ಚಾಣಕ್ಯ ಹೇಳ್ತಾನೆ, ನೀವು ಸಕ್ಸಸ್‌ಫುಲ್‌ ಆಗಬೇಕಾದರೆ ಈ ಯಾವುದಾದರೂ ಒಂದು ಪ್ರಾಣಿ ಗುಣ ನಿಮ್ಮಲ್ಲಿರಲಿ!

By Suvarna News  |  First Published Jan 9, 2024, 3:03 PM IST

ಜೀವನದಲ್ಲಿ ಯಶಸ್ಸಿನ ತುತ್ತ ತುದಿಗೆ ಏರಿ ಕೂತುಕೊಳ್ಳಬೇಕಿದ್ದರೆ ಚಾಣಕ್ಯ ಹೇಳುವಂತೆ ಈ ಕೆಳಗಿನ ಯಾವುದಾದರೂ ಒಂದು ಪ್ರಾಣಿಯ ಗುಣ ಅಥವಾ ಇವುಗಳಲ್ಲಿ ಹಲವು ಪ್ರಾಣಿಗಳ ಒಂದೊಂದು ಗುಣಗಳ ಮಿಶ್ರಣ ನಿಮ್ಮಲ್ಲಿ ಇರಬೇಕಂತೆ. ಯಾವುದು ಆ ಗುಣ ನೋಡೋಣ.


ನೀವು ಕೆಲವು ಪ್ರಾಣಿಗಳನ್ನು ಗಮನಿಸಿರಬಹುದು. ಅವುಗಳ ಗುಣ ನಿಮ್ಮನ್ನು ಆಕರ್ಷಿಸಿರಬಹುದು. ಆದರೆ ಆ ಗುಣ ಅಳವಡಿಸಿಕೊಂಡರೆ ನಿಮ್ಮ ಹಲವು ಸಮಸ್ಯೆಗಳು ಸಾಲ್ವ್ ಆಗುತ್ತವೆ, ಜೀವನದಲ್ಲಿ ಯಶಸ್ಸು- ಶ್ರೀಮಂತಿಕೆ- ಆನಂದ ನಿಮ್ಮದಾಗುತ್ತದೆ ಎಂಬುದು ನಿಮಗೆ ಗೊತ್ತಿದೆಯೇ? ಹೌದು, ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ಅದು ನಿಜ. ಯಾವ ಪ್ರಾಣಿಯಿಂದ ಯಾವ ಗುಣವನ್ನು ನಾವು ಕಲಿಯಬೇಕು ಈಗ ನೋಡೋಣ.

ಗೂಬೆಯ ವಿವೇಕ
ಗೂಬೆಯ ವಿವೇಕಿ, ಬುದ್ಧಿವಂತ. ತನಗೆ ಹಗಲಿನಲ್ಲಿ ಕಣ್ಣು ಕಾಣವುದಿಲ್ಲ ಎಂಬುದು ಅದಕ್ಕೆ ಗೊತ್ತು. ಆದ್ದರಿಂದ ಕತ್ತಲಾದ ಬಲಿಕವೇ ಬೇಟೆಗೆ ಹೊರಡುತ್ತದೆ. ನಿಖರವಾಗಿ ಗುರಿಯಿಟ್ಟು ದಾಳಿ ನಡೆಸಿ ತನಗೆ ಬೇಕಾದ್ದನ್ನು ದಕ್ಕಿಸಿಕೊಳ್ಳುತ್ತದೆ. ಪಂಚತಂತ್ರ ಕತೆಗಳಲ್ಲಿ ಬರುವ ಗೂಬೆಗಳು ಎಷ್ಟು ಬುದ್ಧಿವಂತ ಎಂದರೆ, ಇತರ ಪ್ರಾಣಿಗಳು ಅದರಿಂದ ನೀತಿಪಾಠ ಹೇಳಿಸಿಕೊಳ್ಳುತ್ತವೆ. ತನಗೆ ಸಂಬಂಧವಿಲ್ಲದ ಜಾಗದಲ್ಲಿ ಗೂಬೆ ಎಂದಾದರೂ ಕಾಣಿಸಿಕೊಂಡಿದ್ದನ್ನು ನೀವು ನೋಡಿದ್ದೀರಾ?

Tap to resize

Latest Videos

ಸಿಂಹದ ಧೈರ್ಯ
ಜೀವನದಲ್ಲಿ ಬೇಕಾದ್ದನ್ನು ದಕ್ಕಿಸಿಕೊಳ್ಳಬೇಕಿದ್ದರೆ ಧೈರ್ಯ ಬೇಕು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಇದು ಸಿಂಹದ ಗುಣ. ಸಿಂಹದ ಮರಿಯೇ ಆಗಿರಲಿ, ದೊಡ್ಡ ಆನೆಯನ್ನು ಕೂಡ ಯಾವುದೇ ಅಳುಕಿಲ್ಲದೆ ಬೇಟೆಯಾಡುತ್ತದೆ. ಆನೆಯ ಕಾಲುಗಳಿಗೆ ಸಿಲುಕಿ ತಾನು ಅಜ್ಜಿಬಜ್ಜಿಯಾಗಬಹುದು ಎಂಬ ಭಯ ಅದಕ್ಕಿರುವುದೇ ಇಲ್ಲ. ಹೀಗಾಗಿಯೇ ಅದು ಪ್ರಾಣಿಗಳ ರಾಜ. ಯಾರೂ ಅದಕ್ಕೆ ಪಟ್ಟಕಟ್ಟಿಲ್ಲವಾದರೂ ಅದು ಸ್ವಯಮೇವ ಮೃಗೇಂದ್ರತಾ.

ಕಾಗೆಯ ಜಾಣ್ಮೆ
ಅಂಗಳದಲ್ಲಿ ಹರಡಿಟ್ಟ ಹಪ್ಪಳವನ್ನು ಯಾರ ಕಣ್ಣಿಗೂ ಬೀಳದಂತೆ ಕಾಗೆ ಹಾರಿಸುತ್ತದೆ. ಪಾತ್ರೆಯಲ್ಲಿ ತಳ ಮುಟ್ಟಿದ ನೀರನ್ನು ಒಂದೊಂದೇ ಕಲ್ಲು ತಂದು ಹಾಕಿ ಮೇಲೆ ತಂದು ನೀರನ್ನು ಕುಡಿಯುತ್ತದೆ. ಇಂಥ ಕಾಗೆ ಜಾಣ ಅಲ್ಲ ಎಂದು ಯಾರು ಹೇಳಬಹುದು? ಕಾಗೆಯ ಜಾಣತನದ ಬಗ್ಗೆ ಇಸೋಪನ ಕತೆಗಳಲ್ಲೂ ಹೇಳಲಾಗಿದೆ. ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿ ಬರುತ್ತಾರೆ ಎಂದು ನಮ್ಮ ಹಿರಿಯರು ಇಂದಿಗೂ ನಂಬುತ್ತಾರೆ.

ತೋಳದ ಒಗ್ಗಟ್ಟು
ʼಸಂಘೇ ಶಕ್ತಿ ಕಲೌಯುಗೇʼ ಎಂಬುದನ್ನು ಕೇಳಿದ್ದೀರಲ್ವೇ? ಒಗ್ಗಟ್ಟಾಗಿದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ತೋಳಗಳನ್ನು ನೋಡಿ ಕಲಿಯಬೇಕು. ಇವು ಸದಾ ಗುಂಪಾಗಿಯೇ ಇರುತ್ತವೆ. ಒಟ್ಟಾಗಿಯೇ ಬೇಟೆಯಾಡುತ್ತವೆ. ಬೇಟೆಯಾಡಿ ದೊರೆತದ್ದನ್ನು ಹಂಚಿಕೊಂಡು ತಿನ್ನುತ್ತವೆ. ಇವುಗಳ ಒಗ್ಗಟ್ಟು ನೋಡಿರುವ ಕಾರಣವೇ ಸಿಂಹ, ಹುಲಿ ಕೂಡ ಇವುಗಳ ತಂಟೆಗೆ ಬರುವುದಿಲ್ಲ. ಇದು ಎಷ್ಟು ಮುಖ್ಯ ಎಂದು ಬೇರೆ ಹೇಳಬೇಕಿಲ್ಲ ಅಲ್ವೇ!

ಈ ವಸ್ತು ಪಡೆಯಲು ಸೆಲ್ಫಿಷ್ ಆದರೆ ಶ್ರೀಮಂತರಾಗುವುದು ಪಕ್ಕಾ..!
 

ಆನೆಯ ನೆನಪು
ನೆನಪಿನ ಶಕ್ತಿ ಬಹಳ ಮುಖ್ಯ. ನೆನಪನ್ನು ಸದಾ ಕಾಪಾಡಿಕೊಳ್ಳಬೇಕು. ಆನೆಗೆ ಭಯಂಕರ ಮೆಮೊರಿ. ಒಂದು ಸಲ ಹೋದ ದಾರಿಯನ್ನು ಅದು ಎಂದೂ ಮರೆಯುವುದಿಲ್ಲ. ಎಷ್ಟೋ ವರ್ಷಗಳ ಬಳಿಕವೂ ನೆನಪಿಸಿಕೊಂಡು ಅದೇ ದಾರಿಯಲ್ಲಿ ಬರಬಲ್ಲದು. ಹಾಗೇ ಒಮ್ಮೆ ನೋಡಿದ ಮುಖವನ್ನು ಕೂಡ ನೆನಪಿಟ್ಟುಕೊಳ್ಳುತ್ತದೆ.

ಬೆಕ್ಕಿನ ಕುತೂಹಲ
ಬೆಕ್ಕು ಬಹಳ ಕುತೂಹಲದ ಪ್ರಾಣಿ. ಬೀಗ ಹಾಕಿದ ಮನೆಗಳ ಒಳಗೆ ಕೂಡ ನುಗ್ಗಿ ಅಡುಗೆಮನೆಯಲ್ಲೆಲ್ಲಾ ತಲಾಶ್‌ ಮಾಡಿ ಅದು ಬರಬಲ್ಲದು. ಎಲ್ಲವನ್ನೂ ಬಹಳ ಮೌನವಾಗಿ, ಸಾವಧಾನದಿಂದ ಗಮನಿಸುತ್ತಿರುತ್ತದೆ. ಒಂದು ಮೀನಿಗಾಗಿ, ಕಪ್ಪೆಗಾಗಿ ಗಂಟೆಗಟ್ಟಲೆ ಹೊಂಚು ಹಾಕಬಲ್ಲದು. ಯಶಸ್ಸು ಬೇಕಿದ್ದರೆ ಬೆಕ್ಕಿನಂತೆ ಎಲ್ಲದರ ಬಗ್ಗೆ ಕುತೂಹಲಿಯಾಗಿರಬೇಕಂತೆ. 

ಕಷ್ಟದ ಸಮಯದಲ್ಲಿ ಚಾಣಕ್ಯನ ಈ ಮಾತು ನೆನಪಿಟ್ರೆ ಸಮಸ್ಯೇನೆ ಇರೋದಿಲ್ಲ
 

click me!