ಧನ್ತೇರಸ್ 2026 : ಆರೋಗ್ಯವಿದ್ರೆ ಆನಂದ ! ನೀರು ತುಂಬಿದ ಗ್ಲಾಸನ್ನು ಮನೆಯ ಈ ದಿಕ್ಕಿನಲ್ಲಿಡಲು ಮರೆಯಬೇಡಿ

Published : Oct 27, 2026, 08:14 PM IST
Dhanvantari

ಸಾರಾಂಶ

ಧನ್ತೇರಸ್ ಹಬ್ಬ ಬಂತೆಂದ್ರೆ ಚಿನ್ನ, ಬೆಳ್ಳಿ, ಪಾತ್ರೆ ಸೇರಿದಂತೆ ವಿವಿಧ ವಸ್ತುಗಳ ಖರೀದಿ ಸಂಭ್ರಮ ಮನೆಮಾಡುತ್ತೆ. ಇದರ ಜೊತೆಗೆ ಮನೆಯಲ್ಲಿ ಧನ-ಸಮೃದ್ಧಿ ನೆಲೆಸಲಿ ಅಂತ ಜನರು ಪ್ರಾರ್ಥನೆ ಮಾಡ್ತಾರೆ. ಧನ್ತೇರಸ್ ಹಬ್ಬದ ಮಹತ್ವ ಕೇವಲ ಹಣ, ಆಸ್ತಿ ಸಂಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಆರೋಗ್ಯಕರ ಮತ್ತು ದೀರ್ಘಾಯುಷ್ಯದ ಜೀವನಕ್ಕಾಗಿ ಪ್ರಾರ್ಥಿಸುವುದೂ ಈ ಹಬ್ಬದ ಪ್ರಮುಖ ಆಶಯ.

ಸಮುದ್ರ ಮಂಥನದ ಸಂದರ್ಭದಲ್ಲಿ ಅಮೃತ ಕಲಶದೊಂದಿಗೆ ಪ್ರತ್ಯಕ್ಷರಾದ ಭಗವಾನ್ ಧನ್ವಂತರಿಯನ್ನು ಆಯುರ್ವೇದದ ಪ್ರವರ್ತಕ ಹಾಗೂ ದೇವತೆಗಳ ವೈದ್ಯ ಎಂದು ಪರಿಗಣಿಸಲಾಗುತ್ತದೆ. ಅವರ ಆರಾಧನೆಯ ಮೂಲಕ ಉತ್ತಮ ಆರೋಗ್ಯ, ರೋಗಮುಕ್ತ ಜೀವನ ಮತ್ತು ದೀರ್ಘಾಯುಷ್ಯವನ್ನು ಕೋರುವ ಸಂಪ್ರದಾಯವಿದೆ. ಕಾಲಕ್ರಮೇಣ ಧನ್ವಂತರಿಯ ತ್ರಯೋದಶಿ ಎಂಬ ಹೆಸರು ಧನ್ತೇರಸ್ ಎಂದು ಪ್ರಸಿದ್ಧವಾಯಿತು. ಈ ಹಬ್ಬದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಕೋರುವುದಕ್ಕೆ ಹೆಚ್ಚಿನ ಮಹತ್ವ ದೊರೆಯಿತು. ಆದರೆ ಆರೋಗ್ಯವೇ ಜೀವನದ ಅತ್ಯಮೂಲ್ಯ ಸಂಪತ್ತು ಎಂಬುದನ್ನು ಮರೆಯಬಾರದು.

ಆರೋಗ್ಯಕ್ಕೆ ಮನೆಯ ಯಾವ ದಿಕ್ಕು ಮುಖ್ಯ?

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಿವಿಧ ದಿಕ್ಕುಗಳು ಜೀವನದ ವಿಭಿನ್ನ ಅಂಶಗಳು ಮತ್ತು ಶಕ್ತಿಗಳೊಂದಿಗೆ ಸಂಬಂಧ ಹೊಂದಿವೆ. ಉತ್ತರ ಮತ್ತು ಈಶಾನ್ಯ ದಿಕ್ಕಿನ ನಡುವಿನ ಉತ್ತರ–ಉತ್ತರ–ಈಶಾನ್ಯ ಭಾಗವನ್ನು ಆರೋಗ್ಯ, ಶುದ್ಧತೆ ಮತ್ತು ದೇಹದ ಶಕ್ತಿಯೊಂದಿಗೆ ಸಂಬಂಧಿಸಿ ನೋಡಲಾಗುತ್ತದೆ. ಈಶಾನ್ಯ ದಿಕ್ಕಿಗೆ ಮೊದಲು ಬರುವ ಈ ಪ್ರದೇಶ ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ಇರಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಯಾರಾದರೂ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರ ಕೋಣೆಯ ದಿಕ್ಕು ಮತ್ತು ಅಲ್ಲಿರುವ ವಸ್ತುಗಳ ವ್ಯವಸ್ಥೆಯ ಬಗ್ಗೆಯೂ ಗಮನ ಹರಿಸಬೇಕು ಎಂಬುದು ವಾಸ್ತು ನಂಬಿಕೆ.

ಈ ದಿಕ್ಕಿನಲ್ಲಿ ನೀರಿಡಿ

ವಾಸ್ತು ನಂಬಿಕೆಯ ಪ್ರಕಾರ ಉತ್ತರ–ಉತ್ತರ–ಈಶಾನ್ಯ ದಿಕ್ಕು ಜಲತತ್ವಕ್ಕೆ ಸಂಬಂಧಿಸಿದೆ. ಹೀಗಾಗಿ ಈ ಪ್ರದೇಶದಲ್ಲಿ ಶುದ್ಧ ನೀರನ್ನು ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಪ್ರತಿದಿನ ಸ್ವಚ್ಛವಾದ ನೀರು ತುಂಬಿದ ಗ್ಲಾಸ್ ಇಡುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇದೆ.

ಯಾವ ಲೋಹದ ಗ್ಲಾಸ್‌ ನಲ್ಲಿ ನೀರು ಇಡಬೇಕು?

ವಾಸ್ತು ನಂಬಿಕೆಗಳ ಪ್ರಕಾರ ನೀರು ಇಡಲು ಸ್ಟೀಲ್, ಗಾಜು, ಹಿತ್ತಾಳೆ ಮತ್ತು ಬೆಳ್ಳಿಯ ಪಾತ್ರೆಗಳನ್ನು ಬಳಸಬಹುದು. ಬೆಳ್ಳಿಯನ್ನು ಶೀತಲತೆ ಮತ್ತು ಜಲತತ್ವದೊಂದಿಗೆ ಸಂಬಂಧಿಸಲಾಗುತ್ತದೆ. ತಾಮ್ರವನ್ನು ಅಗ್ನಿತತ್ವದೊಂದಿಗೆ ಸಂಬಂಧಿಸುವುದರಿಂದ ಉತ್ತರ–ಉತ್ತರ–ಈಶಾನ್ಯ ದಿಕ್ಕಿನಲ್ಲಿ ತಾಮ್ರದ ಬದಲಿಗೆ ಬೆಳ್ಳಿ, ಗಾಜು ಅಥವಾ ಸ್ಟೀಲ್ ಪಾತ್ರೆಯಲ್ಲಿ ನೀರು ಇಡಲು ವಾಸ್ತು ಶಾಸ್ತ್ರದಲ್ಲಿ ಸಲಹೆ ನೀಡಲಾಗುತ್ತದೆ.

ಧನ್ತೇರಸ್ನಲ್ಲಿ ಆರೋಗ್ಯಕ್ಕೂ ಸಂಕಲ್ಪ ಮಾಡಿ

ಹಣ ಮತ್ತು ಚಿನ್ನ ಸಂಪಾದಿಸುವುದಷ್ಟೇ ಜೀವನದ ಗುರಿಯಾಗಬಾರದು. ಗಳಿಸಿದ ಸಂಪತ್ತನ್ನು ಅನುಭವಿಸಲು ಆರೋಗ್ಯವೂ ಮುಖ್ಯ. ಆದ್ದರಿಂದ ಧನ್ತೇರಸ್ ಸಂದರ್ಭದಲ್ಲಿ ಧನ್ವಂತರಿಯನ್ನು ಪೂಜಿಸುವುದರ ಜೊತೆಗೆ ಸ್ವಚ್ಛತೆ ಕಾಪಾಡುವುದು, ಸಮತೋಲಿತ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಸಂಕಲ್ಪವನ್ನೂ ಮಾಡಬಹುದು.

PREV
Read more Articles on
click me!

Recommended Stories

ಇಂದಿನಿಂದ 17 ದಿನ ಈ 5 ರಾಶಿಗೆ ಸುವರ್ಣ ಕಾಲ, ಹಣದ ಹರಿವು ಹೆಚ್ಚಳ; ಅದೃಷ್ಟವೇ ಬದಲಾಗಲಿದೆ!
November 2026: ನವೆಂಬರ್‌ನಲ್ಲಿ ಗ್ರಹಗಳ ಅಪರೂಪದ ಚಲನೆ: ಈ 4 ರಾಶಿಗಳ ಬದುಕಿನಲ್ಲಿ ಶುರುವಾಗಲಿದೆ 'ಸುವರ್ಣಯುಗ'!