ಇಂದು ಭೀಮನ ಅಮಾವಾಸ್ಯೆ; ಪತಿಯ ಪೂಜೆ ಏಕೆ ಮಾಡಬೇಕು?, ಮಹತ್ವ ಏನು?

By Sushma HegdeFirst Published Jul 17, 2023, 10:19 AM IST
Highlights

ಆಷಾಢದ ಕೊನೆಯ ದಿನದಂದು ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಪತಿ ಮತ್ತು ಸಹೋದರರ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಇದರ ಮಹತ್ವ ಏನು ಎಂಬ ಮಾಹಿತಿ ಇಲ್ಲಿದೆ.

ಆಷಾಢದ ಕೊನೆಯ ದಿನದಂದು ಭೀಮನ ಅಮಾವಾಸ್ಯೆ (bheemana amavasye) ಯನ್ನು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಪತಿ ಮತ್ತು ಸಹೋದರರ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಇದರ ಮಹತ್ವ ಏನು ಎಂಬ ಮಾಹಿತಿ ಇಲ್ಲಿದೆ.

ಇಂದು ಆಷಾಢ ಮಾಸದ ಅಮಾವಾಸ್ಯೆ ಇದೆ. ಇದನ್ನು ದಕ್ಷಿಣ ಭಾರತದಲ್ಲಿ ಭೀಮನ ಅಮಾವಾಸ್ಯೆ ಎಂದು ಸಹ ಕರೆಯುತ್ತಾರೆ. ಮನೆಯ ಹೆಣ್ಣು ತನ್ನ ಗಂಡ ಹಾಗೂ ಸೋದರ (brother)ರ ಜೀವನದ ಒಳಿತಿಗಾಗಿ ಮಾಡುವ ಪೂಜೆಯೇ ಭೀಮನ ಅಮಾವಾಸ್ಯೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Latest Videos

ಭೀಮನ ಅಮಾವಾಸ್ಯೆ ವ್ರತ ಏಕೆ ಆಚರಿಸುತ್ತಾರೆ?

ಭೀಮನ ಅಮಾವಾಸ್ಯೆಯ ವ್ರತದಲ್ಲಿ ಪ್ರಮುಖವಾಗಿ ಶಿವ ಮತ್ತು ಪಾರ್ವತಿ ದೇವರನ್ನು ಆರಾಧಿಸಲಾಗುತ್ತದೆ. ಈ ದಿನದಂದು ಹೆಣ್ಣು ಮಕ್ಕಳು ಒಂದು ದಿನ ಉಪವಾಸ (fasting) ವಿದ್ದು ತಮ್ಮ ಪತಿ ಹಾಗೂ ಸಹೋದರ ಆರೋಗ್ಯ ಮತ್ತು ಆಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. 

ಆಚರಣೆ ಹೇಗೆ ಮಾಡಬೇಕು?

ಭೀಮನ ಅಮಾವಾಸ್ಯೆ ವ್ರತದಲ್ಲಿ ಕಾಳಿಕಾಂಬಾ ಎಂಬ ಮಣ್ಣಿನಿಂದ ಮಾಡಿದ ಎರಡು ದೀಪಗಳನ್ನು ಬೆಳಗಿಸಲಾಗುತ್ತದೆ. ಈ ದೀಪವು ಶಿವ ಮತ್ತು ಪಾರ್ವತಿಯನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ಭೀಮನ ಅಮಾವಾಸ್ಯೆಯ ದಿನದಂದು ಉಪವಾಸ ಆಚರಿಸುವ ಮಹಿಳೆ (woman) ಯರು ಬೇಯಿಸಿದ ಆಹಾರವನ್ನು ಸೇವಿಸಬಾರದು. ಶಿವ ಮತ್ತು ಪಾರ್ವತಿಯ ಪೂಜೆ ಮಾಡಿ ನೈವೇದ್ಯೆ ಮಾಡಿದ ನಂತರವಷ್ಟೇ ಮಹಿಳೆಯರು ಹಣ್ಣು, ಹಾಲು (milk) ಗಳನ್ನು ಸೇವಿಸಿ ಉಪವಾಸ ಆಚರಿಸಬೇಕು.

Numerology Today: ಈ ನಂಬರ್ ಇದ್ದವರು ಆಸ್ತಿ ಖರೀದಿಸುವಲ್ಲಿ ಎಚ್ಚರದಿಂದ ಇರಿ..!

 

ಪೂಜೆ ಹೇಗೆ ಮಾಡಬೇಕು?

ಭೀಮನ ಅಮಾವಾಸ್ಯೆಯ ವ್ರತವನ್ನು ಯಾವುದೇ ಶುಭ ಮುಹೂರ್ತದಲ್ಲಿ ಕೈಗೊಳ್ಳಬಹುದು. ಗಣಪತಿಯ ಪೂಜೆಯ ನಂತರ ಭೀಮೇಶ್ವರನ ಪೂಜೆ ಮಾಡಬೇಕು. ಪೂಜೆಯ ಕೊನೆಯಲ್ಲಿ ದೇವರಿಗೆ ಕಡುಬನ್ನು ನೈವೇದ್ಯವಾಗಿ ಅರ್ಪಿಸಿ ಆರತಿ ಮಾಡುವ ಮೂಲಕ ಪೂಜೆಯನ್ನು ಪೂರ್ಣಗೊಳಿಸಬೇಕು. ಇದಾದ ಬಳಿಕ ಪತಿಯ ಪಾದ ಪೂಜೆಯನ್ನು ಮಾಡಬೇಕು. ಈ ಮೂಲಕ ವ್ರತ ಆಚರಣೆ ಮಾಡಿ, ಪತಿ ಹಾಗೂ ಸಹೋದರರ ಆರೋಗ್ಯ  (health) ಮತ್ತು ಆಯುಷ್ಯ  (life) ವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಬೇಕು.

ಇಂದು ಪಿಂಡದಾನದಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿದೆ 

ಭೀಮನ ಅಮಾವಾಸ್ಯೆಯ ದಿನದಂದು ಉತ್ತರ ಭಾರತ ಸೇರಿದಂತೆ ಹಲವೆಡೆ ಪಿತೃ ತರ್ಪಣ  (Pitru Tarpana) ಮತ್ತು ಪಿಂಡದಾನವನ್ನು ಮಾಡುತ್ತಾರೆ. ಪುರಾಣದ ಪ್ರಕಾರ ಈ ದಿನದಂದು ಪಿಂಡದಾನ ಮಾಡಿದರೆ, ನಮ್ಮ ಹಿರಿಯರ  ಆತ್ಮ (soul) ಕ್ಕೆ ಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಪೂರ್ವಜ (ancestor) ರ ಪೂಜೆಯಿಂದ ಜನನ ಮತ್ತು ಮರಣದ ಚಕ್ರದಿಂದ ಅವರು ಮುಕ್ತರಾಗುತ್ತಾರೆ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಜನರು ಪುಣ್ಯ ಕ್ಷೇತ್ರಗಳಿಗೆ ತೆರಳಿ  ನದಿಯಲ್ಲಿ ಪಿಂಡದರ್ಪಣೆ ಮಾಡುತ್ತಾರೆ.

Daily Horoscope: ಇಂದು ರಾಶಿಯವರು ಹುಷಾರ್; ನಿಮ್ಮ ಮನೆಯಲ್ಲಿ ಕಳ್ಳತನ ಸಾಧ್ಯತೆ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!