ಸುವರ್ಣನ್ಯೂಸ್-ಕನ್ನಡಪ್ರಭ ಮಹಾ ಸಮೀಕ್ಷೆ: ಹುಷಾರ್ ಮತದಾರನ ಮಾಡಿದ್ರೆ ಉತ್ಪ್ರೇಕ್ಷೆ!

By Web DeskFirst Published Apr 4, 2019, 8:58 PM IST
Highlights

2019ರ ಲೋಕಸಭೆ ಚುನಾವಣೆಗೆ ಕ್ಷಣಗಣನೆ| ರಾಷ್ಟ್ರೀಯ ಹಬ್ಬಕ್ಕೆ ಸಜ್ಜಾಗಿದೆ ಭಾರತ| ರಾಜ್ಯದ ಮತದಾರನ ನಾಡಿಮಿಡಿತ ಅರಿಯಲು ಮುಂದಾದ ಸುವರ್ಣನ್ಯೂಸ್-ಕನ್ನಡಪ್ರಭ| AZ ರಿಸರ್ಚ್ ಸಹಯೋಗದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ| 28 ಲೋಕಸಭಾ ಕ್ಷೇತ್ರಗಳ ಪೈಕಿ 15 ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ| ಸಮೀಕ್ಷೆಯಲ್ಲಿ ಒಟ್ಟು 7,500 ಮತದಾರರು ಭಾಗಿ| ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಯಾರಿಗೆ ಲಾಭ?

ಬೆಂಗಳೂರು(ಏ.04): 2019ರ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ರಾಷ್ಟ್ರೀಯ ಹಬ್ಬ ಎಂದೇ ಪರಿಗಣಿಸಲ್ಪಡುವ ಸಾರ್ವತ್ರಿಕ ಚುನಾವಣೆಗೆ ದೇಶ ಸಜ್ಜಾಗಿದೆ.

2019ರಲ್ಲಿ ದೇಶದ ಭವಿಷ್ಯವನ್ನು ಯಾವ ಪಕ್ಷದ ಕೈಗೆ ಕೊಡಬೇಕು ಎಂಬುದನ್ನು ಮತದಾರ ಈಗಾಗಲೇ ನಿರ್ಧರಿಸಿದಂತಿದೆ. ರಾಜ್ಯದಲ್ಲೂ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, 28 ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಪಕ್ಷ ಅಧಿಕ ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂಬುದರ ಕುರಿತೂ ತೀವ್ರ ಕುತೂಹಲ ಮೂಡಿದೆ.

Latest Videos

ಅದರಂತೆ ರಾಜ್ಯದ ಮತದಾರನ ಅಂತರಾಳ ಅರಿಯಲು ಪ್ರಯತ್ನ ಪಟ್ಟಿರುವ ಸುವರ್ಣನ್ಯೂಸ್-ಕನ್ನಡಪ್ರಭ  ಎಝೆಡ್ ರಿಸರ್ಚ್ ಸಹಯೋಗದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಪ್ರಮುಖವಾಗಿ ಮೂರು ರಾಜಕೀಯ ಪಕ್ಷಗಳ ಬಲಾಬಲ, ಮತದಾರನಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷದ ಕುರಿತು ಇರುವ ಅಭಿಪ್ರಾಯ ಸೇರಿದಂತೆ ಹಲವು ಮಹತ್ವದ ವಿಚಾರಗಳ ಮೇಲೆ ಸಮೀಕ್ಷೆ ನಡೆಸಲಾಗಿದೆ.

"

ಇನ್ನು ಸುವರ್ಣನ್ಯೂಸ್-ಕನ್ನಡಪ್ರಭ AZ ರಿಸರ್ಚ್ ಸಹಯೋಗದಲ್ಲಿ ನಡೆದ ಸಮೀಕ್ಷೆಯಲ್ಲಿ ರಾಜ್ಯದ ಮತದಾರನಿಗೆ ಕೇಳಿದ ಪ್ರಮುಖ ಪ್ರಶ್ನೆಗಳು ಇಂತಿವೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಗಳಿಸಲಿದೆಯೇ?
ಗೊತ್ತಿಲ್ಲ: ಶೇ.15
ಗಳಿಸಬಹುದು:ಶೇ.43
ಖಂಡಿತಾ ಇಲ್ಲಾ:ಶೇ.21
ಖಂಡಿತ ಹೌದು:ಶೇ.21

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅತಿ ಹೆಚ್ಚು ಲಾಭ ತಂದುಕೊಡುವುದು ಯಾರಿಗೆ?
ಗೊತ್ತಿಲ್ಲ: ಶೇ.12
ಬಿಜೆಪಿಗೆ: ಶೇ.20
ಜೆಡಿಎಸ್-ಕಾಂಗ್ರೆಸ್ ಎರಡಕ್ಕೂ: ಶೇ.22
ಕಾಂಗ್ರೆಸ್ ಗೆ-ಶೇ.26
ಜೆಡಿಎಸ್ ಗೆ-ಶೇ.20


ಸಮೀಕ್ಷೆ ನಡೆಸಿದ ಬಗೆ ಹೇಗೆ?:

ಸುವರ್ಣನ್ಯೂಸ್-ಕನ್ನಡಪ್ರಭ AZ ರಿಸರ್ಚ್ ಸಹಯೋಗದಲ್ಲಿ ನಡೆದ ಸಮೀಕ್ಷೆಯಲ್ಲಿ ಒಟ್ಟು 7,500 ಮತದಾರರನ್ನು ಸಮೀಕ್ಷೆಗೊಳಪಡಿಸಿದ್ದು, 28 ಲೋಕಸಭಾ ಕ್ಷೇತ್ರಗಳ ಪೈಕಿ  15 ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ ಪ್ರಮುಖ ಭಾಗಗಳನ್ನು ಅಂದರೆ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗ ಹೀಗೆ ಎಲ್ಲಾ ಪ್ರದೇಶಗಳನ್ನೂ ಒಳಗೊಂಡಿದೆ.

click me!