ಇಂದು ಹನುಮಾನ್ ಜಯಂತಿ. ಎಲ್ಲಡೆ ಹನುಮಂತನ ಪೂಜೆ ನಡೆಯುತ್ತಿದೆ. ನಿಮ್ಮ ಮನೆಯಲ್ಲೂ ಶಾಂತಿ – ಸಮೃದ್ಧಿ ಬೇಕು ಅಂದ್ರೆ ಮನೆಗೆ ಈ ವಸ್ತು ತರಲು ಮರೆಯಬೇಡಿ.
ಕಲಿಯಗದಲ್ಲಿ ವಾಯುಪುತ್ರ ಹನುಮಂತ (Vayuputra Hanuman) ನನ್ನು ಅತ್ಯಂತ ಶಕ್ತಿಶಾಲಿ ದೇವರು ಎಂದೇ ನಂಬಲಾಗಿದೆ. ಈ ಯುಗದಲ್ಲಿ ಹನುಮಂತ ನಮ್ಮೊಂದಿಗಿದ್ದು, ಭಕ್ತಿಯಿಂದ ಪೂಜೆ ಮಾಡುವ ಭಕ್ತರ ಕಷ್ಟ, ನೋವುಗಳನ್ನು ನಿವಾರಿಸುತ್ತಾನೆ ಎನ್ನಲಾಗಿದೆ. ಇಂದು ಚೈತ್ರ ಮಾಸದ ಹುಣ್ಣಿಮೆ. ಹನುಮಂತನ ಭಕ್ತರಿಗೆ ವಿಶೇಷ ದಿನ. ಹನುಮಾನ್ ಜಯಂತಿ (Hanuman Jayanti)ಯನ್ನು ಎಲ್ಲೆಡೆ ಆಚರಣೆ ಮಾಡಲಾಗ್ತಿದೆ.
ಧಾರ್ಮಿಕ ನಂಬಿಕೆಗಳ (Religious belief) ಪ್ರಕಾರ, ಹನುಮಂತ ಚೈತ್ರ ಮಾಸದ ಹುಣ್ಣಿಮೆಯಂದು ಜನಿಸಿದ್ದ. ಅದಕ್ಕಾಗಿಯೇ ಈ ದಿನದಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತದೆ. ಹನುಮಾನ್ ಜಯಂತಿಯ ದಿನದಂದು ಹನುಮಂತನನ್ನು ಸೂಕ್ತ ವಿಧಿವಿಧಾನಗಳೊಂದಿಗೆ ಪೂಜಿಸಿದರೆ ಹನುಮಂತ ಭಕ್ತರಿಗೆ ಆಶೀರ್ವಾದ ನೀಡ್ತಾನೆ. ವ್ಯಕ್ತಿಯು ಭಯ, ರೋಗ, ದೋಷ ಮತ್ತು ತೊಂದರೆಗಳಿಂದ ಮುಕ್ತಿ ನೀಡುತ್ತಾನೆ. ಹನುಮಂತನ ಪೂಜೆಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಹನುಮಾನ್ ಜಯಂತಿಯ ಸಂದರ್ಭದಲ್ಲಿ ನೀವು ಮನೆಗೆ ಕೆಲ ವಸ್ತುಗಳನ್ನು ತರಬೇಕು. ಇದು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡಿ, ಸುಖ, ಸಂಪತ್ತಿನ ವೃದ್ಧಿಗೆ ಕಾರಣವಾಗುತ್ತದೆ. ಯಾವೆಲ್ಲ ವಸ್ತುಗಳನ್ನು ಇಂದು ಮನೆಗೆ ತರಬೇಕು ಎಂಬ ವಿವರ ಇಲ್ಲಿದೆ.
ಚೈನೀಸ್ ಜಾತಕ ಪ್ರಕಾರ 3 ರಾಶಿಗೆ ಬದುಕನ್ನೇ ಬದಲಿಸುವ ಶುಭ ಯೋಗ, ಮನೆ ವಾಹನ ಖರೀದಿ ಭಾಗ್ಯ
ಹನುಮಾನ್ ಜಯಂತಿ ದಿನ ಮನೆಗೆ ತನ್ನಿ ಈ ವಸ್ತು :
ಹನುಮಂತನ ವಿಗ್ರಹ (Idol) : ವಾಸ್ತು ಶಾಸ್ತ್ರದ ಪ್ರಕಾರ, ಹನುಮಾನ್ ಜಯಂತಿಯ ದಿನದಂದು ನೀವು ಹನುಮಂತನ ವಿಗ್ರಹ ಅಥವಾ ಚಿತ್ರವನ್ನು ನಿಮ್ಮ ಮನೆಗೆ ತರಬೇಕು. ಅದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ನಿಂತ ಅಥವಾ ಕುಳಿತ ಭಂಗಿಯಲ್ಲಿರುವ ಹನುಮಂತನ ವಿಗ್ರಹವನ್ನು ಮಾತ್ರ ನೀವು ಮನೆಗೆ ತರಬೇಕು ಎಂಬುದನ್ನು ನೆನಪಿನಲ್ಲಿಡಿ.
ಸಿಂಧೂರ : ಹನುಮಂತನಿಗೆ ಸಿಂಧೂರ ಪ್ರಿಯ ಎಂದು ನಂಬಲಾಗಿದೆ. ಹಾಗಾಗಿ ಈ ದಿನ ಹನುಮಂತನಿಗೆ ಸಿಂಧೂರವನ್ನು ಅರ್ಪಿಸಬೇಕು. ನೀವು ಹನುಮಾನ್ ಜಯಂತಿ ದಿನ ಸಿಂಧೂರವನ್ನು ಮನೆಗೆ ತರುವುದರಿಂದ ಶುಭ ಪ್ರಾಪ್ತಿಯಾಗುತ್ತದೆ.
ಕೇಸರಿ : ಹನುಮಾನ್ ಜಯಂತಿಯಂದು ಹನುಮಂತನನ್ನು ಮೆಚ್ಚಿಸಲು ಮತ್ತು ಅವನ ಆಶೀರ್ವಾದ ಪಡೆಯಲು ನೀವು ಬಯಸಿದ್ರೆ ಈ ದಿನ ಮನೆಗೆ ಕೇಸರಿಯನ್ನು ತನ್ನಿ. ನೀವು ಮನೆಗೆ ತರುವ ಕೇಸರಿ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ಕೆಂಪು ಹೂ : ಧಾರ್ಮಿಕ ನಂಬಿಕೆಗಳ ಪ್ರಕಾರ, ಹನುಮಂತನಿಗೆ ಕೆಂಪು ಬಣ್ಣ ತುಂಬಾ ಪ್ರಿಯ. ಹನುಮಂತನ ಆಶೀರ್ವಾದ ಪಡೆಯಲು ಬಯಸಿದ್ರೆ ಹನುಮಾನ್ ಜಯಂತಿಯ ದಿನದಂದು ಮನೆಗೆ ಕೆಂಪು ಹೂವುಗಳನ್ನು ತರಬೇಕು.
ಧ್ವಜ : ವಾಸ್ತು ಶಾಸ್ತ್ರದ ಪ್ರಕಾರ, ಹನುಮಾನ್ ಜಯಂತಿಯ ದಿನದಂದು ಧ್ವಜವನ್ನು ಮನೆಗೆ ತರುವುದು ತುಂಬಾ ಶುಭ. ಈ ಧ್ವಜವನ್ನು ಮನೆಯ ಛಾವಣಿ ಅಥವಾ ಮುಖ್ಯ ದ್ವಾರದ ಮೇಲೆ ಇಡಬೇಕು.
ಚಾಣಕ್ಯನ ಪ್ರಕಾರ ಈ 6 ಜನರನ್ನು ಅಪ್ಪಿ ತಪ್ಪಿಯೂ ನಿಮ್ಮ ಮನೆಗೆ
ಕೆಂಪು ಬಣ್ಣದ ಸಿಹಿ ತಿಂಡಿ : ಹನುಮಂತನಿಗೆ ಕೆಂಪು ಬಣ್ಣ ಇಷ್ಟವಾದ ಕಾರಣ ಇಂದು ಕೆಂಪು ಬಣ್ಣದ ಸಿಹಿ ತಿಂಡಿಯನ್ನು ಮನೆಗೆ ತನ್ನಿ. ಅದನ್ನು ಭಕ್ತರಿಗೆ ಹಂಚಬಹುದು. ಅಲ್ಲದೆ ಕೆಂಪು ಬಣ್ಣದ ವಸ್ತುವನ್ನು ನೀವು ಮನೆಗೆ ತರಬಹುದು.
ಲಡ್ಡು : ಭಜರಂಗಬಲಿಗೆ ಲಡ್ಡು ತುಂಬಾ ಇಷ್ಟ. ಲುಡ್ಡು ನೀಡಿದ್ರೆ ಹನುಮಂತ ಬೇಗ ಖುಷಿಯಾಗ್ತಾನೆ. ಜ್ಯೋತಿಷ್ಯದ ಪ್ರಕಾರ, ಹನುಮಾನ್ ಜಯಂತಿಯಂದು ಹನುಮಂತನ ದೇವಸ್ಥಾನದಲ್ಲಿ ಕಡಲೆಹಿಟ್ಟಿನ ಲಡ್ಡುಗಳನ್ನು ದಾನ ಮಾಡಬೇಕು. ಹಾಗೆಯೇ ಲಡ್ಡನ್ನು ಮನೆಗೆ ತರಬೇಕು. ಇದರಿಂದ ಆಶೀರ್ವಾದ ಸಿಗುತ್ತದೆ. ನಿಮಗೆ ಪ್ರಮೋಷನ್ ಸಿಗುವುದಲ್ಲದೆ ಆರ್ಥಿಕ ವೃದ್ಧಿಯಾಗುತ್ತದೆ.