Budh Uday 2023: ಬುಧನ ಉದಯವು 3 ರಾಶಿಗಳಿಗೆ ತರಲಿದೆ ಕಷ್ಟನಷ್ಟ, ಬೇಕು ಎಚ್ಚರ!

By Suvarna News  |  First Published May 6, 2023, 1:23 PM IST

ಮಂಗಳ ಗ್ರಹವು ಮೇ 10ರಂದು ಕರ್ಕ ರಾಶಿಗೆ ಹೊರಳುತ್ತಿದೆ. ಇದೇ ದಿನ ಬುಧ ಗ್ರಹವು ಉದಯವಾಗುತ್ತಿದೆ. ಗ್ರಹಗಳ ಉದಯವನ್ನು ಸಾಮಾನ್ಯವಾಗಿ ಒಳ್ಳೆಯದೆಂದೇ ಪರಿಗಣಿಸಿದರೂ, ಬುಧನ ಉದಯದಿಂದ ಈ ರಾಶಿಗಳಿಗೆ ಸಮಸ್ಯೆ ಹೆಚ್ಚಲಿದೆ. 


ಜ್ಯೋತಿಷ್ಯದಲ್ಲಿ ಗ್ರಹಗಳ ಉದಯ ಮತ್ತು ಅಸ್ತವನ್ನು, ರಾಶಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಅದರ ಪ್ರಭಾವವು ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ. ಜ್ಯೋತಿಷಿಗಳ ಪ್ರಕಾರ, ಮೇ 10, 2023 ರಂದು ಮಧ್ಯಾಹ್ನ 12:53 ಕ್ಕೆ ಬುಧವು ಮೇಷ ರಾಶಿಯಲ್ಲಿ ಉದಯಿಸಲಿದ್ದಾನೆ. ಜ್ಯೋತಿಷ್ಯದಲ್ಲಿ, ಬುಧವನ್ನು ತರ್ಕ ಮತ್ತು ಸಂಭಾಷಣೆಯ ಕಾರಣ ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ಬುಧನು ಪ್ರಬಲ ಸ್ಥಾನದಲ್ಲಿದ್ದಾನೋ, ಅವರು ಅನೇಕ ರೀತಿಯ ಲಾಭಗಳನ್ನು ಪಡೆಯುತ್ತಾರೆ. ಕೆಲವು ರಾಶಿಚಕ್ರ ಚಿಹ್ನೆಗಳು ಬುಧದ ಉದಯದಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿವೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳು ಬುಧದ ಕಾರಣದಿಂದಾಗಿ ವೈಫಲ್ಯವನ್ನು ಎದುರಿಸಬೇಕಾಗಬಹುದು. ಬುಧಗ್ರಹದ ಉದಯದ ಸಮಯದಲ್ಲಿ ಯಾವ ರಾಶಿಚಕ್ರದ ಚಿಹ್ನೆಗಳು ಎಚ್ಚರವಾಗಿರಬೇಕು ಎಂದು ತಿಳಿಯೋಣ.

ಬುಧದ ಉದಯದಿಂದಾಗಿ ಈ ರಾಶಿಚಕ್ರದ ಚಿಹ್ನೆಗಳು ಜಾಗರೂಕರಾಗಿರಬೇಕು..

Tap to resize

Latest Videos

ಮೇಷ ರಾಶಿ (Aries)
ಬುಧದ ಉದಯವು ಮೇಷ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ಸಮಯದಲ್ಲಿ, ಸಣ್ಣ ಕೆಲಸಗಳಲ್ಲಿ ಅಡೆ ತಡೆಗಳು ಉಂಟಾಗಬಹುದು. ಈ ರಾಶಿಯ ಜನರು ಸಣ್ಣಪುಟ್ಟ ಕೆಲಸಗಳಿಗೆ ಕಷ್ಟಪಡಬೇಕಾಗುತ್ತದೆ. ಇದರೊಂದಿಗೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆರ್ಥಿಕ ಪರಿಸ್ಥಿತಿಯೂ ಚಿಂತಾಜನಕವಾಗಬಹುದು. ಕುಟುಂಬದಲ್ಲಿ ವಿರಹ ಪರಿಸ್ಥಿತಿ ಉಂಟಾಗಬಹುದು. ದುಂದುಗಾರಿಕೆ ನಿಮ್ಮ ಜೇಬನ್ನು ಖಾಲಿ ಮಾಡುತ್ತದೆ. ಏನೇ ಮಾಡಿದರೂ ಉಳಿಸಲು ಸಾಧ್ಯವಾಗುವುದಿಲ್ಲ. 

ಜೀವಿತಾವಧಿಯಲ್ಲಿ ಈ 5 ರೀತಿಯ ದಾನ ಮಾಡಿದರೆ ಮೋಕ್ಷ ಪ್ರಾಪ್ತಿ

ವೃಷಭ ರಾಶಿ (taurus)
ಈ ರಾಶಿಚಕ್ರದಲ್ಲಿ ಬುಧನು ಹನ್ನೊಂದನೇ ಮನೆಯಲ್ಲಿ ಉದಯಿಸಲಿದ್ದಾನೆ. ಹಾಗಾಗಿ ವೃಷಭ ರಾಶಿಯ ಜನರು ಬುಧ ಗ್ರಹದ ಉದಯದ ಸಮಯದಲ್ಲಿ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಬಹುದು. ಇದರೊಂದಿಗೆ ಆರ್ಥಿಕ ಬಿಕ್ಕಟ್ಟನ್ನೂ ಎದುರಿಸಬೇಕಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಾಗಿ ಬೇಕಾಗಬಹುದು. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ, ಆದ್ದರಿಂದ ಎಚ್ಚರಿಕೆಯಿಂದಿರಿ. ಈ ರಾಶಿಚಕ್ರ ಚಿಹ್ನೆಗಳ ಜನರು ಕೌಟುಂಬಿಕ ಭಿನ್ನಾಭಿಪ್ರಾಯ, ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮತ್ತು ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸಬೇಕಾಗಬಹುದು. 

Mangal Gochar 2023: ಈ 3 ರಾಶಿಗಳಿಗೆ ಸರ್ವಮಂಗಳ ಉಂಟು ಮಾಡುವ ಮಂಗಳ

ಕರ್ಕಾಟಕ ರಾಶಿ (Cancer)
ಬುಧದ ಉದಯವು ಕರ್ಕಾಟಕ ರಾಶಿಯವರಿಗೆ ಕೆಲವು ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ಸಮಯದಲ್ಲಿ, ವೃತ್ತಿ ಕ್ಷೇತ್ರದಲ್ಲಿ ವೈಫಲ್ಯ ಸಂಭವಿಸಬಹುದು. ಇದರೊಂದಿಗೆ, ದೊಡ್ಡ ಹೂಡಿಕೆಗಳನ್ನು ತಪ್ಪಿಸಬೇಕು. ಗ್ರಹದ ಉದಯದ ಸಮಯದಲ್ಲಿ, ಕರ್ಕ ರಾಶಿಯ ಜನರು ತಮ್ಮ ಕೋಪವನ್ನು ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ, ಮಾಡಿದ ಕೆಲಸಗಳು ಹಾಳಾಗಬಹುದು, ಇದರಿಂದಾಗಿ ಭವಿಷ್ಯದಲ್ಲಿ ನಷ್ಟವಾಗಬಹುದು. ವ್ಯಾಪಾರ ಅಥವಾ ಕೊಡುಗೆ ಇತ್ಯಾದಿಗಳಲ್ಲಿ ಯಾವುದೇ ದೊಡ್ಡ ಹೂಡಿಕೆ ಕೈ ಮೀರಬಹುದು. 

click me!