ಕೊರೋನಾ ವೈರಸ್ ಹಲವರನ್ನು ಹಲವು ಬಗೆಯಲ್ಲಿ ಕಾಡುತ್ತಿದೆ. ಎಲ್ಲರಿಗೂ ತಮ್ಮ ಕೆಲಸದ ಭಿತಿಯ ಜೊತೆಗೆ ಆರೋಗ್ಯದ ಭೀತಿಯೂ ಸೇರಿದೆ. ಇದೆಲ್ಲ ಕೊನೆಗೊಳ್ಳುವುದು ಯಾವಾಗ?
ಕನ್ಯಾ, ಕಟಕ
ಸುಮಾರು ಮೇ ತಿಂಗಳ ಕೊನೆಯವರೆಗೂ ನಿಮ್ಮ ಭವಿಷ್ಯದಲ್ಲಿ ಅನಿಶ್ಚಿತತೆ ತಲೆದೋರಲಿದೆ. ಇರುವ ಕೆಲಸಕ್ಕೇನೂ ಸಂಚಕಾರ ಬರಲಾರದು. ಆದರೆ ಕೆಲಸದಲ್ಲಿ ಇನ್ನಷ್ಟು ನಿಷ್ಠೆ ತೋರುವ, ಹೊಸ ಕೌಶಲಗಳನ್ನು ಕಲಿತು ನಿಮ್ಮನ್ನು ನೀವೇ ಉತ್ತಮ ಪಡಿಸಿಕೊಳ್ಳುವ ಅಗತ್ಯವಿದೆ. ಇದರಿಂದ ಮುಂದೆ ನಿಮಗೆ ಒಳ್ಳೆಯದೇ ಆಗಬಹುದು. ಮೇ ತಿಂಗಳ ನಂತರ ನಿಮ್ಮ ಭವಿಷ್ಯದಲ್ಲಿ ಉತ್ತಮ ಅವಕಾಶ, ಹೆಚ್ಚಿನ ಆದಾಯ, ಜನಜೀವನದಲ್ಲಿ ಉನ್ನತ ಸ್ಥಾನಮಾನ, ಕುಟುಂಬದಲ್ಲಿ ಸುಖಸಂತೋಷ, ಪ್ರೀತಿಪೂರ್ವಕ ಬಂಧುಗಳ ಒಡನಾಟ ಇವುಗಳೆಲ್ಲ ಪ್ರಾಪ್ತವಾಗಲಿವೆ.
ಮೇಷ, ಸಿಂಹ
ನಿಮಗೆ ಜೂನ್ ಮಧ್ಯಭಾಗದವರೆಗೆ ಸ್ವಲ್ಪ ಸಂಕಷ್ಟವಿದೆ. ಹಣಕಾಸಿನ ಸ್ಥಿತಿಯಲ್ಲಿ ಏರುಪೇರು ಆಗಬಹುದು. ಕಾಲಿಗೆಳೆದರೆ ತಲೆಗಿಲ್ಲ, ತಲೆಗೆಳೆದರೆ ಕಾಲಿಗಿಲ್ಲ ಎನ್ನುವ ಪರಿಸ್ಥಿತಿ ಬರಬಹುದು. ಹೊರಗೆ ಸೇವಿಸಿದ ಆಹಾರ ಅಜೀರ್ಣಕ್ಕೆ ಕಾರಣವಾಗಬಹುದು. ಅತಿಶೀತದ ಆಹಾರ ಸೇವನೆಯಿಂದ ಸಂಕಷ್ಟ. ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳುವ ಅಗತ್ಯವಿದೆ. ಸರಕಾರಿ ಕೆಲಸಗಳು ಯಾವುದೂ ಆಗದೆ ಹೋಗಬಹುದು. ವಿವಾಹ ಯೋಗ ಹೊಂದಿದವರಿಗೂ ಕಂಕಣಭಾಗ್ಯ ಅನಿವಾರ್ಯ ಕಾರಣಗಳಿಂದ ಮುಂದೆ ಹೋಗಬಹುದು. ಜೂನ್ ಬಳಿಕ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳಲ್ಲಿ ಸುಧಾರಣೆ ಆಗಲಿದೆ.
ಕಿಲ್ಲರ್ ಕೊರೋನಾ ಬಗ್ಗೆ ಕೋಡಿಶ್ರೀ ಭವಿಷ್ಯ; ಒಂದು ದೇಶವೇ ಸಂಪೂರ್ಣ ನಾಶ ..
ಮಿಥುನ, ತುಲಾ
ನಿಮ್ಮ ಉದ್ಯೋಗ ಸ್ಥಾನದಲ್ಲಿ ದೊಡ್ಡ ಬದಲಾವಣೆ ಆಗಬಹುದು. ನಿಮಗೆ ಕೆಲಸ ಕೊಟ್ಟ ಸಂಸ್ಥೆಗಳೇ ನಷ್ಟ ಹಾಗೂ ಸಂಕಷ್ಟದಲ್ಲಿ ಇರಬಹುದು. ಆದ್ದರಿಂದ ನೀವೂ ಮಿತವ್ಯಯ ಮಾಡುವುದು ಕಲಿಯಬೇಕಾದೀತು. ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕಾದೀತು. ಸಂಬಳದಲ್ಲಿ ಕಡಿತವಾಗುವ ಸಾಧ್ಯತೆ ಇದೆ. ಆರೋಗ್ಯ ವಿಮೆ ನಿಮ್ಮಲ್ಲಿದ್ದರೆ ಅದನ್ನು ಭದ್ರಪಡಿಸಿಕೊಳ್ಳಿ. ಯಾಕೆಂದರೆ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಹೆಚ್ಚಿನ ಅಪಾಯವೇನೂ ಆಗಲಾರದು. ಜೂನ್ ತಿಂಗಳ ಕೊನೆಯ ವೇಳೆಗೆ ನಿಮ್ಮ ಸಂಕಷ್ಟಗಳು ಕರಗಿ, ಒಳ್ಳೆಯದಾದೀತು. ಕೆಲಸದಲ್ಲೂ ಉತ್ತರೋತ್ತರ ಶ್ರೇಯಸ್ಸು.
ವೃಶ್ಚಿಕ, ಧನು
ನಿಮ್ಮ ಮನೆತನದ ಮೂಲ ದೇವರು, ಮನೆದೇವರು, ಗ್ರಾಮದೇವರುಗಳೆಲ್ಲ ನಿಮ್ಮ ಆರಾಧನೆಗೆ ಕಾಯುತ್ತಿರುವಂತಿದೆ. ಬಹುಶಃ ನೀವು ಪ್ರತಿವರ್ಷ ನೀಡಬೇಕಾದ್ದನ್ನು ಅವರಿಗೆ ನೀಡಿಲ್ಲ, ಅಥವಾ ನಿಮ್ಮ ಧರ್ಮಶ್ರದ್ಧೆಯಲ್ಲಿ ಸ್ವಲ್ಪ ಲೋಪವಾಗಿದೆ. ಬದುಕಿನಲ್ಲಿ ಎಷ್ಟೇ ಕಷ್ಟ ಬರಲಿ, ಧರ್ಮಶ್ರದ್ಧೆ, ದೈವಶ್ರದ್ಧೆಗಳನ್ನು ಬಿಡುವುದು ಯುಕ್ತವಲ್ಲ. ನನ್ನ ಸಂಕಷ್ಟಗಳಿಗೆ ನನ್ನ ಕರ್ಮಗಳೇ ಕಾರಣ ಎಂದು ಅರಿತು, ದೇವರು ನನ್ನ ಪರೀಕ್ಷೆಗಾಗಿಯೇ ಇವನ್ನೆಲ್ಲ ಒಡ್ಡಿದ್ದಾನೆ ಎಂಬುದುನ್ನು ತಿಳಿದು ವ್ಯವಹಾರ ಮಾಡಿದರೆ ನಿಮಗೆ ಲಾಭ. ಮೇ ತಿಂಗಳ ಕೊನೆಯಲ್ಲಿ ನಿಮ್ಮ ಕಷ್ಟಗಳು ಮುಗಿಯುತ್ತವೆ. ಉದ್ಯಮಿಗಳು ನಿಟ್ಟುಸಿರು ಬಿಡಬಹುದು.
ಪ್ರಧಾನಿ ಮೋದಿಯವರಿಗೆ ಬೆಸ ಸಂಖ್ಯೆ ಮೇಲೇಕೆ ಅಷ್ಟೊಂದು ಪ್ರೀತಿ?
ಮಕರ, ಕುಂಭ
ನಿಮ್ಮ ಗ್ರಹಗಳು ನಿಮ್ಮ ಬಗ್ಗೆ ಕರುಣೆಯನ್ನೇ ಹೊಂದಿವೆ. ಆದರೆ ಏಪ್ರಿಲ್, ಮೇ ತಿಂಗಳುಗಳಲ್ಲಿ ಮಾತ್ರ ನಿಮ್ಮ ಜಾತಕದ ಗ್ರಹಗಳು ಯರ್ರಾಬಿರ್ರಿಯಾಗಿ ವರ್ತಿಸಿ ನಿಮ್ಮನ್ನು ಗೊಂದಲದಲ್ಲಿ ಕೆಡವಲಿವೆ. ಯಾವ ಕೆಲಸಗಳೂ ಇಲ್ಲದೆ ಹೈರಾಣಾಗಬೇಕಾದೀತು. ಖರ್ಚು ಮಾಡೋಣ ಎಂದರೆ ಕೈಯಲ್ಲಿ ಹಣವಿಲ್ಲ ಅಂತಾದೀತು. ಸುಮ್ಮನೆ ಕೂರೋಣ ಎಂದರೆ ಆರೋಗ್ಯ ಸಹಕರಿಸದೆ ಹೋದೀತು. ಇವೆಲ್ಲವೂ ಗ್ರಹಚಾರದ ಫಲವೇ ಹೊರತು ಬೇರೇನಲ್ಲ. ಆದರೆ ಎಲ್ಲ ಕಷ್ಟಗಳಿಗೂ ಒಂದು ಕೊನೆಯಿದೆ. ಜೂನ್ ತಿಂಗಳಲ್ಲಿ ಎಲ್ಲ ಉದ್ಯಮಗಳು ಮತ್ತೆ ಚುರುಕಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದಾಗ ನಿಮ್ಮ ದುಗುಡಗಳು ದೂರವಾಗುತ್ತವೆ.
ವೃಷಭ, ಮೀನ
ಸಮಯ ನಿಮ್ಮನ್ನು ಪರೀಕ್ಷೆ ಮಾಡುತ್ತಿದೆ. ಸಮಯ ಎಂದರೆ ಸೂರ್ಯ. ಸೂರ್ಯ ಯಾರು ಗೊತ್ತೇ, ಶನಿದೇವರು ಮತ್ತು ಯಮದೇವರ ತಂದೆ. ಇವರಿಬ್ಬರ ಸ್ವಭಾವವೂ ಸೂರ್ಯನಲ್ಲಿದೆ. ಶನಿದೇವರಂತೆ ಆತ ಕಷ್ಟವನ್ನೂ ಕೊಡುತ್ತಾನೆ ಸುಖವನ್ನೂ ಕೊಡುತ್ತಾನೆ. ಸುಖ ಬಂದಾಗ ದೇವರನ್ನು ಮರೆಯಬಾರದು ಅಷ್ಟೇ. ಜುಲೈ- ಆಗಸ್ಟ್‌ವರೆಗೂ ನಿಮ್ಮ ಸುಖದ ದಿನಗಳಿಗಾಗಿ ನೀವು ಕಾಯಬೇಕಾದೀತು. ಮಧ್ಯ ಮಧ್ಯೆ ಸಂಕಷ್ಟ ಉಲ್ಬಣಿಸಬಹುದು. ಕಷ್ಟವಾದೀತು, ಆದರೆ ಸಹಿಸಿಕೊಳ್ಳಲೇಬೇಕು. ಈಸಬೇಕು ಇದ್ದು ಜೈಸಬೇಕು ಎಂಬ ಗಾದೆ ಹುಟ್ಟಿಕೊಂಡಿರುವುದು ಇಂಥದ್ದರಿಂದಲೇ ಅಲ್ವೇ.