ಇಂಥ ದೊಡ್ಡ ಜಾತ್ರೆಯನ್ನು ನೋಡುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ನಗರದಲ್ಲಿ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಷ್ಟೋ ಜಾತ್ರೆಗಳಿಗೆ ಹೋಗಿದ್ದೇನೆ. ಇಷ್ಟೊಂದು ಜನಸ್ತೋಮ ನೋಡಿರಲಿಲ್ಲ ಎಂದರು. ದೇವೇಗೌಡರು ಗವಿಸಿದ್ದೇಶ್ವರರ ಪಲ್ಲಕ್ಕಿ ಹೊತ್ತ ಬಳಿಕ ಅವರ ಪುತ್ರ ಸಿಎಂ ಆಗಿದ್ದರು. ಈಗ ನೀವು ಪಲ್ಲಕ್ಕಿ ಹೊತ್ತಿದ್ದು, ಏನು ಬೇಡಿಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ, ಅದು ಗೊತ್ತಿಲ್ಲ. ಆದರೆ, ನಾನು ಈಗ ಪಲ್ಲಕ್ಕಿ ಹೊತ್ತಿದ್ದು, ನನಗೂ ಆ ಗವಿಸಿದ್ದೇಶ್ವರನಿಗೆ ಮಾತ್ರ ಗೊತ್ತು. ಅದನ್ನು ಹೇಳಲು ಆಗುವುದಿಲ್ಲ ಎಂದರು.
ಕೊಪ್ಪಳ: 8 ಲಕ್ಷ ಭಕ್ತ ಸಾಗರದ ಮಧ್ಯೆ ಗವಿಸಿದ್ದೇಶ್ವರ ತೇರು, ಮುಗಿಲು ಮುಟ್ಟಿದ ಹರ್ಷೋದ್ದಾರ
ಪಲ್ಲಕ್ಕಿ ಹೊತ್ತ ಡಿಸಿಎಂ ಡಿ.ಕೆ.ಶಿವಕುಮಾರ್
ಗವಿಸಿದ್ದೇಶ್ವರ ರಥೋತ್ಸವಕ್ಕೂ ಮುನ್ನ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪಲ್ಲಕ್ಕಿ ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಲ್ಲಕ್ಕಿ ಹೊತ್ತಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಉಪ ಮುಖ್ಯಮಂತ್ರಿಯೊಬ್ಬರು ಗವಿಸಿದ್ದೇಶ್ವರ ಮೂರ್ತಿಯ ವಲ್ಲಕ್ಷ್ಮಿ ಹೊತ್ತಿರುವುದು ಇದೇ ಮೊದಲು, ವೇದಿಕೆಯಲ್ಲಿ ಕುಳಿತಿದ್ದ ಡಿಕಿತಿ ಪಲ್ಲಕ್ಕಿ ಆಗಮಿಸುತ್ತಿದ್ದಂತೆ ಕೆಳಗೆ ಇಳಿದು ಹೋಗಿ, ಲಕ್ಷಾಂತರ ಭಕ್ತರ ಮಧ್ಯೆ ತೆರಳಿ ಪಲ್ಲಕ್ಕಿ ಹೊತ್ತರು. ಇವರಿಗೆ ಸಚಿವ ಶಿವರಾಜ ತಂಗಡಗಿ ಸೇರಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಸಾಥ್ ನೀಡಿದರು.