ದುನಿಯಾ ವಿಜಿ ಬಾಳಿನ 'ಕೀರ್ತಿ'ಯ ಅಂದಿನ ನೆನಪಿದು

Published : Sep 24, 2018, 06:01 PM ISTUpdated : Sep 24, 2018, 06:10 PM IST
ದುನಿಯಾ ವಿಜಿ ಬಾಳಿನ 'ಕೀರ್ತಿ'ಯ ಅಂದಿನ ನೆನಪಿದು

ಸಾರಾಂಶ

ದುನಿಯಾ ವಿಜಯ್ ಅವರಿಗೆ ಒಂದಲ್ಲ, ಒಂದು ಸಂಕಟ ಎದುರಾಗುತ್ತಿದೆ. ಈ ನಟನ ಬಾಳಲ್ಲಿ ಮೂರನೇಯವರ ಪ್ರವೇಶದಿಂದ ಪತ್ನಿಯೊಂದಿಗಿನ ಸಂಬಂಧ ಹಳಸಿತ್ತು. ಪತ್ನಿಯೊಂದಿಗೆ ಮೂಡಿದ ವಿರಸದಿಂದ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಎಲ್ಲವೂ ಸರಿ ಹೋದಂತೆ ಕಾಣಿಸುತ್ತಿತ್ತು. ಇದೀಗ ಹಲ್ಲೆ ಪ್ರಕರಣದಲ್ಲಿ ಕಂಬಿ ಎಣಿಸುತ್ತಿದ್ದು, ದಾಂಪತ್ಯದ ಬಿರುಕುಗಳೂ ಬಟಾ ಬಯಲಾಗುತ್ತಿವೆ. ಈ ಸಂದರ್ಭದಲ್ಲಿ ಬಾಳ ಗೆಳತಿ ಎರಡು ವರ್ಷಗಳ ಹಿಂದೆ ದುನಿಯಾ ವಿಜಯ್ ಬಗ್ಗೆ ಹೇಳಿದ್ದೇನು?ನೋಡಿ ವೀಡಿಯೋ.

ಬೆಂಗಳೂರು: ಸದ್ಯಕ್ಕೆ ದುನಿಯಾ ವಿಜಯ್ ಅವರ ಬಂಧನವಾಗಿದೆ. ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ಕನ್ನಡದ ಈ ನಟ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಅಷ್ಟೇ ಅಲ್ಲ ಪತ್ನಿ ನಾಗರತ್ನ ಹಾಗೂ ಜೀವದ ಗೆಳತಿ ಕೀರ್ತಿ ನಡುವಿನ ವೈಷಮ್ಯವೂ ತಾರಕಕ್ಕೇರಿದ್ದು, ಇದೇ ಸಂದರ್ಭದಲ್ಲಿಯೇ ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ.

ದುನಿಯಾ ವಿಜಯ್, ಪತ್ನಿ ನಾಗರತ್ನ ಹಾಗೂ ಜೀವದ ಗೆಳತಿ ಕೀರ್ತಿ ಗೌಡ ಮೂವರ ನಡುವಿನ ವೈಮನಸ್ಸೂ ಈ ಸಂದರ್ಭದಲ್ಲಿ ಹೊರ ಬರುತ್ತಿದ್ದು, ಇದು ವಿಜಯ್ ಅವರಿಗೆ ಮತ್ತೊಂದು ಸಂಕಟವನ್ನು ತಂದಿದೆ. ಅವರು ಜೈಲು ಪಾಲಾಗಿದ್ದಕ್ಕಿಂತಲೂ ಪತ್ನಿಯರ ಜಗಳದಿಂದ ಹೆಚ್ಚು ಆತಂಕಗೊಂಡಿದ್ದಾರಂತೆ.

ಎರಡು ವರ್ಷಗಳ ಹಿಂದೆ ಕೀರ್ತಿ ಹಾಗೂ ವಿಜಯ್ ಅವರ ಸಂಬಂಧ ಬೆಳಕಿಗೆ ಬಂದಿದ್ದು, ಆಗ ಕೀರ್ತಿ ವಿಜಯ್ ಬಗ್ಗೆ ಹೇಳಿದ್ದೇನು? ನೋಡಿ ವೀಡಿಯೋ.

PREV
click me!

Recommended Stories

ನನಗೆ ಪುನರ್ಜನ್ಮ ಬೇಡ ಎಂದಿದ್ಯಾಕೆ ನಟ ಪ್ರತೀಕ್ ಬಬ್ಬರ್..? ಅವರಿಗೆ ಯಾರೋ ಕಾಯ್ತಿದಾರಂತೆ..!
Cannes 2025 : ಅಬ್ಬಾಬ್ಬ, ಎಲ್ಲರ ಕಣ್ಮನಸೆಳೆದ ಆಲಿಯಾ ಭಟ್ ನ್ಯೂ ಲುಕ್ ಹೇಗಿದೆ ನೋಡಿ!