ಸರ್ಕಾರಿ ಕೆಲಸ ಬಿಟ್ಟು ರಾಮಲಾಲಾ ಪಟ್ಟಾರಿ ಆದ ಚಂಪತ್ ರಾಯ್

By Suvarna News  |  First Published Jan 9, 2024, 1:08 PM IST

ರಾಮ ಮಂದಿರ ನಿರ್ಮಾಣದ ಹಿಂದೆ ಲಕ್ಷಾಂತರ ಜನರಿದ್ದಾರೆ. ಆದ್ರೆ ಕೆಲವರ ಕೊಡುಗೆ ಅಪಾರ. ತಮ್ಮ ವೈಯಕ್ತಿಕ ಜೀವನ, ಸುಖವನ್ನು ಬಿಟ್ಟು ರಾಮನಿಗಾಗಿ ಹೋರಾಡಿದವರಲ್ಲಿ ಚಂಪತ್ ರಾಯ್ ಒಬ್ಬರು. ಅವರ ಮಾಹಿತಿ ಇಲ್ಲಿದೆ.
 


ಭಗವಂತ ರಾಮ ನೆಲೆಸಿರುವ ಅಯೋಧ್ಯೆ ಕೇವಲ ನಗರವಲ್ಲ. ಇದು ದೇವ ಮಂದಿರ. ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿರುವ ಸನಾತನ ಪ್ರೇಮಿಗಳ ಭವ್ಯ ನಗರ. ಸುಮಾರು 500 ವರ್ಷಗಳ ಸುದೀರ್ಘ ಹೋರಾಟದ ನಂತ್ರ ಕೊನೆಗೂ ಸನಾತನ ಪ್ರಿಯರ ಕನಸು ಈಡೇರುತ್ತಿದೆ. ರಾಮನಿಗೊಂದು ಮಂದಿರ ನಿರ್ಮಾಣವಾಗ್ತಿದೆ. ರಾಮನು 14 ವರ್ಷಗಳ ವನವಾಸದಿಂದ ಹಿಂದಿರುಗಿದಾಗ ಅಯೋಧ್ಯೆಯ ಜನರು ತ್ರೇತಾಯುಗದಲ್ಲಿ ದೀಪಗಳನ್ನು ಬೆಳಗಿದ್ದರು. ಈಗ ಕಲಿಯುಗದಲ್ಲಿ ಭಕ್ತರು ಅಯೋಧ್ಯೆ ತುಂಬ ದೀಪ ಬೆಳಗಿ ಸಂಭ್ರಮಿಸುವ ಕಾಲ ಮತ್ತೆ ಬಂದಿದೆ.  ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಲಾಲಾ ದೇವಾಲಯ ಸದ್ಯ ಸುದ್ದಿಯಲ್ಲಿದೆ. ಜನವರಿ 22ರಂದು ನಡೆಯುವ ಮಹಾಮಸ್ತಭಿಷೇಕಕ್ಕೆ ತಯಾರಿ ಜೋರಾಗಿ ನಡೆದಿದೆ. ರಾಮ ಮಂದಿರದ ಜೊತೆ ರಾಮಲಾಲಾ ಅವರ ಪಟ್ವಾರಿ ಅಂದರೆ ಚಂಪತ್ ರಾಯ್ ಕೂಡ ಮುಖ್ಯಾಂಶದಲ್ಲಿದ್ದಾರೆ. ರಾಮ ಮಂದಿರದ ಕಾರ್ಯಕ್ರಮಗಳ ಬಗ್ಗೆ ಚಂಪತ್ ರೈ ಕಾಲಕಾಲಕ್ಕೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಪ್ರಮುಖ ವ್ಯಕ್ತಿಗಳಲ್ಲಿ ಚಂಪತ್ ರಾಯ್ ಒಬ್ಬರು. ನಾವಿಂದು ಚಂಪತ್ ರಾಯ್ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.

ಚಂಪತ್ ರಾಯ್ (Champat Rai) ಯಾರು? : ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಹೇಗಿರುತ್ತದೆ, ಯಾರೆಲ್ಲ ಪಾಲ್ಗೊಳ್ಳಬೇಕು, ಯಾವೆಲ್ಲ ಕಾರ್ಯಕ್ರಮ ನಡೆಯಬೇಕು ಎಂಬ ಪ್ರತಿಯೊಂದು ಮಾಹಿತಿಯನ್ನು ಮಾಧ್ಯಮಕ್ಕೆ ತಲುಪಿಸುವ ಕೆಲಸವನ್ನು ಮಾಡ್ತಿದ್ದಾರೆ ಚಂಪತ್ ರಾಯ್. ಚಂಪತ್ ರಾಯ್ ಅವರು ನವೆಂಬರ್ 18, 1946 ರಂದು ಉತ್ತರ ಪ್ರದೇಶ (Uttar Pradesh) ದ ಬಿಜ್ನೋರ್ ಜಿಲ್ಲೆಯ ನಗೀನಾ ತೆಹಸಿಲ್‌ನಲ್ಲಿ ಜನಿಸಿದರು. ಅವರ ತಂದೆ ರಾಮೇಶ್ವರ ಪ್ರಸಾದ್ ಬನ್ಸಾಲ್ ಮತ್ತು  ತಾಯಿ ಸಾವಿತ್ರಿ ದೇವಿ. 10 ಸಹೋದರರು ಮತ್ತು ಸಹೋದರಿಯರಲ್ಲಿ ಎರಡನೆಯವರು ಚಂಪತ್ ರಾಯ್. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿಕೊಂಡಿದ್ದ ಚಂಪತ್ ರಾಯ್, ಸಂಘದ ವಿಚಾರಗಳನ್ನು ಪ್ರಚಾರ ಮಾಡುವಲ್ಲಿ ಆಸಕ್ತಿ ತೋರಿದ್ದರು. ಉನ್ನತ ಶಿಕ್ಷಣವನ್ನು ಮುಗಿಸಿ, ಧಂಪುರದ ಆಶ್ರಮದ ಪದವಿ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ವೃತ್ತಿ ಶುರು ಮಾಡಿದ್ದರು.

Tap to resize

Latest Videos

ಮದುವೆ ನಂತರ ಗಂಡ ಹೆಂಡತಿ ಜೊತೆ ಈ ಕೆಲಸ ಮಾಡಬಾರದು ಯಾಕೆ ಗೊತ್ತಾ..?

1991ರಿಂದ ಶುರುವಾಯ್ತು ಅಯೋಧ್ಯೆ ನಂಟು : 1975ರಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದಾಗ ಚಂಪತ್ ರಾಯ್ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಸುಮಾರು ಹದಿನೆಂಟು ತಿಂಗಳು ಜೈಲಿನಲ್ಲಿದ್ದ ಚಂಪತ್ ರಾಯ್, ಬಿಡುಗಡೆಯಾದ್ಮೇಲೆ ಕೆಲಸಕ್ಕೆ ರಾಜೀನಾಮೆ ನೀಡಿ ವಿಶ್ವ ಹಿಂದೂ ಪರಿಷತ್ ಸೇರಿದ್ದರು. 1991ರಲ್ಲಿ  ಅಯೋಧ್ಯೆಗೆ ಬಂದಿದ್ದರು. ಪ್ರಾದೇಶಿಕ ಸಂಸ್ಥೆ ಸಚಿವರಾಗಿ ಅಯೋಧ್ಯೆಗೆ ಬಂದ ಚಂಪತ್ ರಾಯ್, 1996 ರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಸಚಿವರಾದರು ಮತ್ತು 2002 ರಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿ ಮತ್ತು ನಂತರ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಪ್ರಸ್ತುತ ಚಂಪತ್ ರಾಯ್ ಅವರು ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.

ಮನೆಯ ಮೂಲೆ ಮೂಲೆಯಲ್ಲೂ ಉಪ್ಪು ಹಾಕಿದ್ರೆ ಎಷ್ಟೊಂದು ಲಾಭ ಇದೆ ಗೊತ್ತಾ?

ಚಂಪತ್ ರಾಯ್ರನ್ನು ರಾಮಲಾಲಾ ಪಟ್ವಾರಿ ಎಂದು ಕರೆಯಲು ಕಾರಣ ಏನು? : ರಾಮ ಮಂದಿರ ನಿರ್ಮಾಣ ಮಾತ್ರವಲ್ಲ ಕಾನೂನು ಹೋರಾಟದಲ್ಲಿ ಚಂಪತ್ ರಾಯ್ ಪಾತ್ರ ದೊಡ್ಡದಿದೆ. ಮದುವೆಯಾಗದೆ ಅಯೋಧ್ಯೆಯಲ್ಲಿ ಉಳಿದಿದ್ದ ಚಂಪತ್ ರಾಯ್, ಕಾನೂನು ಹೋರಾಟದ ಸಮಯದಲ್ಲಿ ಎಲ್ಲ ದಾಖಲೆಗಳನ್ನು ತಮ್ಮ ಕೊಠಡಿಯಲ್ಲಿಟ್ಟುಕೊಂಡು, ವಕೀಲರಿಗೆ ಅಗತ್ಯವಿರುವ ಮಾಹಿತಿ ನೀಡುತ್ತಿದ್ದರು. ಸುಪ್ರೀಂ ಕೋರ್ಟ್ ರಾಮಜನ್ಮಭೂಮಿ ತೀರ್ಪು ನೀಡುವವರೆಗೂ ನಿರಂತರ ಹೋರಾಟವನ್ನು ಅವರು ಮಾಡಿದ್ದಾರೆ. ಹಾಗಾಗಿಯೇ ಜನರು ಅವರನ್ನು ರಾಮಲಾಲ್ ಪಟ್ಟಾರಿ ಎಂದು ಕರೆಯುತ್ತಾರೆ. ಕೋರ್ಟ್ ತೀರ್ಪಿನ ನಂತ್ರ ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಯನ್ನು, ದೇವಸ್ಥಾನದ ಟ್ರಸ್ಟ್ ಇವರಿಗೆ ವಹಿಸಿತ್ತು. ಈಗ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. 

click me!