ವೈರಲ್ ಚೆಕ್: ವೋಟ್‌ಗಾಗಿ ಗೂಗಲ್ ಸಿಇಒ ಪಿಚೈ ಬಂದ್ದಿದ್ರಾ?

By Web DeskFirst Published Apr 20, 2019, 12:17 PM IST
Highlights

ಗೂಗಲ್ ಸಿಇಒ ಸುಂದರ್ ಪಿಚೈ ಅಮೆರಿಕದಿಂದ ಭಾರತಕ್ಕೆ ಬಂದು ಮತ ಚಲಾಯಿಸಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇದರ ಹಿಂದಿನ ಸತ್ಯಾ ಸತ್ಯತೆ ಏನು? ಇಲ್ಲಿದೆ ವಿವರ

ನವದೆಹಲಿ[ಏ.20]: ಎರಡನೇ ಹಂತದ ಲೋಕಸಭಾ ಚುನಾವಣೆ ಗುರುವಾರ ಮುಕ್ತಾಯವಾಗಿದೆ. ಈ ವೇಳೆ ನೂರಾರು ಸೆಲೆಬ್ರಿಟಿಗಳು ತಮ್ಮ ಹಕ್ಕು ಚಲಾಯಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಗೂಗಲ್ ಸಿಇಒ ಸುಂದರ್ ಪಿಚೈ ಅಮೆರಿಕದಿಂದ ಭಾರತಕ್ಕೆ ಬಂದು ಮತ ಚಲಾಯಿಸಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ‘ಪೂರ್ ಗೈಸ್ ಸೇಯಿಂಗ್’ ಎಂಬ ಫೇಸ್‌ಬುಕ್ ಪೇಜ್ ಇದನ್ನು ಶೇರ್ ಮಾಡಿದ್ದು, ಈಗಾಗಲೇ 1200ಬಾರಿ ಶೇರ್ ಆಗಿದೆ

ಆದರೆ ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಪರಿಶೀಲನೆ ನಡೆಸಿ ದಾಗ ಇದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ರಿವರ್ಸ್ ಇಮೇಜ್ ನಲ್ಲಿ ಪರಿಶೀಲಿಸಿದಾಗ 2017ರಲ್ಲಿ ಸುಂದರ್ ಪೀಚೈ ಖರಗ್ಪುರ ಐಐಟಿಗೆ ಭೇಟಿ ನೀಡಿದ್ದರು.

Also got to visit my alma mater (and old dorm room!) for the first time in 23 years. Thanks to everyone for the warm welcome! pic.twitter.com/OUn7mlKGI7

— Sundar Pichai (@sundarpichai)

ಅದನ್ನೇ ತಾವೇ ಫೋಟೋ ಹಾಕಿ ಟ್ವೀಟ್ ಮಾಡಿದ್ದರು. ಅಲ್ಲದೆ ಸುಂದರ್ ಪೀಚೈ ತಮಿಳುನಾಡಿನಲ್ಲು ಜನಿಸಿದರೂ ಕೂಡ ಅಮೆರಿಕದ ಪೌರತ್ವ ಪಡೆದಿದ್ದಾರೆ. ಹಾಗಾಗಿ ಅವರಿಗೆ ಮತ ಚಲಾಯಿಸುವ ಹಕ್ಕು ಇಲ್ಲ

click me!