ಹಿಂದು ಉಗ್ರವಾದ ಎನ್ನೋ ಪರಿಕಲ್ಪನೆಯೇ ಇಲ್ಲ: ಅಮಿತ್ ಶಾ

By Web DeskFirst Published Apr 24, 2019, 12:54 PM IST
Highlights

ದೇಶದಲ್ಲಿ ಮೂರು ಹಂತಗಳ ಚುನಾವಣೆ ಮುಗಿದಿದ್ದು, ಇನ್ನೂ ನಾಲ್ಕು ಹಂತಗಳ ಚುನಾವಣೆ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚುನಾವಣಾ ಪ್ರಚಾರ ನಡೆಸಿದ್ದು, ಸಾಧ್ವಿ ಪ್ರಜ್ಞಾ ಸಿಂಗ್ ಉಮೇದುವಾರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಛತ್ರಪುರ್: ಹಿಂದೂ ಧರ್ಮದಲ್ಲಿ ಉಗ್ರವಾದ ಎಂಬ ಪರಿಕಲ್ಪನೆಯೇ ಇಲ್ಲ ಎನ್ನುವ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾಲೆಗಾಂವ್ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಬಿಜೆಪಿ ಭೋಪಾಲ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿರುವುದನ್ನು ಸರ್ಮಥಿಸಿಕೊಂಡಿದ್ದಾರೆ.

'ಸನಾತನ ಸಂಸ್ಕೃತಿಯಾದ ಹಿಂದೂ ಧರ್ಮ ಯಾರಿಗೂ, ಎಂದೆಂದಿಗೂ ಹಾನಿ ಮಾಡುವುದಿಲ್ಲ. ಆದರೆ, ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಈ ಧರ್ಮಕ್ಕೆ ಉಗ್ರವಾದ ಹಣೆಪಟ್ಟಿ ನೀಡಿದೆ. ಇದು ಖಂಡನೀಯ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದೂ ಧರ್ಮಕ್ಕೆ ಉಗ್ರವಾದದ ಕಳಂಕ ತಂದೊಡ್ಡಿದ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಹರಿಹಾಯ್ದ ಶಾ,  'ಇವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ,' ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ದೇಶದ ರಕ್ಷಣೆಯೇ ಬಿಜೆಪಿ ಆದ್ಯತೆ ಎಂದಿರುವ ಶಾ, ಬಾಲಾಕೋಠ್ ಸರ್ಜಿಕಲ್ ಸ್ಟ್ರೈಕ್‌ಗೆ ಸಾಕ್ಷಿ ಕೇಳುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. 

2008ರ ಮಾಲೆಗಾಂವ್ ಸ್ಫೋಟ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ.

ಏಪ್ರಿಲ್ 18 ಹಾಗೂ 23ರಂದು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಗಿದಿದ್ದು, ರಾಷ್ಟ್ರದ ವಿವಿಧೆಡೆ ಇನ್ನೂ ನಾಲ್ಕು ಹಂತದ ಚುನಾವಣೆ ನಡೆಯಲಿದೆ.
 

click me!