ಅಂಬಲಿ ಹಳಸಿತು- ಕಂಬಳಿ ಬೀಸಿತಲೇ ಪರಾಕ್’ ಎಂಬುದು 2023ನೇ ವರ್ಷದ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಆಗಿದೆ.ಇದನ್ನು ರಾಜ್ಯದ ಒಂದು ವರ್ಷದ ಭವಿಷ್ಯವೆಂದೇ ಹೇಳಲಾಗುತ್ತದೆ.
ವಿಜಯನಗರ (ಫೆ.7) : ‘ಅಂಬಲಿ ಹಳಸಿತು- ಕಂಬಳಿ ಬೀಸಿತಲೇ ಪರಾಕ್’ ಎಂಬುದು 2023ನೇ ವರ್ಷದ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಆಗಿದೆ.ಇದನ್ನು ರಾಜ್ಯದ ಒಂದು ವರ್ಷದ ಭವಿಷ್ಯವೆಂದೇ ಹೇಳಲಾಗುತ್ತದೆ. ಈ ದೈವ ನುಡಿಯ ಹಿನ್ನೆಲೆಯಲ್ಲಿ ವಿವಿಧ ರೀತಿಯಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಶ್ರೀಕ್ಷೇತ್ರ ಮೈಲಾರ ಲಿಂಗೆಶ್ವರ ಕಾರ್ಣಿಕೋತ್ಸವವನ್ನು ರಾಜ್ಯದ ಕೃಷಿ, ರಾಜಕೀಯ, ಉದ್ಯಮ ಹಾಗೂ ವಿವಿಧ ವಿಚಾರಗಳ ಕುರಿತು ಒಂದು ವರ್ಷದಲ್ಲಿ ಸಂಭವಿಸಬಹುದಾದ ಘಟನೆಗಳ ಭವಿಷ್ಯವೆಂದೇ ಹೇಳಲಾಗುತ್ತದೆ. ಇಂದು ಸಂಜೆ ನಡೆದ ಈ ವರ್ಷದ ಕಾರ್ಣಿಕೋತ್ಸವದಲ್ಲಿ 14 ಅಡಿ ಎತ್ತರದ ಬಿಲ್ಲು ಏರಿದ ಗೊರವಯ್ಯ ರಾಮಪ್ಪಜ್ಜ ದೈವ ವಾಣಿ ನುಡಿದಿದ್ದಾರೆ. ವಿಜಯನಗರ ಜಿಲ್ಲೆ ಮೈಲಾರದ ಡಂಕನಮರಡಿಯಲ್ಲಿ ಬಿಲ್ಲನ್ನು ಏರಿದ ಕಾರಣಿಕ ಗೊರವಯ್ಯ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ನಡೆದ ಕಾರ್ಣಿಕೋತ್ಸವ ನುಡಿದಿದ್ದಾರೆ. ‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್’ ಎಂಬುದು ಕಾರ್ಣಿಕೋತ್ಸವ ಆಗಿದ್ದು, ಇದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
undefined
'ಮಳೆ ಸಂಪಾದೀತಲೇ ಪರಾಕ್' : ಚಿಕ್ಕ ಮೈಲಾರದ ಕಾರ್ಣಿಕ ನುಡಿ
ಹಲವು ವರ್ಷಗಳು ನಂತರ ಕಾರ್ಣಿಕ ಪುನರಾರ್ತನೆ: 'ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್' ಮೈಲಾರ ಕಾರ್ಣಿಕ ನುಡಿದ ಗೊರವಯ್ಯ ರಾಮಣ್ಣ ಅವರು ನುಡಿದ ಕಾರ್ಣಿಕ ಕಳೆದ ಹತ್ತಾರು ಬಾರಿ ಪುನರಾವರ್ತನೆ ಯಾಗಿದೆ.. ಆದರೆ, ಇದರ ವಿಶ್ಲೇಷಣೆ ಮಳೆ ಬೆಳೆ ಚೆನ್ನಾಗಿ ಆಗಿ ರೈತ ಸಮುದಾಯ ಸುಖಮಯವಾಗಿರುತ್ತದೆ. ವಾಣಿಜ್ಯ ವ್ಯಾಪಾರ ವಹಿವಾಟು ಯಾವುದೇ ನಷ್ಟ ಇರುವುದಿಲ್ಲ. ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸಂಕೇತವಾಗಿದೆ ಎಂದು ತಿಳಿದುಬಂದಿದೆ. ಡೆಂಕಣಮರಡಿಯಲ್ಲಿ ಕಾರ್ಣಿಕ ವಿಶ್ಲೇಷಣೆ ಮಾಡಿದ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಈ ಹಿಂದೆಯೂ ಈ ಕಾರ್ಣಿಕ ಆಗಿದ್ದು, ಮತ್ತೆ ಮರಳಿ ಆಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯವಾಗಿ ವಿಶ್ಲೇಷಣೆ: ರಾಜ್ಯದಲ್ಲಿ ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ. ಭಗವಂತ ದೈವವಾಣಿ ಮೂಲಕ ತಿಳಿಸಿದ್ದಾನೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಪಟ್ಟ ಲಭ್ಯವಾಗುತ್ತದೆ. ಹಾಗಾದ್ರೆ ಪರೋಕ್ಷವಾಗಿ ಕುರಬ ಸಮುದಾಯದ ವ್ಯಕ್ತಿಯೆ ರಾಜ್ಯವನ್ನಾಳುತ್ತಾರಾ? ಎಂಬ ಕುತೂಹಲ ಎಲ್ಲಾ ಪಕ್ಷಗಳಲ್ಲಿ ತೀವ್ರ ಕೂತುಹಲ ಹಾಗೂ ಚರ್ಚೆ ಹುಟ್ಟು ಹಾಕಿದೆ.
ರೈತಾಪಿ ವರ್ಗದ ಮೇಲೆ ವಿಶ್ಲೇಷಣೆ: ರಾಜ್ಯದಲ್ಲಿ ಮಳೆ ಬೆಳೆ ಜಾಸ್ತಿ ಆಗಲಿದ್ದು,ಸಮೃದ್ದಿಯಾಗಲಿದೆ. ರೈತರಿಗೆ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ. ಈ ಸೂಚನೆ ಸಿಕ್ಕಿದೆ ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕದ ದೈವ ನುಡಿಯನ್ನು ವಿಶ್ಲೇಷಣೆ ಮಾಡಿ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಮೈಲಾರಲಿಂಗನ ಜಾತ್ರಾ ವೈಭವ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು
ಚಿಕ್ಕ ಮೈಲಾರದಲ್ಲಿ ‘ಮಳೆ ಸಂಪಾದೀತಲೇ ಪರಾಕ್’ ಕಾರ್ಣಿಕ:
ನಿನ್ನೆ ಸೋಮವಾರ ಸಂಜೆ ಹಾವನೂರ (ಚಿಕ್ಕ ಮೈಲಾರ) ಸಮೀಪದ ಜೋಗ ಮರಡಿಯಲ್ಲಿ ಮೈಲಾರ ಲಿಂಗೇಶ್ವರನ ಕಾರ್ಣಿಕದ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ಅವರು ‘ಮಳೆ ಸಂಪಾದೀತಲೇ ಪರಾಕ್’ ಎಂದು ದೈವನುಡಿ ಹೇಳಿದ್ದರು. ಈಗ ದೊಡ್ಡ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವೂ ಹೊರಬಿದ್ದಿದ್ದು, ಎರಡೂ ಕಾರ್ಣಿಕೋತ್ಸವ ಸಾಮ್ಯತೆ ಇದೆ ಎಂದು ಹೇಳಲಾಗುತ್ತಿದೆ. ಡೆಂಕನ ಮರಡಿಯಲ್ಲಿ ನುಡಿಯುವ ಕಾರ್ಣಿಕ ದಿನದ ಹಿಂದಿನ ದಿನ (ಭರತ ಹುಣ್ಣಿಮೆಯ ಮರುದಿನ) ಇಲ್ಲಿ ಕಾರ್ಣಿಕ ಹೇಳುತ್ತಾ ಬರಲಾಗಿದೆ. ಈ ಬಾರಿಯ ಭವಿಷ್ಯವು ಅನೇಕ ರೀತಿಯಲ್ಲಿ ಅರ್ಥೈಸಲಾಗಿದ್ದು ಪ್ರಸ್ತಕ ವರ್ಷ ರೈತರಿಗೆ ಈ ಕಾರ್ಣಿಕ ಹೆಚ್ಚು ಮಹತ್ವ ನೀಡಿದ್ದು, ಈ ವರ್ಷದ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿ ಆಗುವುದು ಎಂದು ಭವಿಷ್ಯವನ್ನು ಅರ್ಥೈಸಲಾಗಿತ್ತು.