'ಮಂಡ್ಯ: ನಿಖಿಲ್‌ಗೆ ಸುಮಲತಾ ಬೆಂಬಲಿಸುತ್ತಾರೆ...'

Published : Mar 16, 2019, 01:34 PM ISTUpdated : Mar 16, 2019, 01:51 PM IST
'ಮಂಡ್ಯ: ನಿಖಿಲ್‌ಗೆ ಸುಮಲತಾ ಬೆಂಬಲಿಸುತ್ತಾರೆ...'

ಸಾರಾಂಶ

ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರ ಸುಮಲತಾ ಹಾಗೂ ನಿಖಿಲ್ ಸ್ಪರ್ಧೆಯಿಂದ ಅತೀವ ಕುತೂಹಲ ಹುಟ್ಟಿಸಿದೆ. ಆದರೆ, ಕಡೇ ಕ್ಷಣದಲ್ಲಿ ಸುಮಲತಾ ಒತ್ತಡಕ್ಕೆ ಮಣಿದು ಕಣದಿಂದ ಹೊರ ಸರಿಯುತ್ತಾರಾ? 

ಮಂಡ್ಯ: ಜೆಡಿಎಸ್ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಗೌಡರನ್ನು ಘೋಷಿಸಲಾಗಿದೆ. ಕಾಂಗ್ರೆಸ್‌ನಿಂದ ಅಂಬರೀಷ್ ಪತ್ನಿ ಸುಮಲತಾಗೆ ಟಿಕೆಟ್‌ ನೀಡುವುದಿಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದು, ಅವರು ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಅತೀವ ಕುತೂಹಲ ಕೆರಳಿಸಿರುವ ರಾಜಕೀಯ ಜಿದ್ದಾಜಿದ್ದಿಯ ನಡುವೆ, 'ಯಾರದ್ದೋ ಒತ್ತಡದಿಂದ ಸುಮಲತಾ ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ಪಟ್ಟು ಹಿಡಿದಿದ್ದು, ಈಗಲೂ ಅವರು ನಿಖಿಲ್‌ಗೆ ಬೆಂಬಲಿಸುವ ವಿಶ್ವಾಸವಿದೆ,' ಎಂದು ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

'ನಿಖಿಲ್ ಕುಮಾರಸ್ವಾಮಿ ಮತ್ತು ಅಭಿಷೇಕ್ ಆತ್ಮೀಯ ಸ್ನೇಹಿತರು. ಸುಮಲತಾ ಅವರು ಮನಸು ಮಾಡಿ ಮಗನ ಸ್ನೇಹಿತನನ್ನು ಮಗನಂತೆ ಕಾಣಬಹುದಿತ್ತು. ಅಂಬರೀಶ್ ಅಣ್ಣನವರೇ ಚುನಾವಣೆ ಬೇಡ ಅಂದಿದ್ದರು. ಮನೆ ಬಾಗಿಲಿಗೆ ಬಂದ ಬಿ ಫಾರಂನ್ನು ನಿರಾಕರಿಸಿದ್ದರು. ಈಗ ಸುಮಲತಾ ಅವರು ಚುನಾವಣೆಗೆ ನಿಲ್ಲಲು ಮುಂದಾಗಿದ್ದಾರೆ. ಸುಮಕ್ಕಾ ಅವರಿಗೂ ಏಕೆ ಅಂತಾ ನಾನು ಮನವಿ ಮಾಡಿದ್ದೆ. ಅಂಬರೀಶ್ ಕುಮಾರಸ್ವಾಮಿ ಬಾಂಧವ್ಯ ಹಾಗೂ ನಿಖಿಲ್ ಅಭಿ ಬಾಂಧವ್ಯ ಈ ಎಲ್ಲಾ ನೋಡಿ ಸುಮಲತಾ ಅಂಬರೀಶ್‌ ನಿಖಿಲ್ ಅವರನ್ನು ಬೆಂಬಲಿಸುತ್ತಾರೆ,' ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿರುವುದ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

'ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದರೂ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ. ಮಂಡ್ಯ ಜನರ ಋಣ ತೀರಿಸಲು ಇದೊಂದು ಒಳ್ಳೆಯ ಅವಕಾಶ,' ಎಂದು ಸುಮಲತಾ ಈಗಾಗಲೇ ಪುನರುಚ್ಛರಿಸಿದ್ದು, ಮಂಡ್ಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!