ಶ್ರೀಮಂತರಲ್ಲಿ ಈ ರಹಸ್ಯ ಗುಣಗಳಿರ್ತವೆ, ಆದ್ದರಿಂದಲೇ ಅವರು ಶ್ರೀಮಂತರಾಗಿರ್ತಾರೆ ಅಂದ ಚಾಣಕ್ಯ!

By Suvarna News  |  First Published Feb 25, 2024, 10:13 AM IST

ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ಶ್ರೀಮಂತರಾಗುವವರಲ್ಲಿ ಈ ಕೆಲವು ರಹಸ್ಯ ಗುಣಗಳು ಹುದುಗಿರುತ್ತವೆ. ಯಾವುವು ಅವು?


ಶ್ರೀಮಂತರನ್ನು ನೀವು ಸರಿಯಾಗಿ ಗಮನಿಸಿದರೆ ಅವರಲ್ಲಿ ಕೆಲವು ಮುಖ್ಯ ಗುಣಗಳಿರುವುದನ್ನು ನೀವು ಕಾಣಬಹುದು. ನೀವೂ ಶ್ರೀಮಂತರಾಗಬಯಸಿದ್ದರೆ, ಯಶಸ್ಸನ್ನು ಸಾಧಿಸಬೇಕಿದ್ದರೆ, ನಿಮ್ಮಲ್ಲಿ ಆ ಗುಣಗಳು ಅಗತ್ಯವಾಗಿ ಇರಲೇಬೇಕು ಅಂತಾರೆ ಚಾಣಕ್ಯ. ಯಾಕೆಂದರೆ ಶ್ರೀಮಂತಿಕೆಯ ರಹಸ್ಯವೇ ಅದು. ಈ ಗುಣಗಳು ಇಲ್ಲವಾದರೆ ಲಕ್ಷ್ಮಿ ಒಲಿಯುವುದಿಲ್ಲ ಎಂಬುದು ಚಾಣಕ್ಯ ಅಭಿಪ್ರಾಯ. ಹಾಗಾದರೆ ಯಾವುದು ಆ ಗುಣಗಳು? ಆ ಗುಣರಹಸ್ಯಗಳು ಇಲ್ಲಿವೆ:

ದಿನಕ್ಕೆ ಹದಿನೆಂಟು ಗಂಟೆ ದುಡಿಮೆ: ಚಾಣಕ್ಯರ ಪ್ರಕಾರ, ಓರ್ವ ವ್ಯಕ್ತಿ ಶ್ರೀಮಂತನಾಗಿದ್ದರೆ, ಅವನು ದಿನಕ್ಕೆ ಕನಿಷ್ಠ ಹದಿನೆಂಟು ಗಂಟೆ ದುಡಿಯುತ್ತಾನೆ. ಯಾಕೆಂದರೆ ಧನವಂತನಾಗಬೇಕಾದರೆ ಅವನು ಕಠಿಣ ಶ್ರಮದ ಮಾರ್ಗವನ್ನು ಪಾಲಿಸಿದ್ದಾನೆ. ಯಾವ ವ್ಯಕ್ತಿ ಕಷ್ಟಪಟ್ಟು ಕೆಲಸವನ್ನು ಮಾಡಿದ್ದಾನೋ ಆ ವ್ಯಕ್ತಿ ಜೀವನದಲ್ಲಿ ಬಡತನವನ್ನು ಅನುಭವಿಸಲು ಸಾಧ್ಯವೇ ಇಲ್ಲ. ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ ವ್ಯಕ್ತಿ ಬಡವನಾಗಿದ್ದರೂ ಅದು ತಾತ್ಕಾಲಿಕ. ಲಕ್ಷ್ಮಿ ದೇವಿಯು ಇಂತಹ ವ್ಯಕ್ತಿಗಳ ಮೇಲೆ ತನ್ನ ವಿಶೇಷ ಅನುಗ್ರಹವನ್ನು ನೀಡಿರುತ್ತಾಳೆ.

Tap to resize

Latest Videos

ಗುರಿಯತ್ತಲೇ ನೆಟ್ಟ ದೃಷ್ಟಿ (Ambition): ಮಿಲಿಯನೇರ್‌ಗಳು ಸಣ್ಣ ವಯಸ್ಸಿನಿಂದಲೇ ತಮ್ಮ ಗುರಿ ನಿಗದಿಪಡಿಸಿಕೊಂಡು ಅದರತ್ತಲೇ ಧಾವಿಸಿರುವುದನ್ನು ನೀವು ಗಮನಿಸಬಹುದು. ಯಶಸ್ವಿ ವ್ಯಕ್ತಿಯಾಗಬೇಕಾದರೆ ಆ ವ್ಯಕ್ತಿಗೆ ಹಿಂದೆ ಗುರುವಿರಬೇಕು, ಮುಂದೆ ಗುರಿಯಿರಬೇಕು. ಹೀಗಿದ್ದಾಗ ಮಾತ್ರ ಅವನು ಯಶಸ್ಸನ್ನು ಗಳಿಸುತ್ತಾನೆ. ಗುರಿಯನ್ನಿಟ್ಟುಕೊಂಡು ಆ ಗುರಿಯೊಂದಿಗೆ ನಾವು ಶ್ರಮ ವಹಿಸಿ ಕೆಲಸ ಮಾಡುವುದರಿಂದ ಗುರಿಯನ್ನು ಸುಲಭವಾಗಿ ಮುಟ್ಟಬಹುದು ಹಾಗೂ ಆ ಗುರಿಯು ಆತನನ್ನು ಬಡತನದಿಂದ ಮುಕ್ತಗೊಳಿಸಲೂ ಸಹಕಾರಿಯಾಗಿರುತ್ತದೆ.

ಪ್ರಾಮಾಣಿಕತೆ (Honesty): ಶ್ರೀಮಂತರು ಪ್ರಾಮಾಣಿಕರಾಗಿರುತ್ತಾರೆ. ಕುಬೇರನಾಗಲು ಕೆಲಸದಲ್ಲಿ ಕಠಿಣ ಪರಿಶ್ರಮ ಮಾತ್ರವಲ್ಲ, ಪ್ರಾಮಾಣಿಕವಾಗಿ ಕೆಲಸ ಮಾಡುವ ಗುಣವೂ ಇರಬೇಕು. ಕೆಲಸದ ವಿಚಾರದಲ್ಲಿ ಯಾವ ವ್ಯಕ್ತಿ ಪ್ರಾಮಾಣಿಕನಾಗಿರುತ್ತಾನೋ ಅವನು ಎಂದಿಗೂ ತನ್ನ ಕೆಲಸದಲ್ಲಿ ಸೋಲನ್ನು ಅನುಭವಿಸಲು ಸಾದ್ಯವಿಲ್ಲ. ಪ್ರಾಮಾಣಿಕತೆಯಿಂದ ಯಾವುದೇ ಕೆಲಸ ಮಾಡಿದರೂ ಅದು ಓರ್ವ ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

Chanakya Niti: ಬುದ್ದಿವಂತ ಜನರು ಯಾವತ್ತೂ ಈ ಕೆಲಸಗಳನ್ನು ಮಾಡಬಾರದಂತೆ !

ಜವಾಬ್ದಾರಿ ಹೊರುವ ಗುಣ: ಶ್ರೀಮಂತರು ಹೊಣೆ ಹೊರುವವರು. ಯಾವ ವ್ಯಕ್ತಿಯ ಹೆಗಲ ಮೇಲೆ ಜವಾಬ್ದಾರಿ ಎನ್ನುವಂತಹದ್ದು ಇರುತ್ತದೆಯೋ ಆ ವ್ಯಕ್ತಿ ಖಂಡಿತವಾಗಿಯೂ ತನ್ನೆಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು, ಪ್ರಗತಿಯನ್ನು ಪಡೆದುಕೊಳ್ಳುತ್ತಾನೆ. ಸೂಕ್ತ ಸಮಯದಲ್ಲಿ ತನ್ನ ಜವಾಬ್ದಾರಿಗಳನ್ನು ಪೂರ್ಣಗೊಳಿಸುವ ವ್ಯಕ್ತಿ ಎಂದಿಗೂ ಬಡವನಾಗಲು ಸಾಧ್ಯವಿಲ್ಲ. ಒಂದು ವೇಳೆ ಇಂತಹ ವ್ಯಕ್ತಿಗಳಿಗೆ ಬಡತನ ಎದುರಾದರೂ ಅವರಿಗೆ ಅದನ್ನು ನಿಭಾಯಿಸುವ ಸಾಮರ್ಥ್ಯವಿರುತ್ತದೆ.

ಶಿಸ್ತು ಮತ್ತು ತಾಳ್ಮೆ (Desciplene and Patience): ಶ್ರೀಮಂತರಲ್ಲಿ ಶಿಸ್ತು ಹಾಗೂ ತಾಳ್ಮೆಯನ್ನು ಹೊಂದಿರುತ್ತಾರೆ. ಶ್ರೀಮಂತನಾಗಲು ಬಯಸುವ ವ್ಯಕ್ತಿ ತನ್ನಲ್ಲಿ ಶಿಸ್ತು ಮತ್ತು ತಾಳ್ಮೆಯನ್ನು ಅಳವಡಿಸಿಕೊಳ್ಳಬೇಕು. ಶ್ರೀಮಂತರಾಗಲು ಇದು ಅತ್ಯಂತ ಮುಖ್ಯವಾದ ಅಂಶ. ತನಗೆದುರಾದ ಕೆಟ್ಟ ಸಮಯವನ್ನು ತಾಳ್ಮೆಯಿಂದ ಎದುರಿಸುವವನು ತನ್ನ ಬಡತನವನ್ನೂ ತಾಳ್ಮೆಯಿಂದ ಎದುರಿಸುತ್ತಾನೆ.

ಉತ್ತಮ ನಡವಳಿಕೆ (good Behaviour): ಶ್ರೀಮಂತರಲ್ಲಿರುವ ಉತ್ತಮ ನಡವಳಿಕೆಯ ಗುಣ ಇತರರಿಗೆ ಮಾದರಿಯಾಗಿರುತ್ತದೆ. ಒಳ್ಳೆಯ ನಡವಳಿಕೆಯುಳ್ಳ ವ್ಯಕ್ತಿಯು ಸಮಾಜದಲ್ಲಿ ಉನ್ನತ ಸ್ಥಾನ - ಮಾನವನ್ನು, ಗೌರವವನ್ನು ಪಡೆದುಕೊಳ್ಳುತ್ತಾನೆ. ಇದು ಅವನ ಯಶಸ್ಸಿಗೂ ಪೂರಕವಾಗಿರುತ್ತದೆ. ನಡವಳಿಕೆಯಲ್ಲಿ ನಮ್ಮ ಮಾತುಗಳು ಕೂಡ ಸೇರಿಕೊಂಡಿರುತ್ತದೆ. ಮಧುರವಾದ ವ್ಯಕ್ತಿಯೂ ಕೂಡ ಶ್ರೀಮಂತನಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವ 'ಮಹಿಳೆ'ಗೆ ಏನಾಗುತ್ತೆ ಗೊತ್ತಾ?
 

 

click me!