ಮದುವೆ ನಂತರ ಆಫರ್ ಕಡಿಮೆ ಆಗಿಲ್ಲ: ಮೇಘನಾ ರಾಜ್

Published : Sep 21, 2018, 10:41 AM ISTUpdated : Sep 21, 2018, 10:45 AM IST
ಮದುವೆ ನಂತರ ಆಫರ್ ಕಡಿಮೆ ಆಗಿಲ್ಲ: ಮೇಘನಾ ರಾಜ್

ಸಾರಾಂಶ

ಮದುವೆ ಆದ ತಕ್ಷಣ ಕನ್ನಡದ ನಟಿಯರಿಗೆ ಮಹಿಳಾ ಪ್ರಧಾನ ಚಿತ್ರಗಳೇ ಯಾಕೆ ಸಿಗುತ್ತವೋ ಅದು ನಂಗೊತ್ತಿಲ್ಲ. ಆದ್ರೆ ನನಗೆ ಇದುವರೆಗೂ ಅಂತ ಅನುಭವ ಆಗಿಲ್ಲ. ನನಗೆ ಮಾತ್ರ ಕಮರ್ಷಿಯಲ್ ಚಿತ್ರಗಳಲ್ಲೇ ಅಭಿನಯಿಸುವ ಆಫರ್ ಬರುತ್ತಿವೆ ಅನ್ನೋದು ಖುಷಿ ಇದೆ!- ಮೇಘನಾ ರಾಜ್ 

ಬೆಂಗಳೂರು (ಸೆ. 20):  ಅವರ ಹೊಸ ಚಿತ್ರ ‘ಇರುವುದೆಲ್ಲವೂ ಬಿಟ್ಟು’, ಮದುವೆ ನಂತರದ ಬದುಕು ಇತ್ಯಾದಿ ಕುರಿತು ಮೇಘನಾ ಮಾತನಾಡಿದ್ದು ಇಲ್ಲಿದೆ.

1. ಮದುವೆ ನಂತರ ಆಫರ್ ಕಡಿಮೆ ಆಗಿಲ್ಲ

ಮದುವೆ ಆದ ನಂತರ ಕನ್ನಡದ ನಟಿಯರಿಗೆ ಅವಕಾಶ ಕಮ್ಮಿ ಆಗುತ್ತವೆ ಎನ್ನುವ ಮಾತುಗಳನ್ನು ನಾನೂ ಕೇಳಿದ್ದೇನೆ. ಇಲ್ಲವೇ ಅವರನ್ನು ಬಹುತೇಕ ಮಹಿಳಾ ಪ್ರಧಾನ ಚಿತ್ರಗಳಿಗೇ ಸೀಮಿತಗೊಳಿಸಲಾಗುತ್ತಿದೆ ಎನ್ನುವ ಮಾತುಗಳು ಇವೆ. ಆದರೆ ನನಗೆ ಮಾತ್ರ ಅಂತಹ ಅನುಭವ ಈವರೆಗೂ ಆಗಿಲ್ಲ.

ಅದೃಷ್ಟವಶಾತ್, ಮದುವೆಯ ನಂತರವೂ ನನಗೆ ಆಫರ್ ಕಮ್ಮಿ ಆಗಿಲ್ಲ. ಇದುವರೆಗೂ ನನ್ನನ್ನು ಸಾಕಷ್ಟು ನಿರ್ದೇಶಕರು ಭೇಟಿ ಮಾಡಿ ಕತೆ ಹೇಳಿದ್ದಾರೆ. ಈ ಪೈಕಿ ಒಂದೆರೆಡು ಪ್ರಾಜೆಕ್ಟ್ ಇಷ್ಟರಲ್ಲೇ ಫೈನಲ್ ಆಗುವ ಹಂತದಲ್ಲಿವೆ.

2.  ಇರುವುದೆಲ್ಲವೂ ಬಿಟ್ಟು ಒಂದೊಳ್ಳೆ ಸಿನಿಮಾ

ಮದುವೆ ಆದ ನಂತರ ತೆರೆ ಮೇಲೆ ಬರುತ್ತಿರುವ ಮೊದಲ ಚಿತ್ರವಿದು. ಮದುವೆಗೂ ಮುಂಚೆಯೇ ಈ ಚಿತ್ರದ ಚಿತ್ರೀಕರಣ ಆಗಿತ್ತು. ಪೂರ್ವಿ ಹೆಸರಿನ ಪಾತ್ರ ನನ್ನದು. 25 ರಿಂದ 30 ವರ್ಷದ ಒಳಗಿನ ಒಬ್ಬ ಹುಡುಗಿ. ಖಾಸಗಿ ಜೀವನಕ್ಕಿಂತ ವೃತ್ತಿಯೇ ಮುಖ್ಯ ಎನ್ನುವ ಆಕೆಯ ವ್ಯಕ್ತಿತ್ವದ ಮೂರು ಮುಖಗಳು ಇಲ್ಲಿವೆ. ಆಕೆ ಪಕ್ಕಾ ಮಾಡ್ರನ್ ಹುಡುಗಿ. ಸಾಮಾನ್ಯವಾಗಿ ಇದು ನನ್ನ ರಿಯಲ್ ಬದುಕಿಗೆ ತದ್ವಿರುದ್ಧವಾದ ಪಾತ್ರ. ಲಿವ್ ಇನ್ ಟುಗೆದರ್ ಎನ್ನುವ ಬದುಕಿನ ಇನ್ನೊಂದು ಶೈಲಿ ಬೇರೆಯವರಿಗೆ ಹೇಗೆ ಕಾಣಿಸುತ್ತದೆಯೋ ಗೊತ್ತಿಲ್ಲ, ನಾನು ಮಾತ್ರ ಶುದ್ಧ ಸೌತ್ ಇಂಡಿಯನ್ ಹುಡುಗಿ.

ಇಲ್ಲಿನ ಆಚಾರ-ವಿಚಾರ, ಸಂಪ್ರದಾಯಗಳ ಪ್ರಕಾರ ಬದುಕಿನ ಶೈಲಿಯೂ ಇದ್ದರೆ ಚೆಂದ ಎನ್ನುವ ಸಿದ್ಧಾಂತ ನನ್ನದು. ಆದರೂ, ಆ ಪಾತ್ರಕ್ಕೆ ತಕ್ಕಂತೆ ಅಭಿನಯಿಸುವಾಗ ಒಂದಷ್ಟು ಸವಾಲು ಎನಿಸಿದ್ದು ನಿಜ. ನಾನು ಎನ್ನುವುದಕ್ಕಿಂತ ಆ ಪಾತ್ರವಾಗಿ ಅಭಿನಯಿಸಿದ್ದೇನೆ.

3. ನಟನೆ ಬೇಡ ಅಂತ ಯಾರೂ ಹೇಳಿಲ್ಲ

ಮದುವೆ ನಂತರ ಮುಂದೇನು ಎನ್ನುವುದು ಸಹಜವಾಗಿಯೇ ಕೇಳಿ ಬರುವ ಪ್ರಶ್ನೆ. ನಟಿಸುತ್ತಾರೋ ಇಲ್ಲವೋ ಅಂತ ಅನುಮಾನ ಇದ್ದೇ ಇರುತ್ತೆ. ಆದರೆ ನನ್ನ ವಿಚಾರದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಎರಡು ಫ್ಯಾಮಿಲಿಗೂ ಇಂಡಸ್ಟ್ರಿ ಎನು ಅನ್ನೋದು ಗೊತ್ತೇ ಇದೆ. ಹಾಗೆಯೇ ಚಿರು ಕೂಡ ನಟ. ಇಬ್ಬರಿಗೂ ನಾವೇನು ಅನ್ನೋದು ಗೊತ್ತಿದೆ. ಹಾಗಾಗಿ ನನ್ನ ಆಸಕ್ತಿಯಂತೆಯೇ ನಟನೆ ಮುಂದುವರೆಯುತ್ತದೆ. ಚಿರು ನನಗೆ ಸಲಹೆ ನೀಡುತ್ತಾರೆ. ನಾನು ಕೂಡ ಅವರಿಗೆ ಸಲಹೆ ಕೊಡುತ್ತೇನೆ. ಈ ವಾತಾವರಣದಿಂದಲೋ ಏನೋ ಮದುವೆ ನಂತರವೂ ನನಗೆ ಆಫರ್ ನಿಂತಿಲ್ಲ. ಕತೆ ಕೇಳುತ್ತಿದ್ದೇನೆ.

4. ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ

ಎಲ್ಲರಿಗೂ ಇಂತಹ ಆಸೆ ಇದ್ದೇ ಇರುತ್ತೆ. ನಮಗೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಆಸೆಯಿದೆ. ಸದ್ಯಕ್ಕೆ ಅಂತಹ ಯಾವುದೇ ಅವಕಾಶ ಸಿಕ್ಕಿಲ್ಲ. ಮುಂದೊಂದು ದಿನ ಆ ಅವಕಾಶ ಸಿಕ್ಕರೆ ಇಬ್ಬರೂ ಒಂದೇ ಚಿತ್ರದಲ್ಲಿ ಅಭಿನಯಿಸುವುದು ನಿಶ್ಚಿತ. 

PREV
click me!

Recommended Stories

ನನಗೆ ಪುನರ್ಜನ್ಮ ಬೇಡ ಎಂದಿದ್ಯಾಕೆ ನಟ ಪ್ರತೀಕ್ ಬಬ್ಬರ್..? ಅವರಿಗೆ ಯಾರೋ ಕಾಯ್ತಿದಾರಂತೆ..!
Cannes 2025 : ಅಬ್ಬಾಬ್ಬ, ಎಲ್ಲರ ಕಣ್ಮನಸೆಳೆದ ಆಲಿಯಾ ಭಟ್ ನ್ಯೂ ಲುಕ್ ಹೇಗಿದೆ ನೋಡಿ!