Flirty zodiacs: ಮೀಟ್ ಆದವರ ಬಳಿಯೆಲ್ಲ ಫ್ಲರ್ಟ್ ಮಾಡೋ ಮೀಟರ್ ಈ ರಾಶಿಗಳದು!

By Suvarna News  |  First Published Dec 11, 2022, 2:32 PM IST

ಈ ಐದು ರಾಶಿಗಳ ಜನರು ಸಿಕ್ಕಿದವರ ಬಳಿಯೆಲ್ಲ ಫ್ಲರ್ಟ್ ಮಾಡುತ್ತಲೇ ಸಂಭಾಷಣೆ ನಡೆಸುತ್ತಾರೆ. ಇವರೊಂಥರ ಫ್ಲರ್ಟಿಂಗ್ ಗುರುಗಳು. ಫ್ಲರ್ಟ್ ಮಾಡೋದು ಇವರಿಗೆ ನೀರು ಕುಡಿದಷ್ಟು ಸುಲಭ. ಹಾಗಂಥ ಇದು ಕೇವಲ ಟೈಂ ಪಾಸ್‌ಗಾಗಿಯಷ್ಟೇ.


ಫ್ಲರ್ಟ್ ಮಾಡೋದು ಎಲ್ಲರಿಗೂ ಸುಲಭವಲ್ಲ. ಉತ್ತಮ ಫ್ಲರ್ಟಿಂಗ್ ಕಲೆ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ. ಹಾಗಂಥ ಎಲ್ಲರೂ ಎಲ್ಲರ ಬಳಿಯೂ ಫ್ಲರ್ಟ್ ಮಾಡುವುದಿಲ್ಲ. ಆದರೆ, ಈ ಐದು ರಾಶಿಗಳ ಜನರಿದ್ದಾರಲ್ಲಾ, ಅವರಿಗೆ ಫ್ಲರ್ಟ್ ಮಾಡೋದೂ ಒಂದು ಹವ್ಯಾಸ. ಅವರದನ್ನು ಎಂಜಾಯ್ ಮಾಡುತ್ತಾರೆ. ಸಿಕ್ಕಸಿಕ್ಕವರ ಬಳಿ ಸಾಮಾನ್ಯ ಮಾತುಕತೆಯನ್ನೂ ಫ್ಲರ್ಟೀಶಿಯಸ್ ಆಗಿ ಮಾಡುತ್ತಾರೆ. ಈ ನಡವಳಿಕೆ ಅವರಿಗೆ ಕಾಲಕ್ಷೇಪವಾಗಿದೆ. ಹೀಗೆ ಎದುರಾದವರೊಂದಿಗೆಲ್ಲ ಫ್ಲರ್ಟ್ ಮಾಡುವ ರಾಶಿಚಕ್ರಗಳು ಯಾವೆಲ್ಲ ನೋಡೋಣ..

1. ಮಿಥುನ ರಾಶಿ(Gemini)
ಮಿಥುನ ರಾಶಿಯವರಿಗೆ ಫ್ಲರ್ಟಿಂಗ್ ತುಂಬಾ ಅನಾಯಾಸವಾಗಿ ಬರುತ್ತದೆ. ಸಿಕ್ಕಿರುವ 5 ನಿಮಿಷದ ಮಾತುಕತೆಯಲ್ಲೂ ಫ್ಲರ್ಟ್ ಮಾಡುವ ಚಾಕಚಕ್ಯತೆ ಇವರದು. ಅವರು ಒಬ್ಬ ವ್ಯಕ್ತಿಯೊಂದಿಗೆ ಬಹಳ ಸಮಯದವರೆಗೆ ಸಂವಹನ ನಡೆಸಬಹುದು. ಅವರ ಮಾತುಗಾರಿಕೆಗೆ ಎದುರಿನವರು ಮೂಕವಿಸ್ಮಿತರಾಗಬಹುದು. ಮಿಥುನ ರಾಶಿಯವರು ಎಲ್ಲರನ್ನೂ ತಮ್ಮ ಮಾತಿನ ಮೋಡಿಗೆ ಸೆಳೆದುಕೊಳ್ಳುವ ಸಲುವಾಗಿ ಕೊಂಚ ಫ್ಲರ್ಟಿಂಗ್ ಟೆಕ್ನಿಕ್ಸ್ ಬಳಸುತ್ತಾರೆ. ಅವರು ತಮಾಷೆ ಮಾಡತ್ತಿದ್ದಾರೋ, ನಿಮಜವಾಗಿಯೂ ಫ್ಲರ್ಟ್ ಮಾಡುತ್ತಿದ್ದಾರೋ ತಿಳಿಯದೆ ಎದುರಿರುವವರು ಗೊಂದಲವನ್ನೇ ಎಂಜಾಯ್ ಮಾಡಬಹುದು.

Tap to resize

Latest Videos

2. ಕರ್ಕಾಟಕ ರಾಶಿ(Cancer)
ಕರ್ಕ ರಾಶಿಯನ್ನು ಸಾಮಾನ್ಯವಾಗಿ ಅವರ ಅತಿ ಭಾವುಕ ನಡವಳಿಕೆಗಾಗಿ ಖಂಡಿಸಲಾಗುತ್ತದೆಯಾದರೂ, ಅವರು ಮುಗ್ಧ ಮಿಡಿತದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅವರು ಫ್ಲರ್ಟಿಂಗ್ ಅನ್ನು ಸಾಮಾನ್ಯಗೊಳಿಸುವ ರಾಶಿಚಕ್ರ ಚಿಹ್ನೆಯವರು. ಏಕೆಂದರೆ ಇದು ಕರ್ಕಾಟಕ ರಾಶಿಯ ವ್ಯಕ್ತಿತ್ವದ ವಿಶಿಷ್ಟ ಲಕ್ಷಣವಾಗಿದೆ. ಮೋಜಿನ ತಮಾಷೆಗೆ ಯಾರಾದರೂ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಮುಂಚಿತವಾಗಿ ತಿಳಿದುಕೊಂಡು ಅವರೊಂದಿಗೆ ತಮಾಷೆ ಬೆರೆತ ದನಿಯಲ್ಲಿ ಫ್ಲರ್ಟ್ ಮಾಡುತ್ತಾರೆ. 

3. ಸಿಂಹ ರಾಶಿ(Leo)
ತಮ್ಮ ವರ್ಚಸ್ಸಿನ ಮೂಲಕ, ಸಿಂಹ ರಾಶಿಯವರು ಯಾರನ್ನಾದರೂ ಆಕರ್ಷಿಸಬಹುದು. ಅವರು ಫ್ಲರ್ಟಿಂಗನ್ನು ಸರಳವಾಗಿ ಕಾಣುವಂತೆ ಮಾಡುವುದರಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ. ಅವರ ಸಾಹಸದ ಬಯಕೆಯಿಂದಾಗಿ, ಅವರು ಕೆಲಸದಲ್ಲಿ ಬಹಳಷ್ಟು ಅಭಿಮಾನಿಗಳನ್ನು ಆಕರ್ಷಿಸಲು ಸಮರ್ಥರಾಗಿದ್ದಾರೆ. ಅವರು ಗಮನ ಪಡೆಯಲು ಬಯಸುವವರು. ತಮ್ಮ ಈ ಫ್ಲರ್ಟಿಂಗ್ ಸ್ಕಿಲ್ಸ್ ಮೂಲಕ ಎಲ್ಲರ ಗಮನ ಸೆಳೆಯುವುದು ಅವರಿಗೆ ಗೊತ್ತು. ಇವರು ಬಹಳ ನಗುನಗುತ್ತಾ ಮಾತನಾಡುವಾಗ ಯಾರೇ ಆಗಲಿ, ಇವರ ಫ್ಲರ್ಟಿಂಗ್ ಮಾತುಗಳನ್ನು ಎಂಜಾಯ್ ಮಾಡದೇ ಇರಲಾರರು. 

4. ತುಲಾ(Libra)
ತುಲಾ ಜನ್ಮಜಾತ ಮೋಹನಾಂಗಿ ಮತ್ತು ಪ್ರೀತಿಯ ಸಂಕೇತವಾಗಿದೆ, ಆದರೆ ಅವರು ಯಾವಾಗಲೂ ಶಾಶ್ವತ ಸಂಬಂಧವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಫ್ಲರ್ಟ್ ಮಾಡುವುದಿಲ್ಲ. ಅವರು ಭಾಷಣಕಾರರಾಗಿ ಬಹಿರಂಗವಾಗಿ ಹೊರಹೊಮ್ಮುವ ವೇದಿಕೆಯ ಉಪಸ್ಥಿತಿಯನ್ನು ಹೊಂದಿದ್ದಾರೆ. ಅವರು ಓಲೈಸುವ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವವರು.  ಎಲ್ಲರ ಬಳಿಯೂ ಅತಿ ಸಲುಗೆಯಿಂದ ಮಾತನಾಡಬಲ್ಲರು. ಈ ಸಲುಗೆ ಫ್ಲರ್ಟಿಂಗ್ ಮಾತುಕತೆಗೆ ತಿರುಗುತ್ತದೆ. 

 

click me!