ಲೋಕ ಅಖಾಡಕ್ಕೆ ಪ್ರಿಯಾಂಕಾ ವಾದ್ರಾ ?

Published : Mar 28, 2019, 10:34 AM IST
ಲೋಕ ಅಖಾಡಕ್ಕೆ ಪ್ರಿಯಾಂಕಾ ವಾದ್ರಾ ?

ಸಾರಾಂಶ

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅಭ್ಯರ್ಥಿಗಳ ಆಯ್ಕೆಯು ನಡೆಯುತ್ತಿದ್ದು, ಪಕ್ಷ ಬಯಸಿದಲ್ಲಿ ಕಣಕ್ಕೆ ಇಳಿಯುವುದಾಗಿ ಪ್ರಿಯಾಂಕ ಗಾಂಧಿ ಘೋಷಿಸಿದ್ದಾರೆ. 

ಲಖನೌ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಲೋಕಸಭಾ ಚುನಾವಣೆಗೆ ಸ್ಪರ್ಧೆ ಬಗ್ಗೆ ನಿರಾಕರಿಸುತ್ತಲೇ ಬಂದಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪಕ್ಷ ಬಯಸಿದ್ದೇ ಆದಲ್ಲಿ ಚುನಾವಣೆ ರಾಜಕೀಯಕ್ಕೆ ಧುಮುಕಲು ಸಿದ್ಧ ಎಂದು ಹೇಳಿದ್ದಾರೆ. 

ಆದಾಗ್ಯೂ, ಪ್ರಿಯಾಂಕಾ ಸ್ಪರ್ಧೆ ಕುರಿತು ಇದುವರೆಗೂ ಕಾಂಗ್ರೆಸ್‌ ಹೈಕಮಾಂಡ್‌ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಉತ್ತರ ಪ್ರದೇಶದಲ್ಲಿ ಬುಧವಾರ ಚುನಾವಣೆ ರಾಜಕೀಯಕ್ಕೆ ಧುಮುಕುತ್ತೀರಾ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ನೇರವಾಗಿ ಏಕೆ ಸ್ಪರ್ಧಿಸಬಾರದು ಎಂದು ಮರು ಪ್ರಶ್ನೆ ಹಾಕಿದರು. ಈ ಮೂಲಕ ಪತ್ರಕರ್ತರನ್ನೇ ಒಂದು ಕ್ಷಣ ಅವಕ್ಕಾಗಿಸಿದರು. ಅಲ್ಲದೆ, ಪಕ್ಷ ಬಯಸಿದ್ದಲ್ಲಿ ಸ್ಪರ್ಧೆಗೆ ಸಿದ್ಧ ಎಂದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!