ಪತಿಯನ್ನು ನೆನೆಯುತ್ತಲೇ ತೇಜಸ್ವಿಗೆ ಶುಭಕೋರಿದ ತೇಜಸ್ವಿನಿ ಅನಂತ್ ಕುಮಾರ್!

Published : May 23, 2019, 10:04 AM IST
ಪತಿಯನ್ನು ನೆನೆಯುತ್ತಲೇ ತೇಜಸ್ವಿಗೆ ಶುಭಕೋರಿದ ತೇಜಸ್ವಿನಿ ಅನಂತ್ ಕುಮಾರ್!

ಸಾರಾಂಶ

ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭ| ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನ ಪತಿಯನ್ನು ನೆನೆದ ತೇಜಸ್ವಿನಿ ಅನಂತ್ ಕುಮಾರ್| ಬಿಜೆಪಿ ಹಾಗೂ ತೇಜಸ್ವಿ ಸೂರ್ಯಗೆ ಶುಭ ಕೋರಿದ ಅನಂತ್ ಕುಮಾರ್ ಪತ್ನಿ

ಬೆಂಗಳೂರು[ಮೇ.23]: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಮತದಾನ ಪ್ರಕ್ರಿಯೆ ಶುರುವಾಗಿದ್ದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಿರುವಾಗ ಈ ಕ್ಷೇತ್ರದ ಮಾಜಿ ಸಂಸದ, ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಟ್ವೀಟ್ ಒಂದನ್ನು ತಮ್ಮ ಪತಿಯನ್ನು ನೆನಪಿಸಿಕೊಂಡಿದ್ದಾರೆ ಹಾಗೂ ಇದೇ ಸಂದರ್ಭದಲ್ಲಿ ತೇಜಸ್ವಿ ಸೂರ್ಯಗೆ ಶುಭ ಕೋರಿದ್ದಾರೆ.

ಟ್ವೀಟ್ ಮಾಡಿರುವ ತೇಜಸ್ವಿನಿ ಅನಂತ್ ಕುಮಾರ್ 'ಬೆಂಗಳೂರು ದಕ್ಷಿಣದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸಲಿದೆ. 1991ರಲ್ಲಿ ಅನಂತ್ ಕುಮಾರ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ತೆರೆದಿದ್ದರು. 1996ರಿಂದ ತಮ್ಮ ಕಠಿಣ ಪರಿಶ್ರಮ ಹಾಗೂ ಜನಸೇವೆಯಿಂದ ಅವರು ಸತತ ಆರು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದರು. ತೇಜಸ್ವಿ ಸೂರ್ಯ ಹಾಗೂ ಬಿಜೆಪಿಗೆ ನನ್ನ ಶುಭ ಹಾರೈಕೆಗಳು'  ಎಂದಿದ್ದಾರೆ.

ಆರಂಭಿಕ ಟ್ರೆಂಡ್ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ತೇಜಸ್ವಿನಿ 'ಆರಂಭಿಕ ಟ್ರೆಂಡ್ ಬಿಜೆಪಿಗೆ ಸಿಹಿ ಕೊಟ್ಟಿದೆ. ಇದು ತುಂಬಾ ಒಳ್ಳೆಯ ವಿಚಾರ' ಎಂದಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!