ಎಷ್ಟು ಧೈರ್ಯ ನಿಮ್ಗೆ?: ಸೂಟ್‌ಕೇಸ್ ಮುಟ್ಟಿದ ಅಧಿಕಾರಿಗಳ ಮೇಲೆ ಧರ್ಮೇಂದ್ರ ಗರಂ!

By Web DeskFirst Published Apr 18, 2019, 2:21 PM IST
Highlights

ಎರಡನೇ ಹಂತದ ಮತದಾನ ಪ್ರಕ್ರಿಯೆಲ್ಲಿ ಭಾರತ ಬ್ಯುಸಿ| ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ| ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ| ಸೂಟ್‌ಕೇಸ್ ತಪಾಸಣೆಗೆ ಮುಂದಾದ ಚುನಾವಣಾಧಿಕಾರಿಗಳ ಮೇಲೆ ಧರ್ಮೇಂದ್ರ ಪ್ರಧಾನ್ ಕಿಡಿ|  ಚುನಾವಣಾಧಿಕಾರಿಗಳ ಮೇಲೆ ಹರಿಹಾಯ್ದ ಧರ್ಮೇಂದ್ರ ಪ್ರಧಾನ್ ವಿಡಿಯೋ ವೈರಲ್| ಕೇಂದ್ರ ಸಚಿವರ ವಿರುದ್ಧ ಕ್ರಮಕ್ಕೆ ಬಿಜೆಡಿ, ಕಾಂಗ್ರೆಸ್ ಒತ್ತಾಯ|

ಭುವನೇಶ್ವರ್(ಏ.18): ಚುನವಣಾ ಪ್ರಚಾರದ ವೇಳೆ ತಮ್ಮ ಸೂಟ್‌ಕೇಸ್ ತಪಾಸಣೆಗೆ ಮುಂದಾದ ಚುನವಣಾ ಅಧಿಕಾರಿಗಳ ಮೇಲೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಿಟ್ಟಾದ ಪ್ರಸಂಗ ನಡೆದಿದೆ.

ತಮ್ಮ ಬಳಿ ಇದ್ದ ಸೂಟ್‌ಕೇಸ್‌ನ್ನು ತಪಾಸಣೆ ಮಾಡಲು ಮುಂದಾದಾಗ, ಧರ್ಮೇಂದ್ರ ಪ್ರಧಾನ್ ಚುನಾವಣಾಧಿಕಾರಿಗಳ ಮೇಲೆ ಸಿಟ್ಟಾಗಿದ್ದಾರೆ.

Please watch the arrogance of BJP leader and Union Minister Dharmendra Pradhan. The way he threatens and rebukes Officers on Election Commission work and stops them from checking his sealed suitcase which is rumored to be carrying.....? pic.twitter.com/xnXb5v2CL6

— Dr. Sasmit Patra (@sasmitpatra)


ಚುನಾವಣಾಧಿಕಾರಿಗಳ ಮೇಲೆ ಹರಿಹಾಯ್ದ ಧರ್ಮೇಂದ್ರ ಪ್ರಧಾನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕೇಂದ್ರ ಸಚಿವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Biju Janata Dal (BJD) files a complaint with Election Commission demanding action against Dharmendra Pradhan for allegedly 'misbehaving & preventing govt officers from conducting their duties of checking his helicopter along with a sealed suitcase in his possession yesterday' pic.twitter.com/HOZZs5x0Qc

— ANI (@ANI)

ಇನ್ನು ಧರ್ಮೇಂದ್ರ ಪ್ರಧಾನ್ ವರ್ತನೆ ಖಂಡಿಸಿ ಬಿಜೆಡಿ ಮತ್ತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಂದ್ರ ಸಚಿವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!