ಸಾಮಾನ್ಯವಾಗಿ ಭಕ್ತರು ದೇವರಿಗೆ ಹರಕೆ ಈಡೇರಿದ್ರೆ ನಗ-ನಾಣ್ಯ, ಬೆಳ್ಳಿ-ಬಂಗಾರ ನೀಡೋದು ಕಾಮನ್, ಆದ್ರೆ ಬನಹಟ್ಟಿಯ ಕಾಡಸಿದ್ದೇಶ್ವರ ಜಾತ್ರೆ ಮಾತ್ರ ಸ್ವಲ್ಪ ಡಿಫೆರೆಂಟ್. ಯಾಕಂದ್ರೆ ಇಲ್ಲಿಗೆ ಬರೋ ಭಕ್ತರು ಹರಕೆ ತೀರಿಸಲು ದೇವರಿಗೆ ಪಟಾಕಿ ಸಿಡಿಸ್ತಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಅ.05): ಸಾಮಾನ್ಯವಾಗಿ ಭಕ್ತರು ದೇವರಿಗೆ ಹರಕೆ ಈಡೇರಿದ್ರೆ ನಗ-ನಾಣ್ಯ, ಬೆಳ್ಳಿ-ಬಂಗಾರ ನೀಡೋದು ಕಾಮನ್, ಆದ್ರೆ ಬನಹಟ್ಟಿಯ ಕಾಡಸಿದ್ದೇಶ್ವರ ಜಾತ್ರೆ ಮಾತ್ರ ಸ್ವಲ್ಪ ಡಿಫೆರೆಂಟ್. ಯಾಕಂದ್ರೆ ಇಲ್ಲಿಗೆ ಬರೋ ಭಕ್ತರು ಹರಕೆ ತೀರಿಸಲು ದೇವರಿಗೆ ಪಟಾಕಿ ಸಿಡಿಸ್ತಾರೆ. ವಿಶೇಷ ಅಂದ್ರೆ ಪ್ರತಿವರ್ಷ 50 ಲಕ್ಷದಿಂದ ಹಿಡಿದು 1 ಕೋಟಿ ರೂಪಾಯಿ ಮೌಲ್ಯದ ಪಟಾಕಿಗಳನ್ನ ಸಿಡಿಸುವುದರ ಮೂಲಕ ದೇವರಿಗೆ ಹರಕೆ ತೀರಿಸಿ ಕೃತಾರ್ಥರಾಗ್ತಾರೆ. ಈ ಭಾಗದಲ್ಲಿ ಇದು ಪಟಾಕಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಈ ಕುರಿತ ವಿಶೇಷ ವರದಿ ಇಲ್ಲಿದೆ. ನೋಡಿದೆಲ್ಲೆಡೆ ರಸ್ತೆಯ ಮಧ್ಯದಲ್ಲಿಯೇ ನಿಂತು ಭಕ್ತರೆಲ್ಲರೂ ಸೇರಿ ಎಲ್ಲೆಂದರಲ್ಲಿ ಮದ್ದು ಸುಡುವುದರಲ್ಲಿಯೇ ಬ್ಯೂಸಿಯಾಗಿರೋ ದೃಶ್ಯ ಕಂಡು ಬಂದದ್ದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ.
undefined
ಹೌದು, ಇಲ್ಲಿನ ಕಾಡಸಿದ್ದೇಶ್ವರ ಜಾತ್ರೆ ಬಂತೆಂದ್ರೆ ಸಾಕು ಎಲ್ಲೆಂದರಲ್ಲಿ ಪಟಾಕಿಯದ್ದೇ ಕಾರುಬಾರು. ಯಾಕಂದ್ರೆ ಎಲ್ಲಿ ನೋಡಿದ್ರೂ ಝಗಮಗಿಸೋ ಬೆಳಕಿನ ನಡುವೆ ಪಟಾಕಿ ಸಿಡಿಮದ್ದುಗಳ ಅಬ್ಬರವೇ ಎದ್ದು ಕಾಣುತ್ತೇ. ಒಂದು ವಾರಗಳ ಕಾಲ ನಡೆಯೋ ಕಾಡಸಿದ್ದೇಶ್ವರ ಜಾತ್ರೆ ಇಂತದ್ದೊಂದು ಆಚರಣೆಗೆ ಸಾಕ್ಷಿಯಾಗುತ್ತೇ. ಈ ಮದ್ಯೆ ಭಕ್ತರು ತಮ್ಮ ಮನಸ್ಸಿನಲ್ಲಿನ ಬೇಡಿಕೆ ಈಡೇರಿದ ನಂತ್ರ ತಮ್ಮ ಶಕ್ತಿಗೆ ಅನುಸಾರವಾಗಿ ಒಬ್ಬಬ್ಬೊರು ಏನಿಲ್ಲಾ ಅಂದ್ರು 1 ಸಾವಿರ, 10ಸಾವಿರ, 1 ಲಕ್ಷ ರೂಪಾಯಿ ಮೌಲ್ಯದವರೆಗೂ ಸೇರಿ ಒಂದೇ ದಿನಕ್ಕೆ ಇಡಿ ಭಕ್ತ ಸಮೂಹ ಸೇರಿ ಅಂದಾಜು 50 ಲಕ್ಷಕ್ಕೂ ಅಧಿಕ ಮೌಲ್ಯದ ಅಂದ್ರೆ 1ಕೋಟಿ ರೂಪಾಯಿವರೆಗೆ ಮದ್ದು ಸುಡುವುದರ ಮೂಲಕ ಭಕ್ತಿಯನ್ನ ಸಮರ್ಪಿಸ್ತಾರೆ.
ಕರ್ನಾಟಕದಲ್ಲಿ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ: ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ಕಿಡಿ
ಒಂದೊಮ್ಮೆ ಮದ್ಯಾಹ್ನ 3 ಗಂಟೆಗೆ ಆರಂಭವಾಗುವ ಈ ಪಟಾಕಿ ಸಿಡಿಸೋ ಕಾರ್ಯ ಮಧ್ಯರಾತ್ರಿಯವರೆಗೂ ನಡೆಯುತ್ತೇ. ಹೀಗಾಗಿ ಇದು ಈ ಭಾಗದಲ್ಲಿ ಬನಹಟ್ಟಿ ಜಾತ್ರೆ ಪಟಾಕಿ ಜಾತ್ರೆ ಎಂದೇ ಖ್ಯಾತಿ ಪಡೆದಿದೆ ಅಂತಾರೆ ಭಕ್ತರಾದ ಶಿವಲಿಂಗ. ಇನ್ನು ಸುಮಾರು 17ನೇ ಶತಮಾನದಲ್ಲಿ ಈ ಬನಹಟ್ಟಿ ಪಟ್ಟಣದ ದಟ್ಟವಾದ ಅರಣ್ಯ ಪ್ರದೇಶವಾಗಿತ್ತಂತೆ. ಈ ಕಾಡಿನಲ್ಲಿ ವಾಸವಾಗಿದ್ದ ಕಾಡಸಿದ್ದೇಶ್ವರ ಸ್ವಾಮಿಜಿಯವರ ದರ್ಶನ ಮಾಡಬೇಕೆಂದ್ರೆ ಭಕ್ತರು ಕ್ರೂರ ಮೃಗಗಳ್ನ ದಾಟಿಕೊಂಡು ಹೋಗಬೇಕಿತ್ತು. ಅಂದು ಅವುಗಳಿಂದ ರಕ್ಷಣೆ ಪಡೆಯಲು ಭಕ್ತರು ಅಂದಿನ ಕಾಲದಲ್ಲಿ ಸಿಡಿಮದ್ದುಗಳನ್ನ ಹಾರಿಸುತ್ತಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 3 ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಅದೇ ಸಂಪ್ರದಾಯ ಇಂದಿಗೂ ಪಾರಂಪರಿಕವಾಗಿ ಮುಂದುವರೆದುಕೊಂಡು ಬಂದು ಪಟಾಕಿ ಜಾತ್ರೆಯಾಗಿ ರೂಪಾಂತರಗೊಂಡಿದೆ. ಪ್ರತಿವರ್ಷ ಈ ಜಾತ್ರೆಯಲ್ಲಿ ಅಂದಾಜು 1ಕೋಟಿ ಮೌಲ್ಯದವರೆಗೂ ಪಟಾಕಿ ಸಿಡಿಸುತ್ತಿದ್ದು, ಇದ್ರಲ್ಲಿ ರಾಜ್ಯದ ಬೆಳಗಾವ, ಗದಗ, ಹುಬ್ಬಳ್ಳಿ ಸೇರಿದಂತೆ ಮಹಾರಾಷ್ಟ್ರದ ಸಾಂಗಲಿ, ಪುನಾ, ಬಾಂಬೆ ಮೀರಜ್ ಸೇರಿ ಹೊರರಾಜ್ಯದಿಂದಲೂ ಭಕ್ತರು ಆಗಮಿಸಿ ಅತ್ಯಂತ ಸಂಭ್ರಮದಿಂದ ಪಟಾಕಿ ಜಾತ್ರೆಯನ್ನ ಮಾಡಲಾಗುತ್ತೇ ಅಂತಾರೆ ಭಕ್ತರಾದ ಸಂಗಪ್ಪ. ಒಟ್ಟಿನಲ್ಲಿ ಭಕ್ತರು ದೇವರಿಗೆ ಹರಕೆ ಹೊತ್ತು ಇಷ್ಟಾರ್ಥ ಪೂರೈಸಿದ ಕಾರಣ ಅಪಾರ ಪ್ರಮಾಣದ ಸಿಡಿಮದ್ದುಗಳನ್ನ ಸಿಡಿಸುವುದರ ಮೂಲಕವೇ ಭಕ್ತರು ಹರಕೆ ತೀರಿಸುತ್ತಿರೋದು ಮಾತ್ರ ಅಚ್ಚರಿಯ ಸಂಗತಿಯೇ ಸರಿ.