ಕೊಡಗಿನ ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದ್ದರೂ ಪ್ರಕೃತಿ ವಿರುದ್ಧವಾಗಿ ನಾವು ನಡೆದುಕೊಳ್ಳುತ್ತಿರುವುದರಿಂದ ಅನಾಹುತಗಳು ನಡೆಯುತ್ತಿವೆ ಎಂದು ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೊಟಯ್ಯ ಹೇಳಿದ್ದಾರೆ.
ಶ್ರೀಮಂಗಲ (ಆ.5) : ಕೊಡಗಿನ ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದ್ದರೂ ಪ್ರಕೃತಿ ವಿರುದ್ಧವಾಗಿ ನಾವು ನಡೆದುಕೊಳ್ಳುತ್ತಿರುವುದರಿಂದ ಅನಾಹುತಗಳು ನಡೆಯುತ್ತಿದ್ದು, ಇನ್ನಾದರೂ ಪ್ರಕೃತಿಗೆ ಪೂರಕವಾಗಿ ನಡೆದುಕೊಳ್ಳಬೇಕಾಗಿದೆ. ಹಬ್ಬ ಹರಿದಿನಗಳ ಮಹತ್ವ ಅರಿತು ಆಚರಣೆ ಮಾಡುವುದರ ಮೂಲಕ ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೊಟಯ್ಯ ಹೇಳಿದ್ದಾರೆ.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬುಧವಾರ ಸಂಜೆ ಕ್‌ಗ್ಗಟ್ ನಾಡು ಕೊಡವ ಹಿತ ರಕ್ಷಣಾ ಬಳಗದ ವತಿಯಿಂದ ನಡೆದ 11ನೇ ವರ್ಷದ ಕಕ್ಕಡ ಪದ್ ನೆಟ್‌್ಟನಮ್ಮೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊಡವ ಸಮಾಜಗಳು ಕೇವಲ ಕಲ್ಯಾಣ ಮಂಟಪಕ್ಕೆ ಸೀಮಿತವಾಗಿ ಕೆಲಸ ಮಾಡುವುದನ್ನು ಬಿಟ್ಟು ಕೊಡವ ಜನಾಂಗದ ಅಭಿವೃದ್ಧಿ ಹಿತಾಸಕ್ತಿ ಮತ್ತು ಸಂರಕ್ಷಣೆಗೆ ಒತ್ತು ನೀಡಬೇಕು. ಎಲ್ಲಾ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜನಾಂಗದವರು ಒಂದೇ ವೇದಿಕೆಯಲ್ಲಿ ಬಂದು ರಾಜಕೀಯ ರಹಿತವಾಗಿ ಕೊಡವ ಜನಾಂಗದ ಏಳಿಗೆಗೆ ಶ್ರಮಿಸುವ ಮನಸು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
undefined
Kodava Heritage and Culture: ಕಟ್ಟಡ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಸಿ: ಡಾ.ಎನ್.ವಿ. ಪ್ರಸಾದ್
ಗೋಣಿಕೊಪ್ಪ ಕಾವೇರಿ ಕಾಲೇಜು(Gonikoppa Kaveri Collage) ಆಡಳಿತ ಮಂಡಳಿ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ(Chiriyapanda K.Uttappa) ಮಾತನಾಡಿ, ಪ್ರಸುತ್ತ ಕೊಡವ ಜನಾಂಗದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಇದು ಅತಿ ಸಣ್ಣ ಜನಾಂಗವಾಗಿರುವ ಕೊಡವ ಜನಾಂಗಕ್ಕೆ ಪೂರಕವಾಗಿಲ್ಲ. ಈ ಬಗ್ಗೆ ಕೊಡುವ ಜನಾಂಗದ ಪ್ರಮುಖರು ಬುದ್ಧಿಜೀವಿಗಳು ಚಿಂತಿಸಿ ಜನಾಂಗದ ಹಿತಾಸಕ್ತಿ ಕಾಪಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕ್‌ಗ್ಗಟ್ ಕೊಡವ ಹಿತರಕ್ಷಣ ಬಳಗದ ಉಪಾಧ್ಯಕ್ಷ ಚೆಕ್ಕೆರ ರಮೇಶ್, ಜನಾಂಗದ ಪ್ರತಿಯೊಬ್ಬರು ಕೊಡವ ಸಂಸ್ಕೃತಿ, ಭಾಷೆ, ಆಚಾರ ವಿಚಾರ, ಪದ್ಧತಿ ಪರಂಪರೆ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಸನ್ಮಾನ:
ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಚಿರಿಯಪಂಡ ಮನಿಶ ಲಕ್ಷ್ಮಿ, ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಆಪಟ್ಟಿರ ಕವಿನ ಚಂಗಪ್ಪ ಮತ್ತು ಮುಕಾಟೀರ ತೀರ್ಥ ಕಾವೇರಪ್ಪ ಅವರನ್ನು ಸನ್ಮಾನಿಸಲಾಯಿತು. ಜಭ್ಬೂಮಿ ಸಂಘಟನೆಯ ಸಂಚಾಲಕ ಚೋಟ್ಟೆಕ್ ಮಾಡ ರಾಜೀವ್ ಬೋಪಯ್ಯ ಸ್ವಾಗತಿಸಿದರು. ಕಳ್ಳಿಚಂಡ ದೀನಾ ಪ್ರಾರ್ಥಿಸಿದರು. ಮಲ್ಲಮಾಡ ಪ್ರಭು ಪೂಣಚ್ಚ ವಂದಿಸಿದರು. ಉಳುವಂಗಡ ಲೋಹಿತ್ ಭೀಮಯ್ಯ ನಿರೂಪಿಸಿದರು.
ಕಗ್ಗಟ್ಟುನಾಡು ಕೊಡವ ಹಿತ ರಕ್ಷಣಾ ಬಳಗ ಕಾರ್ಯದರ್ಶಿ ಗಾಣಂಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ಮಾಜಿ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ ಆಲೆಮಾಡ ಸುಧೀರ್, ಕಳ್ಳಿಚಂಡ ಕೃಷ್ಣ, ಆದಂಡ ಸುನಿಲ್, ಚಿರಿಯಪ್ಪಂಡ ಸುನಿ, ಮತ್ರಂಡ ಜಾಕಿ ಉತ್ತಯ್ಯ, ಅಜ್ಜಿಕುಟ್ಟಿರ ಶುಭ ಮಲಚೀರ ಉತ್ತಪ್ಪ ಮತ್ತಿತರರು ಇದ್ದರು.
Sanskrit University In Karnataka : ನಮ್ಮ ನೆಲದ ತುಳು, ಕೊಡವ ಭಾಷೆಯ ಮೇಲೂ ನಿಮ್ಮ ಮಮತೆ ತೋರಿಸಿ!
ಇದಕ್ಕೂ ಮೊದಲು ಪೊನ್ನಂಪೇಟೆ ಕೊಡವ ಸಮಾಜದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ನೂರಾರು ಕೊಡವರು ಸಾಂಪ್ರದಾಯಿಕ ಉಡುಪಿನೊಂದಿಗೆ ಮಹಿಳೆಯರು ಮಕ್ಕಳು ಸೇರಿದಂತೆ ಹಿರಿಯರು ಒಡ್ಡೋಲಗದೊಂದಿಗೆ ಪಂಜಿನ ಮೆರವಣಿಗೆ ನಡೆಸಿದರು. ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಸಾಮೂಹಿಕವಾಗಿ ವಾಲಗತಾಟ್‌ಗೆ ಹೆಜ್ಜೆ ಹಾಕಿ ಗಮನಸೆಳೆದರು.
ಕೊಡವ ನೈಟ್ ಸಿಂಪೋನಿ ತಂಡದಿಂದ ಕೊಡವ ಹಾಡುಗಳ ಆರ್ಕೆಸ್ಟ್ರಾ ಕಾರ್ಯಕ್ರಮ ಜನಮನ ಸೆಳೆಯಿತು. ಆರ್ಕೆಸ್ಟ್ರಾದಲ್ಲಿ ಬೊಪ್ಪಂಡ ಜೆಫ್ರಿ ಅಯ್ಯಪ್ಪ, ಚಕ್ಕೆರ ಪಂಚಮ್ ಬೋಪಣ್ಣ, ಮಾಳಟೀರ ಅಜಿತ್ ಪೂವಣ್ಣ, ಬಟ್ಟಿಯಂಡ ಲಿಖಿತ, ಉಳುವಂಗಡ ಲೋಹಿತ್ ಭೀಮಯ್ಯ ಕೊಡವ ಹಾಡುಗಳನ್ನು ಹಾಡಿ ಮನರಂಜಿಸಿದರು. ಎಲ್ಲರಿಗೂ ಕಕ್ಕಡ ನಮ್ಮೆಯ ವಿಶೇಷ ಖಾದ್ಯ ಮದ್ದುಪುಟ್ಟು ಹಾಗೂ ಸಾಂಪ್ರದಾಯಿಕ ಊಟೋಪಚಾರ ಏರ್ಪಡಿಸಲಾಗಿತ್ತು