ಡಿ ಬಾಸ್ ಅಭಿಮಾನಿಯ ಡಿಫರೆಂಟ್ ಹೆರ್ ಸ್ಟೈಲ್, ವೈರಲ್ ಆದ ಸುಮಕ್ಕ ಗೆಲುವು..!

Published : May 22, 2019, 10:13 PM ISTUpdated : May 22, 2019, 10:19 PM IST
ಡಿ ಬಾಸ್ ಅಭಿಮಾನಿಯ ಡಿಫರೆಂಟ್ ಹೆರ್ ಸ್ಟೈಲ್, ವೈರಲ್ ಆದ ಸುಮಕ್ಕ ಗೆಲುವು..!

ಸಾರಾಂಶ

ಸಿನಿಮಾ ಸ್ಟಾರ್ ಗಳಿಗೆ, ಕ್ರಿಕೆಟ್ ಆಟಗಾರರಿಗೆ ಎಂತೆಂಥದೋ ರೀತಿಯ ಅಭಿಮಾನಿಗಳು ಇರುವುದನ್ನು ಕಂಡಿದ್ದೇವೆ. ವಿಭಿನ್ನ ಹೆರ್ ಸ್ಟೈಲ್, ಮೈಗೆ ಬಣ್ಣ ಬಳಿದುಕೊಳ್ಳುವುದು ಎಲ್ಲವೂ ಸಾಮಾನ್ಯ ಎಂಬ ಕಾಲವೇ ಬಂದಿದೆ. ಆದರೆ ಇಲ್ಲೊಬ್ಬ ಅಭಿಮಾನಿ  ಲೋಕಸಮರದ ಫಲಿತಾಂಶಕ್ಕೆ ವಿಭಿನ್ನವಾಗಿ ಸಿದ್ಧವಾಗಿದ್ದಾನೆ.

ಬೆಂಗಳೂರು[ಮೇ. 22] ರಣ ರಣ ಮಂಡ್ಯದ ಫಲಿತಾಂಶ ಉಳಿದ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಅತಿ ಹೆಚ್ಚು ಕುತೂಹಲ ಕೆರಳಿಸಿಸಿರುವ ಅಖಾಡ. ದೋಸ್ತಿಗಳ ಪ್ರತಿನಿಧಿಯಾಗಿ  ನಿಖಿಲ್ ಕುಮಾರಸ್ವಾಮಿ ಇನ್ನೊಂದು ಕಡೆ ಅಭಿಮಾನದ ಪ್ರತೀಕ ಎಂಬಂತೆ ಸುಮಲತಾ ಅಂಬರೀಶ್.. ಇಬ್ಬರ ನಡುವಿನ ಕಾದಾಟದ ಅಂತಿಮ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭವಾಗಿದೆ.

ಆದರೆ ಇಲ್ಲೊಬ್ಬ ಪಕ್ಕಾ ಅಭಿಮಾನಿ ವಿಭಿನ್ನ ಕೇಶ ವಿನ್ಯಾಸ ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾನೆ. ದರ್ಶನ್ ಅಭಿಮಾನಿಯಾಗಿರುವಾತ ಒಂದು ಕಡೆ ಡಿ ಬಾಸ್ ಎಂದು ಬರೆಸಿಕೊಂಡಿದ್ದು ಇನ್ನೊಂದು ಕಡೆ ಸುಮಕ್ಕ ಗೆಲುವು ಎಂದು ಬರೆಸಿಕೊಂಡಿದ್ದಾನೆ.

ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಮಂಡ್ಯ ಸಂಸದ

ಒಟ್ಟಿನಲ್ಲಿ ಅಭಿಮಾನದ ಭರಾಟೆ ಫಲಿತಾಂಶಕ್ಕೂ ಮುನ್ನವೇ ಜೋರಾಗಿದ್ದು ರಿಸಲ್ಟ್ ಎನೇ ಬಂದರೂ ಒಂದಿಷ್ಟು ವಿಶೇಷ, ವಿಭಿನ್ನ ಸುದ್ದಿಗಳಿಗೆ ಫಲಿತಾಂಶ ಬರವನ್ನೇನೂ ಮಾಡಲ್ಲ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!