ಕ್ಯಾಲೆಂಡರ್ ಪ್ರಕಾರ, ಅನ್ನಪೂರ್ಣ ಜಯಂತಿಯನ್ನು ಮಾರ್ಗಶಿರಾ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ಇಂಥಾ ತಪ್ಪು ಮಾಡಿದ್ರೆ ತಾಯಿಯ ಕೋಪಕ್ಕೆ ಗುರಿಯಾಗುತ್ತೀರಿ ಎಚ್ಚರ..
ಅನ್ನಪೂರ್ಣ ಜಯಂತಿಗೆ ಧರ್ಮಗ್ರಂಥಗಳಲ್ಲಿ ವಿಶೇಷ ಮಹತ್ವವಿದೆ. ಪಂಚಾಂಗದ ಪ್ರಕಾರ ಅನ್ನಪೂರ್ಣ ಜಯಂತಿಯನ್ನು ಮಾರ್ಗಶೀರ್ಷ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಭೂಮಿಯ ಮೇಲೆ ಆಹಾರದ ಕೊರತೆ ಉಂಟಾದಾಗ, ತಾಯಿ ಪಾರ್ವತಿ (ಗೌರಿ) ಅನ್ನಪೂರ್ಣ ತಾಯಿಯಾಗಿ ಆಹಾರದ ದೇವತೆಯಾಗಿ ಅವತರಿಸಿದಳು ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ ಈ ದಿನದಂದು ಅನ್ನಪೂರ್ಣ ಮಾತೆಯನ್ನು ಶಾಸ್ತ್ರೋಕ್ತವಾಗಿ ಪೂಜಿಸುವವರ ಜೀವನದಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ. ಇದರೊಂದಿಗೆ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಈ ವರ್ಷ ಅನ್ನಪೂರ್ಣ ಜಯಂತಿ ಉಪವಾಸವನ್ನು ಗುರುವಾರ, 8 ಡಿಸೆಂಬರ್ 2022ರಂದು ಆಚರಿಸಲಾಗುತ್ತದೆ. ಈ ದಿನ ಯಾವ ವಿಷಯಗಳನ್ನು ತಪ್ಪಿಸಬೇಕು ಎಂದು ನಿಮಗೆ ತಿಳಿಸುತ್ತೇವೆ.
ಅನ್ನಪೂರ್ಣ ಜಯಂತಿ ಶುಭ ಮುಹೂರ್ತ(Annapurna Jayanti Shubh Muhurt)
ಪಂಚಾಂಗದ ಪ್ರಕಾರ ಅನ್ನಪೂರ್ಣ ಜಯಂತಿ ಡಿಸೆಂಬರ್ 07ರಂದು ಬೆಳಿಗ್ಗೆ 08.02ರಿಂದ ಪ್ರಾರಂಭವಾಗಿ ಡಿಸೆಂಬರ್ 08ರಂದು ಬೆಳಿಗ್ಗೆ 07.37 ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ಅನ್ನಪೂರ್ಣ ಜಯಂತಿಯನ್ನು ಡಿಸೆಂಬರ್ 08ರಂದು ಆಚರಿಸಲಾಗುತ್ತದೆ.
Gemology: ವೈಢೂರ್ಯದ ಪ್ರಯೋಜನಗಳು ಒಂದೆರಡಲ್ಲ, ಆದ್ರೂ ಬೇಕಾಬಿಟ್ಟಿ ಧರಿಸುವಂತಿಲ್ಲ!
ಅನ್ನಪೂರ್ಣ ಜಯಂತಿ 2022 ಶುಭ ಯೋಗ
ಈ ದಿನ ಸಧ್ಯ ಯೋಗ ರೂಪುಗೊಳ್ಳುತ್ತಿದೆ. ಸಧ್ಯ ಯೋಗವು ಶುಭ ಕಾರ್ಯಗಳನ್ನು ಮಾಡಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ, ಈ ಯೋಗದಲ್ಲಿ ಕಲಿಯಲು ಅಥವಾ ಕೆಲಸ ಮಾಡುವಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಮತ್ತು ಯಶಸ್ಸನ್ನು ಸಾಧಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಆಹಾರಕ್ಕೆ ಸಂಬಂಧಿಸಿದ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಅದನ್ನು ಅನ್ನಪೂರ್ಣ ಜಯಂತಿಯಿಂದ ಪ್ರಾರಂಭಿಸುವುದು ಶುಭವಾಗಿರುತ್ತದೆ.
ಸಧ್ಯ ಯೋಗ - 8 ಡಿಸೆಂಬರ್ 2022, 02:55 am - 9 ಡಿಸೆಂಬರ್ 2022, 03.12 am
ಈ ದಿನ ಈ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ
ಆಹಾರವನ್ನು ಅವಮಾನಿಸಬೇಡಿ(Do not insult food)
ಅನ್ನಪೂರ್ಣ ಜಯಂತಿಯ ದಿನ ಆಹಾರಕ್ಕೆ ಅವಮಾನ ಮಾಡಬಾರದು. ಅಂದರೆ ಆಹಾರವನ್ನು ವ್ಯರ್ಥ ಮಾಡುವುದು, ಎಸೆಯುವುದು, ಆಹಾರದ ಬಗ್ಗೆ ಹಗುರವಾಗಿ ಮಾತಾಡುವುದು ಸಲ್ಲ. ಹೀಗೆ ಮಾಡಿದರೆ ಬಡತನ ಒಕ್ಕರಿಸುತ್ತದೆ. ಆಹಾರದ ಬೆಲೆ ಅರಿವು ಮಾಡಿಸಿಯೇ ತೀರುತ್ತಾಳೆ ಅನ್ನಪೂರ್ಣೆ.
Yearly Horoscope 2023: ಕನ್ಯಾ ರಾಶಿಗೆ ಖರ್ಚೂ ಹೆಚ್ಚು, ಸಂಬಂಧಕ್ಕೂ ಬೇಕು ಹೆಚ್ಚಿನ ಕಾಳಜಿ
ಬಡವರಿಗೆ ಮತ್ತು ಭಿಕ್ಷುಕರಿಗೆ ಬರಿಕೈಲಿ ಕಳಿಸಬೇಡಿ
ಅನ್ನಪೂರ್ಣ ಜಯಂತಿಯ ದಿನದಂದು ಮನೆಗೆ ಬರುವ ಭಿಕ್ಷುಕರು ಮತ್ತು ನಿರ್ಗತಿಕರನ್ನು ಹಾಗೆಯೇ ಕಳುಹಿಸಬೇಡಿ. ಅವರಿಗೆ ಸ್ವಲ್ಪವಾದರೂ ಆಹಾರ ಧಾನ್ಯಗಳನ್ನು ದಾನ ಮಾಡಿ. ಹಾಗೆಯೇ ಅವರನ್ನು ಅವಮಾನಿಸದೆ ಪ್ರೀತಿಯಿಂದ ನಡೆಸಿಕೊಳ್ಳಿ.
ಉಪ್ಪನ್ನು ದಾನ ಮಾಡಬೇಡಿ
ಈ ದಿನದಂದು ದಾನ ಮತ್ತು ಸ್ನಾನಕ್ಕೆ ವಿಶೇಷ ಮಹತ್ವವಿದೆ. ಆದರೆ ಈ ದಿನ ಉಪ್ಪನ್ನು ದಾನ ಮಾಡಬಾರದು. ಹೀಗೆ ಮಾಡುವುದರಿಂದ ಮನೆಯ ಸುಖ-ಸಮೃದ್ಧಿ ನಾಶವಾಗುತ್ತದೆ ಮತ್ತು ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ ಇದೆ.
ಅಡಿಗೆಕೋಣೆ ಸ್ವಚ್ಛಗೊಳಿಸಿ
ಅನ್ನಪೂರ್ಣ ಜಯಂತಿಯ ದಿನದಂದು ಅಡುಗೆ ಕೋಣೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಹಾಗೆಯೇ ಅನ್ನಪೂರ್ಣ ಮಾತೆಯನ್ನು ಪೂಜಿಸಿದ ನಂತರವೇ ಆಹಾರವನ್ನು ಬೇಯಿಸಬೇಕು.
ತಾಮಸಿಕ ಆಹಾರವನ್ನು ಸೇವಿಸಬೇಡಿ
ಈ ದಿನ ಅಡುಗೆ ಮನೆಯಲ್ಲಿ ತಾಮಸಿಕ ಆಹಾರವನ್ನು ಬೇಯಿಸಬಾರದು, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ತಾಯಿ ಅನ್ನಪೂರ್ಣೆ ಕೋಪಗೊಳ್ಳುತ್ತಾಳೆ. ಇಂದು ಸಾತ್ವಿಕ ಆಹಾರ ತಯಾರಿಸಿ, ಪ್ರತಿದಿನ ಹೊಟ್ಟೆ ತುಂಬಿಸುತ್ತಿರುವ ತಾಯಿಗೆ ಧನ್ಯವಾದ ಹೇಳಿದ ಬಳಿಕವೇ ಆಹಾರ ಸೇವಿಸಬೇಕು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.