ಬೆಂಗಳೂರು ಗವಿಗಂಗಾದರೇಶ್ವರನ ಅಡಿಯಿಂದ ಮುಡಿವರೆಗೆ ಸ್ಪರ್ಶಿಸಿದ ಸೂರ್ಯ ರಶ್ಮಿ

By Sathish Kumar KH  |  First Published Jan 15, 2024, 5:44 PM IST

ಮಕರ ಸಂಕ್ರಾಂತಿ ದಿನದಂದು ಸೂರ್ಯ ತನ್ನ ಪಥವನ್ನು ಬದಲಿಸುವ ಮುನ್ನ ಬೆಂಗಳೂರು ಗವಿಗಂಗಾದರೇಶ್ವರನ ಅಡಿಯಿಂದ ಮುಡಿವರೆಗೆ ಸೂರ್ಯ ರಶ್ಮಿ ಸ್ಪರ್ಶಿಸಿವೆ.


ಬೆಂಗಳೂರು (ಜ.15):  ಮಕರ ಸಂಕ್ರಾಂತಿ ದಿನದಂದು ಸೂರ್ಯ ತನ್ನ ಪಥವನ್ನು ಬದಲಿಸುವ ಮುನ್ನ ಬೆಂಗಳೂರಿನ ಐತಿಹಾಸಿಕ ಪ್ರಸಿದ್ಧ ಗವಿಗಂಗಾದರೇಶ್ವರ ದೇವರ ಮೇಲೆ ಸೂರ್ಯರಶ್ಮಿ ಈಶ್ವರನ ಅಡಿಯಿಂದ ಮುಡಿವರೆಗೆ ಸ್ಪರ್ಶವನ್ನು ಮಾಡಿದೆ. ಈ ಸೂರ್ಯ ರಶ್ಮಿ ಸ್ಪರ್ಶ ಕಾಲದಲ್ಲಿ ಈಶ್ವರನಿಗೆ ನಿರಂತರವಾಗಿ ಕ್ಷೀರ ಅಭಿಷೇಕ ಮಾಡಲಾಗುತ್ತಿತ್ತು.

ಸೂರ್ಯ ರಶ್ಮಿ ಸ್ಪರ್ಶದ ಮುನ್ನವೇ ಅಭಿಷೇಕಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಂತರ ಕಳಸದೊಂದಿಗೆ ಗರ್ಭಗುಡಿಗೆ‌ ಬಂದ  ದಿಕ್ಷೀತರು, ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತರಿಂದ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.  ನಂತರ, ಪ್ರಧಾನ ಅರ್ಚಕರಾದ ಪೂರ್ಣ ಕುಂಭ ಅಭಿಷೇಕ ಮಾಡಲಾಯಿತು. ಕೊನೆಗೆ ಸೂರ್ಯ ರಶ್ಮಿ ಶಿವ ಪಾದ ಸ್ಪರ್ಷಿಸಿ ಉತ್ತರಾಯಣಕ್ಕೆ ಪ್ರವೇಶ ಪಡೆದುಕೊಂಡಿತು.

Tap to resize

Latest Videos

ಗವಿಗಂಗಾಧರೇಶ್ವರ ದೇವಾಲಯಕ್ಕೆ ಆಗಮಿಸಿದ ಶಾಸಕ ರವಿಸುಬ್ರಮಣ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಗವಿಗಂಗದರೇಶ್ವರ ದೇವಸ್ಥಾನದಲ್ಲಿ ಸೂರ್ಯ ರಶ್ಮಿ ಶಿವನ‌ ಪದಸ್ಪರ್ಶ ಮಾಡುವ ಪುಣ್ಯ ಸಮಯಕ್ಕೆ ಭಾಗಿಯಾಗಲು ಸಹಸ್ರಾರು ಭಕ್ತರು ಬಂದಿದ್ದಾರೆ. ಕೆಲ ಜನರಿಗೆ ಮಾತ್ರ ದೇವಸ್ಥಾನದ ಒಳಗೆ ಈ ವಿಸ್ಮಯ ಕ್ಷಣ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಆದ್ರೆ ಭಕ್ತರಿಗಾಗಿ ಎಲ್ ಇಡಿ (LED Screen) ಸ್ಕ್ರೀನ್ ಹಾಕುವ ಮೂಲಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದು 700 ವರ್ಷಗಳ ಇತಿಹಾಸ ಇರುವ ದೇವಸ್ಥಾನವಾಗಿದೆ. ಭಕ್ತರ ಅನುಕೂಲಕ್ಕಾಗಿ ಸ್ಕ್ರೀನ್ ಮೂಲಕ ಸೂರ್ಯ ರಶ್ಮಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದರು. 

click me!