ಒಳ್ಳೆ ಸ್ನೇಹಿತರಲ್ಲಿ ಇರಬೇಕಾದ ಗುಣಗಳ ಬಗ್ಗೆ ಚಾಣಾಕ್ಯ ಹೇಳಿದ್ದಿಷ್ಟು!

By Suvarna News  |  First Published Dec 13, 2023, 2:20 PM IST

ಫ್ರೆಂಡ್ಸ್‌ ಏನೋ ಬಹಳ ಜನ ಇರ್ತಾರೆ. ಆದರೆ ನಿಜವಾದ ಫ್ರೆಂಡ್ಸ್‌ ಬಳಿ ಇರಲೇ ಬೇಕಾದ ಗುಣಗಳ ಬಗ್ಗೆ ಚಾಣಾಕ್ಯ ಹೇಳುತ್ತಾರೆ.


ಎಷ್ಟೋ ಜನ ಕ್ಲೋಸ್ ಆಗ್ತಾರೆ. ಬಹಳ ಬೇಗ ಫ್ರೆಂಡ್ಸ್ ಆಗಿ ಬಿಡ್ತಾರೆ. ದಿನೇ ದಿನೇ ಹತ್ತಿರ ಆಗ್ತಾರೆ. ಆದರೆ ಆ ಸ್ನೇಹ ಯಾವುದೇ ಉದ್ದೇಶದ ಹಿನ್ನೆಲೆ ಇರೋದಾ, ಅದರ ಹಿಂದೆ ದುರುದ್ದೇಶ ಇದೆಯಾ? ಇವರ ಜೊತೆಗೆ ಯಾವ ಲೆವೆಲ್‌ವರೆಗೆ ಫ್ರೆಂಡ್‌ಶಿಪ್ ಮೈಂಟೇನ್ ಮಾಡ್ಬೇಕು, ಬಾಯ್ತಪ್ಪಿ ಆಡಿದ ಯಾವುದೋ ಮಾತು ಈ ಫ್ರೆಂಡ್‌ ಅನಿಸಿಕೊಂಡವರ ಕಾರಣದಿಂದ ಏನಾದರೂ ಅನಾಹುತ ಮಾಡಿಬಿಟ್ಟರೆ ಹೀಗೆ ಹತ್ತಾರು ಪ್ರಶ್ನೆಗಳು. ಆದರೂ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಉತ್ತಮ ಸಂಬಂಧಗಳು ಬಹಳ ಮುಖ್ಯ. ಉತ್ತಮ ಸಂಪರ್ಕ ಹೊಂದಿರುವ ಜನರು ನಿಮ್ಮ ಜೀವನದ ಕಷ್ಟಗಳ ಮೂಲಕ ನಿಮ್ಮೊಂದಿಗೆ ಬರುತ್ತಾರೆ. ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯಾಗಲು ಉತ್ತಮ ಸಂಬಂಧಗಳು ಅತ್ಯಗತ್ಯ. ಅದಕ್ಕಾಗಿಯೇ ಉತ್ತಮ ಸಂಬಂಧಗಳನ್ನು ಎಂದಿಗೂ ಕೆಡಿಸಿಕೊಳ್ಳಬಾರದು. ಮನುಷ್ಯರು ಸಂಬಂಧಗಳನ್ನು ಗಟ್ಟಿಯಾಗಿ ಇರಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ.

ಎಲ್ಲರಿಗೂ ಗೊತ್ತಿರುವ ಮೊದಲ ಸತ್ಯ ಕೆಟ್ಟದಿನಗಳಲ್ಲಿ ಜೊತೆಗಿರುವವನೇ ನಿಜವಾದ ಫ್ರೆಂಡ್. ನಿಜವಾದ ಸ್ನೇಹಿತರು ನಮ್ಮ ಒಳ್ಳೆಯ ಮತ್ತು ಕೆಟ್ಟ ದಿನಗಳಲ್ಲಿ ನಮಗೆ ಬೆಂಬಲ ನೀಡುತ್ತಾರೆ ಮತ್ತು ಸಹಾಯ ಮಾಡುತ್ತಾರೆ. ನಿಮ್ಮ ಕೆಟ್ಟ ಸಮಯದಲ್ಲಿ ನಿಸ್ವಾರ್ಥ ಮನೋಭಾವದಿಂದ ನಿಮ್ಮ ಬೆಂಬಲಕ್ಕೆ ನಿಂತಿರುವ ಹಾಗೂ ನಿಲ್ಲುವವನು ನಿಜವಾದ ಸ್ನೇಹಿತ. ಅದನ್ನು ಹೊರತು ಪಡಿಸಿ ಸಂತೋಷದ ಸಮಯದಲ್ಲಿ ಮಾತ್ರ ಜೊತೆ ಬರುವವನು ಖಂಡಿತ ಉತ್ತಮ ಸ್ನೇಹಿತನಾಗಲು ಸಾಧ್ಯವಿಲ್ಲ. ಆದ್ದರಿಂದ, ಯಾವುದೇ ವ್ಯಕ್ತಿಯನ್ನು ನಿಮ್ಮ ಸ್ನೇಹಿತರಾಗಿಸಿಕೊಳ್ಳುವ ಮೊದಲು, ಅವರನ್ನು ಸರಿಯಾಗಿ ಪರಿಶೀಲಿಸಿ. ಅವರು ತನ್ನ ಸ್ವಾರ್ಥವನ್ನು ಪೂರೈಸಿಕೊಳ್ಳಲು ನಿಮ್ಮೊಂದಿಗೆ ಸ್ನೇಹ ಮಾಡುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ನಿಮ್ಮ ನೋವಿನಲ್ಲಿ ಅವನು ನಿಮ್ಮನ್ನು ಬೆಂಬಲಿಸಿ, ಸ್ಪಂದಿಸಿ, ನಿಮ್ಮೊಂದಿಗೆ ನಿಲ್ಲದ ಸ್ನೇಹಿತ ಎಂದೆಂದಿಗೂ ನಿಮಗೆ ಒಳ್ಳೆಯ ಸ್ನೇಹಿತ ಎನ್ನಿಸಿಕೊಳ್ಳಲು ಸಾಧ್ಯವಿಲ್ಲ, ಅಲ್ಲದ ಅಂತಹವರೊಂದಿಗೆ ಸ್ನೇಹವನ್ನು ಮುಂದುವರಿಸುವುದು ಒಳಿತಲ್ಲ ಎಂದು ಚಾಣಾಕ್ಯ ಹೇಳುತ್ತಾರೆ. ಅದಕ್ಕಾಗಿಯೇ ನೀವು ನಿಜವಾದ ಸ್ನೇಹಿತನನ್ನು ಹುಡುಕುವ ಮತ್ತು ಅವನೊಂದಿಗೆ ಸಮಯ ಕಳೆಯುವತ್ತ ಗಮನ ಹರಿಸಬೇಕು. ಆಗ ನಿಮ್ಮ ನಿಜವಾದ ಸ್ನೇಹಿತನನ್ನು ನೀವು ಹೆಚ್ಚು ಗೌರವಿಸುತ್ತೀರಿ, ನಿಮ್ಮ ಸ್ನೇಹವು ಆಳವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

Tap to resize

Latest Videos

ಕರ್ಕಾಟಕ ಮತ್ತು ವೃಶ್ಚಿಕಗೆ ಶನಿ ತೊಂದರೆಯಿಂದ ಮುಕ್ತಿ...ಆದರೆ ಈ ರಾಶಿಯವರು ಎಚ್ಚರ..!

ಯಾವಾಗಲೂ ನಮ್ಮ ಯೋಚನೆ, ಚಿಂತನೆಗಳನ್ನು ವಿರೋಧಿಸುವವರ ಜೊತೆ ಸ್ನೇಹ (friendship) ಬೆಳೆಸಬೇಡಿ ಎಂದು ಚಾಣಾಕ್ಯ ಹೇಳುತ್ತಾರೆ. ಇವರು ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತಾರೆ. ನಮ್ಮಲ್ಲಿ ನೆಗೆಟಿವಿಟಿ ತುಂಬುತ್ತಾರೆ.

ಸಮಾನ ಮನಸ್ಕರಲ್ಲದವರ ಜೊತೆ ಸ್ನೇಹ ಬೇಡ ಎಂದು ಅವರು ಹೇಳಿದ್ದಾರೆ. ಹೀಗಿದ್ದರೆ ಸ್ನೇಹ ಹಾಳಾಗುತ್ತದೆ. ನಮ್ಮಲ್ಲಿ ಮಾತನಾಡಲು ಆಸಕ್ತಿಕರ (interesting) ಅಂಶವೇ ಇಲ್ಲದೇ ಹೋದಾಗ ಆ ಸ್ನೇಹ ಬಹುಕಾಲ ಉಳಿಯದು.

ಶ್ರೀಮಂತರ ಜೊತೆ ಸ್ನೇಹ ಬೆಳೆಸುವವರ ಹಿಂದೆ ಒಂದು ರೀತಿಯ ಸ್ವಾರ್ಥವಿರಬಹುದು. ಅವನು ತನ್ನ ಸ್ನೇಹಿತನ ಹಣದ ಲಾಭವನ್ನು ಪಡೆಯುವ ಬಗ್ಗೆ ಯೋಚಿಸಬಹುದು. ಇಂತಹ ಸ್ನೇಹಿತರ ಬಗ್ಗೆ ಜಾಗೃತೆಯಿಂದಿರಿ. ಇದರ ಜೊತೆಗೆ ಇನ್ನೊಂದು ಮಾತನ್ನೂ ಹೇಳಿದ್ದಾರೆ, ನಾವು ಎಂದಿಗೂ ವಿರುದ್ಧ ಸ್ವಭಾವದ ಜನರೊಂದಿಗೆ ಸ್ನೇಹಿತರಾಗಬಾರದು. ಏಕೆಂದರೆ ಹಾವುಗಳು, ಆಡುಗಳು ಮತ್ತು ಹುಲಿಗಳು ಎಂದಿಗೂ ಪರಸ್ಪರ ಸ್ನೇಹ ಬೆಳೆಸಲು ಸಾಧ್ಯವಿಲ್ಲ.

ಯಾವುದೇ ಸ್ನೇಹಿತನನ್ನು ಎಂದಿಗೂ ನಂಬಬೇಡಿ ಕಣ್ಣು ಮುಚ್ಚಿ ನಂಬಬೇಡಿ ಎಂದು ಚಾಣಾಕ್ಯ (Koutilya) ಹೇಳುತ್ತಾರೆ. ಏಕೆಂದರೆ ಸಂಬಂಧಗಳಲ್ಲಿ ಸಮಸ್ಯೆ ಉಂಟಾದಾಗ, ಆ ಸ್ನೇಹಿತ ನಿಮ್ಮ ಎಲ್ಲಾ ರಹಸ್ಯಗಳನ್ನು ಬಹಿರಂಗಪಡಿಸಬಹುದು. ನಿಮ್ಮ ಎದುರಿಗೆ ಅತಿಯಾಗಿ ಹೊಗಳುವವರ ಜೊತೆ ಸ್ನೇಹ ಮಾಡಿಕೊಳ್ಳುವ ಮುನ್ನ ಎಚ್ಚರದಿಂದಿರಿ. ಅಂತಹವರು ಜೀವನದಲ್ಲಿ ಮೋಸ ಮಾಡುವ ಸಾಧ್ಯತೆ ಹೆಚ್ಚು.

ಧನು ಸಂಕ್ರಾಂತಿಯಿಂದ ರಾಜಯೋಗ,ವರ್ಷಾಂತ್ಯದಲ್ಲಿ ಈ 5 ರಾಶಿಗೆ ದುಪ್ಪಟ್ಟು ಲಾಭ ಲೈಪ್‌ ಜಿಂಗಾಲಾಲ

ಇಷ್ಟೆಲ್ಲ ಫಿಲ್ಟರ್ ಆದಮೇಲೆ ಸಿಗೋ ಒಳ್ಳೆಯ ಸ್ನೇಹಿತರನ್ನು ರಕ್ಷಿಸುವುದು ಸ್ನೇಹಿತರಾಗಿ ನಮ್ಮ ಕರ್ತವ್ಯ (responsibility) ಎಂದು ಚಾಣಕ್ಯ ಹೇಳುತ್ತಾರೆ. ನಿಜವಾದ ಸ್ನೇಹಿತ ಸಂತೋಷದ ಸಮಯದಲ್ಲಿ ಮತ್ತು ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಲ್ಲುತ್ತಾನೆ. ನಾವು ಅವನ ಪರವಾಗಿ ನಿಲ್ಲಬೇಕು. ಸ್ನೇಹಿತನನ್ನು ತೊಂದರೆಯಿಂದ (problems) ದೂರವಿಡುವುದೇ ನಿಜವಾದ ಸ್ನೇಹಿತನ ಕೆಲಸ ಎಂದು ಚಾಣಕ್ಯ ಹೇಳಿದ್ದರು.

click me!