ದುಷ್ಟ ಶಕ್ತಿ, ದೃಷ್ಟಿ ತೆಗೆಯುವ ಶಾಸ್ತ್ರ; ವಧು ವರನ ವಿರುದ್ಧ ಕೋರ್ಟ್‌ಗೆ ಹೋದ ಯುವತಿಗೆ 32 ಲಕ್ಷ ರೂ ಪರಿಹಾರ

Published : Jul 21, 2026, 07:00 PM IST
The bride and groom

ಸಾರಾಂಶ

ಮದುವೆಯಲ್ಲಿ ವಧು ವರರು ಹಾಗೂ ಅತಿಥಿಗಳ ಮೇಲಿನ ದುಷ್ಟ ಶಕ್ತಿ, ಕೆಟ್ಟ ದೃಷ್ಟಿ ತೆಗೆಯುವ ವಿಚಿತ್ರ ಶಾಸ್ತ್ರದಲ್ಲಿ ಎಡವಟ್ಟಾಗಿದೆ. ಪರಿಣಾಮ ನೂತನ ಮದುವೆಯಾದ ದಂಪತಿ ಹಾಗೂ ಅವರ ಆಪ್ತರ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಯುವತಿಗೆ 32 ಲಕ್ಷ ರೂ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

ಪ್ರತಿ ಸಮುದಾಯಗಳ ಮದುವೆಯಲ್ಲಿ ಹಲವು ಶಾಸ್ತ್ರಗಳು, ಪದ್ಥತಿಗಳು ಇದ್ದೆ ಇರುತ್ತೆ. ಆಧುನಿಕತೆ, ಸೌಲಭ್ಯಕ್ಕೆ ತಕ್ಕಂತೆ ಹಲವು ಶಾಸ್ತ್ರಗಳನ್ನು ಬದಲಾಯಿಸಲಾಗಿದೆ. ಇನ್ನು ಮದುವೆಯಲ್ಲಿ ವಧು ವರರ ಡ್ಯಾನ್ಸ್, ಸಂಬಂಧಿಕರ ಹಲವು ಪ್ರದರ್ಶನಗಳು ಇತ್ತೀಚೆಗೆ ಸಾಮಾನ್ಯವಾಗಿದೆ. ಹೀಗೆ ಮದುವೆ ಮಂಟಪ ಕಂಗೊಳಿಸುತ್ತಿತ್ತು. ಆತಿಥಿಗಳು, ಆಮಂತ್ರಿತರು ಆಗಮಿಸಿದ್ದರು.ಅದ್ಧೂರಿಯಾಗಿ ಮದುವೆಯಾಗಿದೆ. ಮದುವೆ ಬಳಿಕ ವಧುವಿನ ಜೊತೆ ಗೆಳತಿ ಅಥವಾ ಸಂಬಂಧಿಕರು, ಮಕ್ಕಳು ತೆರಳುವ ವಾಡಿಕೆ ಹಲವು ಕಡೆಗಳಲ್ಲಿದೆ. ಗಂಡನ ಮನೆ ವಧುವಿಗೆ ಹೊಸದು. ಹೀಗಾಗಿ ಆಕೆಗೆ ಕೆಲ ದಿನಗಳ ಕಾಲ ಜೊತೆಯಾಗಿರಲು ಗೆಳತಿಯೊಬ್ಬಳು ತೆರಳಿದ್ದಾಳೆ. ಗಂಡನ ಮನೆಗೆ ಆಗಮಿಸುವ ಅತಿಥಿಗಳು, ಹಾಗೂ ನವ ವಧು ವರರ ದೃಷ್ಟಿ ತೆಗೆಯುವ, ದುಷ್ಠ ಶಕ್ತಿಗಳನ್ನು ತೆಗೆಯುವ ಶಾಸ್ತ್ರ ಮಾಡಲಾಗುತ್ತದೆ. ಹೀಗೆ ಶಾಸ್ತ್ರದಲ್ಲಿ ಎಡವಟ್ಟು ಮಾಡಲಾಗಿದೆ. ಹೀಗಾಗಿ ವಧುವಿನ ಜೊತೆ ತೆರಳಿದ ಯುವತಿ ನವ ದಂಪತಿ ಸೇರಿದಂತೆ ಆಪ್ತರ ವಿರುದ್ಧ ಕೋರ್ಟ್ ಮೆಟ್ಟಿಲೇರಿ 32 ಲಕ್ಷ ರೂಪಾಯಿ ಪರಿಹಾರ ಪಡೆದ ಘಟನೆ ಚೀನಾದಲ್ಲಿ ನಡೆದಿದೆ.

ಏನಿದು ಘಟನೆ?

ಚೀನಾದ ಹೆನಾನ್ ಪ್ರಾಂತ್ಯದ ರುಯಾಂಗ್‌ನಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಯುವತಿ ಝಾಂಗ್ ಕೋರ್ಟ್ ಮೆಟ್ಟಿಲೇರಿ ಇದೀಗ ಪರಿಹಾರ ಪಡೆದಿದ್ದಾಳೆ. ಲೀ ಅನ್ನೋ ಯುವತಿಯ ಮದುವೆ. ಮದುವೆ ಬಳಿಕ ಲೀ ಜೊತೆ ಝಾಂಗ್ ತೆರಳಿದ್ದಾಳೆ. ಚೀನಾದ ಹಲೆವೆಡೆ ಈ ಪುರಾತನ ಶಾಸ್ತ್ರ ನಡೆಸಲಾಗುತ್ತದೆ. ಮದುವೆಯಾಗಿ ಮನೆಗೆ ಆಗಮಿಸುವ ವಧು ವರರು, ಆತಿಥಿಗಳ ದೃಷ್ಟಿ ತೆಗೆಯುವ ಕಾರ್ಯ ನಡೆಯುತ್ತದೆ.ಇದು ಒಂದೊಂಡು ಭಾಗದಲ್ಲಿ ಚಿತ್ರ ವಿಚಿತ್ರವಾಗಿ ಆಚರಿಸಲಾಗುತ್ತದೆ. ನಗರಗಳಲ್ಲಿ ಶಾಸ್ತ್ರಕ್ಕಾಗಿ ಆಚರಿಸಿದರೆ, ಹಳ್ಳಿ ಸೇರಿದಂತೆ ಕೆಲವೆಡೆ ಹುಚ್ಚಾಟದ ರೀತಿಯಲ್ಲಿ ಆಚರಿಸಲಾಗುತ್ತದೆ.

ಗಂಡಿನ ಕಡೆಯವರು ಈ ಶಾಸ್ತ್ರ ಮಾಡಲು ಆರಂಭಿಸಿದ್ದಾರೆ. ಆದರೆ ಗಂಡಿನ ಕಡೆಯವರ ಚಿತ್ರ ವಿಚಿತ್ರ ಶಾಸ್ತ್ರಕ್ಕೆ ಯಾಂಗ್ ಭಯಗೊಂಡಿದ್ದಾಳೆ. ಕಾರಣ ಅತಿಥಿಗಳಾಗಿ ಬಂದಿದ್ದ ಕೆಲ ಮಕ್ಕಳನ್ನು ಮೇಲಕ್ಕೆ ಎಸೆದು ಬಳಿಕ ಹಿಡಿಯುವ ಸಾಹಸ ಮಾಡುತ್ತಿದ್ದರು. ಹೀಗಾಗಿ ಪರಿಸ್ಥಿತಿ ಭೀಕರತೆ ಅರಿತ ಝಾಂಗ್ ಕಬೋರ್ಡ್ ಒಂದರಲ್ಲಿ ಅಡಗಿ ಕುಳಿತಿದ್ದಳು. ಆದರೆ ಗಂಡಿನ ಕಡೆಯಲ್ಲಿ ಹಲವು ಯುವಕರು ಅತಿಥಿಗಳ ಹುಡುಕಿ ಹುಡುಕಿ ಶಾಸ್ತ್ರ ಮಾಡುತ್ತಿದ್ದರು. ಈ ವೇಳೆ ಅಡಗಿ ಕುಳಿತಿದ್ದ ಝಾಂಗ್ ಯುವತಿಯನ್ನು ವಾಂಗ್ ಮೊಬಿಂಗ್ ಯುವಕ ಬಲವಂತಾಗಿ ಹೊರಗೆಳೆದಿದ್ದಾನೆ. ಬಳಿಕ ಬೆಡ್ ಶೀಟ್‌ನ ನಾಲ್ಕು ತುದಿಗಳನ್ನು ಯುವಕರ ಹಿಡಿದು ಆಕೆಯನ್ನು ಮೇಲಕ್ಕೆ ಎಸೆದಿದ್ದಾರೆ.

18 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಡ್ ಶೀಟ್ ಮೇಲೆ ಮಲಗಿಸಿ ಯುವತಿಯನ್ನು ಮೇಲಕ್ಕೆ ಎಸೆಸಾದ ಮೊದಲ ಬಾರಿ ಸರಿಯಾಗಿ ಹಿಡಿದಿದ್ದಾರೆ. ಎರಡನೇ ಬಾರಿ ಯುವಕರು ಮತ್ತೆ ಬೆಡ್ ಶೀಟ್‌ನ ನಾಲ್ಕು ತುದಿಗಳನ್ನು ಹಿಡಿದು ಮಧ್ಯದಲ್ಲಿದ್ದ ಯುವತಿಯನ್ನು ಮೇಲಕ್ಕೆ ಎಸೆತಿದ್ದಾರೆ. ಆದರೆ ಎರಡನೇ ಬಾರಿ ಬೆಡ್‌ಶೀಟ್‌ನಲ್ಲಿ ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಯುವತಿ ಝಾಂಗ್ ನೆಲಕ್ಕೆ ಬಿದ್ದಿದ್ದಾಳೆ. ಪರಿಣಾಮ ಝಾಂಗ್ ಯುವತಿ ಬೆನ್ನು ಮೂಳೆಯ ಕೆಳಭಾಗದಲ್ಲಿ ಗಾಯವಾಗಿದೆ. 18 ದಿನಗಳ ಕಾಲ ಆಸ್ಪತ್ರೆಯಲ್ಲಿ ಝಾಂಗ್ ಚಿಕಿತ್ಸೆ ಪಡೆದಿದ್ದಾಳೆ

ಗ್ರೇಡ್ 9 ಹಂತದ ಶಾಶ್ವತ ವೈಕಲ್ಯ

ಬೆನ್ನು ಮೂಳೆಗೆ ಗಾಯವಾದ ಕಾರಣ ಝಾಂಗ್ ಗೇಡ್ 9 ಹಂತದ ಶಾಶ್ವತ ವೈಕಲ್ಯ ಎದುರಾಗಿದೆ. ತನ್ನ ಇಡೀ ಜೀವನ ದೈಹಿಕವಾಗಿ ಅಶಕ್ತಳಾಗುವಂತೆ ಮಾಡಿದ ಮದುವೆ ಶಾಸ್ತ್ರ, ಈ ಶಾಸ್ತ್ರಕ್ಕೆ ಬೆಂಬಲ ನೀಡಿದ ನೂತನ ವಧು ವರರು, ಅವರ ಕುಟುಂಬದ ವಿರುದ್ಧ ಯುವತಿ ಝಾಂಗ್ ಕೋರ್ಟ್ ಮೆಟ್ಟೇಲೇರಿದ್ದಾಳೆ. ಪ್ರಕರಣ ಕುರಿತು ವಿಚಾರಣೆ ನಡೆಸಿದ ಕೋರ್ಟ್ ವಧು ವರರು ಹಾಗೂ ಅವರ ಆಪ್ತರಾದ 9 ಮಂದಿ ಈ ಘಟನೆಗೆ ನೇರ ಹೊಣೆಗಾರರು ಎಂದಿದೆ. ಇಷ್ಟೇ ಅಲ್ಲ ಸಂತ್ರಸ್ತ ಯುವತಿ 32 ಲಕ್ಷ ರೂಪಾಯಿ ( 2,30,000 ಯುವಾನ್) ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

PREV
Read more Articles on
click me!

Recommended Stories

ಬುಧ ಗ್ರಹ ಕರ್ಕ ರಾಶಿಗೆ ಪ್ರವೇಶ, ಶ್ರಾವಣ ಮಾಸದಲ್ಲಿ ಈ 4 ರಾಶಿ ಭವಿಷ್ಯ ಬದಲು
ಕೇಂದ್ರ ದೃಷ್ಟಿ ಯೋಗ 2026: ಗುರು ಪೂರ್ಣಿಮೆಯಂದು ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಗ, ಈ 4 ರಾಶಿ ಅದೃಷ್ಟವನ್ನು ಬೆಳಗಿಸುತ್ತದೆ