ಇಂದು ಬೆಂಗಳೂರಿನಲ್ಲಿ ಒಂದು ಅಚ್ಚರಿ ನಡೆಯಲಿದ್ದು, ನಮ್ಮ ನೆರಳೇ ನಮಗೆ ಕಾಣಿಸದ ಅಪರೂಪದ ಘಟನೆ ನಡೆಯಲಿದೆ. ಹೌದು ಶೂನ್ಯ ನೆರಳಿನ ಪ್ರಭಾವದ ಅಪರೂಪದ ಖಗೋಳ ವಿದ್ಯಮಾನ ಇಂದು ನಡೆಯಲಿದೆ. ಏನಿದು ಶೂನ್ಯ ನೆರಳು ದಿನ, ಇದು ಹೇಗೆ ಸಂಭವಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.
Bengaluru Zero Shadow Day: ಇಂದು ನೀವು ಬೆಂಗಳೂರಿನಲ್ಲಿ ಇದ್ದರೆ ನಿಮ್ಮ ನೆರಳು ಎಲ್ಲಿ ಹೋಯಿತು ಎಂದು ಹುಡುಕಾಡಬೇಕಾಗುತ್ತದೆ. ಯಾಕೆಂದ್ರೆ ಇಂದು ಶೂನ್ಯ ನೆರಳು ದಿನ. ಆದ್ದರಿಂದ ಎಲ್ಲಿ ಹೋದರೂ ನಮ್ಮನ್ನು ಹಿಂಬಾಲಿಸುವ ನಮ್ಮ ನೆರಳು ಎಲ್ಲಿಗೆ ಹೋಯಿತು ಎಂದು ನೀವು ಹುಡುಕಾಡಬೇಡಿ. ಇಂದು ಬೆಂಗಳೂರಿನ ಜನರು ಮತ್ತೊಮ್ಮೆ ಶೂನ್ಯ ನೆರಳು ದಿನವನ್ನು ನೋಡಬಹುದು. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ನೆರಳನ್ನೇ ಮಾಯ ಮಾಡುವ ಸೂರ್ಯ
undefined
ಬೆಳಗ್ಗೆ ಮತ್ತು ಸಂಜೆಗೆ ಹೋಲಿಸಿದರೆ ಮಧ್ಯಾಹ್ನ ನಮ್ಮ ನೆರಳು ಪುಟ್ಟದಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ನಮ್ಮ ನಡು ನೆತ್ತಿಯ ಮೇಲೆ ಬರಲಿರುವ ಸೂರ್ಯ ನಮ್ಮ ನೆರಳನ್ನೇ ಮಾಯ ಮಾಡಲಿದ್ದಾನೆ. ಇದರಿಂದ ಎಷ್ಟೇ ಪ್ರಖರ ಬಿಸಿಲಿದ್ದರೂ ನಮ್ಮ ನೆರಳೇ ಮೂಡದಿರುವ ಪ್ರಕೃತಿಯ ವಿಸ್ಮಯ ಇಂದು ಬೆಂಗಳೂರಿನಲ್ಲಿ ಜರುಗಲಿದೆ. ಸಾಮಾನ್ಯವಾಗಿ ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಘಟಿಸುವ ಈ ವಿದ್ಯಮಾನವನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ. ಶೂನ್ಯ ನೆರಳಿನ ದಿನದಂದು ಸೂರ್ಯ ನಮ್ಮ ನಡು ನೆತ್ತಿಯ ಮೇಲೆ ಬರುವುದರಿಂದ ನೆರಳು ರೂಪುಗೊಳ್ಳುವುದಿಲ್ಲ.
ಏನಿದು ಶೂನ್ಯ ನೆರಳು?
ಶೂನ್ಯ ನೆರಳು ಎಂಬುದು ಅಪರೂಪವಾದ ಖಗೋಳ ವಿದ್ಯಮಾನವಾಗಿದ್ದು ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ಒಳಗೆ ಬರುವ ಯಾವುದೇ ವ್ಯಕ್ತಿ ಹಾಗೂ ವಸ್ತುವಿನ ನೆರಳು ಮೂಡುವುದಿಲ್ಲ. ಇಂದು ಬೆಂಗಳೂರಿನಲ್ಲಿ ಶೂನ್ಯ ನೆರಳನ್ನು ಕಾಣಬಹುದಾಗಿದ್ದು, ಸೂರ್ಯ ನಮ್ಮ ನೆತ್ತಿಯ ಮೇಲೆ ಹಾದು ಹೋಗುವಾಗ ಈ ವಿದ್ಯಮಾನ ಘಟಿಸಲಿದೆ. ನಮ್ಮ ನೆರಳಿನ ಮೇಲೆ ನಾವು ನಿಂತಿರುವುದರಿಂದ ನಮ್ಮ ನೆರಳು ನೇರವಾಗಿ ನಮ್ಮ ಕಾಲ ಕೆಳಗಿರುತ್ತದೆ. ಯಾವುದೇ ಲಂಬ ವಸ್ತುವಿನ ನೆರಳು ಕಾಣಿಸುವುದಿಲ್ಲ. ವಿಶೇಷ ಉಪಕರಣಗಳಿಲ್ಲದೇ ಇದನ್ನು ವೀಕ್ಷಿಸಬಹುದಾಗಿದೆ. ಸೂರ್ಯ ಸರಿಯಾಗಿ ನಮ್ಮ ತಲೆಯ ಮೇಲೆ ಇರುವ ಕಾರಣ, ನಮ್ಮ ನೆರಳು ನಮಗೆ ಕಾಣಿಸದು.
ಅಟೆಂಡೆನ್ಸ್‌ನಲ್ಲಿ ನನ್ನ ಮಗನೇ ಫಸ್ಟ್; A ಅಕ್ಷರದ ಹೆಸರೇ ಬೇಕು ಎನ್ನುತ್ತಿರುವುದಕ್ಕಿದೆ ಇಂಟ್ರೆಸ್ಟಿಂಗ್ ಕಾರಣ!
ವೈಜ್ಞಾನಿಕವಾಗಿ ಹೇಳುವುದಾದರೆ ಅನ್ಯ ದಿನಗಳಲ್ಲಿ ಸೂರ್ಯ ನಮ್ಮ ನೆತ್ತಿಯ ಮೇಲೆ ಇದ್ದಂತೆ ಭಾಸವಾಗುತ್ತಿದ್ದರೂ ವಾಸ್ತವದಲ್ಲಿ ತುಸು ಅತ್ತಿತ್ತ ಇರುತ್ತಾನೆ. ಆದರೆ ಶೂನ್ಯ ನೆರಳಿನ ದಿನದಂದು ಸೂರ್ಯ ಖಗೋಳ ಶಾಸ್ತ್ರದ ಪ್ರಕಾರ ಝೆನಿತ್ ಅಥವಾ ತುತ್ತತುದಿ ಎಂಬ ಕಾಲ್ಪನಿಕ ಬಿಂದುವಿನ ಮೇಲಿರುತ್ತಾನೆ. ಸೂರ್ಯ ಈ ಕಾಲ್ಪನಿಕ ಬಿಂದುವಿನ ಮೇಲೆ ಹಾದು ಹೋಗುವಾಗ ಆ ನಿರ್ದಿಷ್ಟಸ್ಥಳದಲ್ಲಿ ನೆರಳು ಮರೆಯಾಗುತ್ತದೆ. ಸೂರ್ಯ ಉಳಿದ ದಿನಗಳಲ್ಲಿ ಈ ಝೆನಿತ್‌ನ ತುಸು ಎಡ ಅಥವಾ ಬಲದಲ್ಲಿ ಇರುವುದರಿಂದ ನೆರಳು ಮೂಡುತ್ತಿರುತ್ತದೆ.
ಶೂನ್ಯ ನೆರಳು ನೋಡುವುದು ಹೇಗೆ?
ಶೂನ್ಯ ನೆರಳಿನ ಅನುಭವ ಪಡೆಯಲು ಯಾವುದೇ ವೈಜ್ಞಾನಿಕ ಉಪಕರಣದ ಅಗತ್ಯವಿಲ್ಲ. ನಿಮ್ಮ ಮನೆಯ ಅಂಗಳ, ಟೆರೇಸ್, ರಸ್ತೆ ಹೀಗೆ ಯಾವುದೇ ಬಯಲು ಪ್ರದೇಶದಲ್ಲಿ ನಿಂತು ನಿಮ್ಮನ್ನು ನೀವೇ ಪ್ರಯೋಗಕ್ಕೆ ಒಳಪಡಿಸಿ ನೆರಳು ಮರೆಯಾಗುವುದನ್ನು ನೋಡಬಹುದು. ಹಾಗೆಯೇ ಲಂಬವಾಗಿ ಒಂದು ಕೊಳವೆಯನ್ನೋ, ಕಂಬವನ್ನೋ ನಿಲ್ಲಿಸಿ ನಿಧಾನವಾಗಿ ಅದರ ನೆರಳು ಕಡಿಮೆ ಆಗುತ್ತ ಬಂದು ಕೊನೆಗೆ ನೆರಳು ಮಾಯವಾಗುವುದನ್ನು ಗಮನಿಸಬಹುದು.