ವೋಟ್ ಮಾಡಲು ಹೋಗುವವರಿಗೆ ಶುಭ ಸುದ್ದಿ, ಉತ್ತರ, ದಕ್ಷಿಣ ಕರ್ನಾಟಕಕ್ಕೆ ಒಟ್ಟು 3 ವಿಶೇಷ ರೈಲು

By Web DeskFirst Published Apr 14, 2019, 10:04 PM IST
Highlights

ಮತದಾನ ಮಾಡಲು ಬರುವವರಿಗಾಗಿ ವಿಶೇಷ ರೈಲು ಸೇವೆ| ರಾಜ್ಯದ ದಕ್ಷಿಣ ಭಾಗದಲ್ಲಿ ಮೊದಲ ಹಂತ ಏ.18 ರಂದು ಮತ್ತು ಉತ್ತರ ಕರ್ನಾಟಕದಲ್ಲಿ ಏ.23 ರಂದು ಮತದಾನ ಮಾಡಲು ಹೋಗುವವರಿಗೆ ಟ್ರೈನ್ ಗಳ ವ್ಯವಸ್ಥೆ| ನೈರುತ್ಯ ರೈಲ್ವೆ ವಲುದಿಂದ 3 ಟ್ರೈನ್ ಗಳ ವ್ಯವಸ್ಥೆ| ಈ ವಿಶೇಷ ಟ್ರೈನ್ ಗಳ ವೇಳಾಪಟ್ಟಿ ವಿವರ ಈ ಕೆಳಗಿನಂತಿದೆ.

ಬೆಂಗಳೂರು, [ಏ.14]: ಲೋಕಸಭೆ ಚುನಾವಣೆ ಪ್ರಯುಕ್ತ ನೈಋುತ್ಯ ರೈಲ್ವೆ ಇಲಾಖೆಯು ಬೆಂಗಳೂರಿನಿಂದ ಮೂರು ಹೆಚ್ಚುವರಿ ರೈಲುಗಳ ಸೇವೆ ನೀಡಿದೆ.

ರಾಜ್ಯದ ದಕ್ಷಿಣ ಭಾಗದಲ್ಲಿ ಮೊದಲ ಹಂತ ಏ.18 ರಂದು ಮತ್ತು ಉತ್ತರ ಕರ್ನಾಟಕದಲ್ಲಿ ಏ.23 ರಂದು ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ವೋಟ್ ಮಾಡಲು ತೆರಳುವವರಿಗೆ ಯಾವುದೇ ತೊಂದರೆಯಾಗದಂತೆ ಮಲೆನಾಡು ಭಾಗಕ್ಕೆ ಯಶವಂತಪುರ-ಕಾರವಾರ ರೈಲು, ಉತ್ತರ ಕರ್ನಾಟಕ ಭಾಗಕ್ಕೆ ಯಶವಂತಪುರ-ಬೆಳಗಾವಿಗೆ ಎರಡು ಒಟ್ಟು ಮೂರು ರೈಲುಗಳು ಸಂಚರಿಸಲಿವೆ.

ಜನರ ಅನುಕೂಲಕ್ಕಾಗಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಈ ಮೂರು ಹೆಚ್ಚುವರಿ ರೈಲುಗಳನ್ನು ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ. ಹಾಗಾದ್ರೆ ಮೂರು ವಿಶೇಷ ಟ್ರೈನ್ ಗಳ ವೇಳಾಪಟ್ಟಿ ಈ ಕೆಳಗಿನಂತಿದೆ.

ಯಶವಂತಪುರ-ಕಾರವಾರ ರೈಲು (06557)
ಏ.17 ರಂದು ರಾತ್ರಿ 10 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಡಲಿರುವ ಯಶವಂತಪುರ-ಕಾರವಾರ ರೈಲು (06557) ಮರುದಿನ ಮಧ್ಯಾಹ್ನ 3 ಗಂಟೆಗೆ ಕಾರವಾರ ತಲುಪಲಿದೆ. ಈ ರೈಲು ಚಿಕ್ಕಬಾಣಾವಾರ, ನೆಲಮಂಗಲ, ಕುಣಿಗಲ್‌, ಚನ್ನರಾಯಪಟ್ಟಣ, ಬಂಟ್ವಾಳ, ಮಂಗಳೂರು, ಮುಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ, ಅಂಕೋಲ ಮಾರ್ಗವಾಗಿ ಸಂಚರಿಸಲಿದೆ. ಏ.18 ರಂದು ಕಾರವಾರದಿಂದ ಸಂಜೆ 6 ಗಂಟೆಗೆ ಹೊರಡಲಿರುವ ರೈಲು (06558) ಮರುದಿನ ಬೆಳಗ್ಗೆ 10.35 ಕ್ಕೆ ಯಶವಂತಪುರ ತಲುಪಲಿದೆ. 

ಯಶವಂತಪುರ-ಬೆಳಗಾವಿಗೆ ಮೊದಲ ಟ್ರೈನ್  (06581) 
ಏ.18 ರಂದು ರಾತ್ರಿ 11 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಡಲಿರುವ ಯಶವಂತಪುರ-ಬೆಳಗಾವಿ ರೈಲು (06581) ಮರುದಿನ ಬೆಳಗ್ಗೆ 11.15 ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ತುಮಕೂರು, ಅರಸಿಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡ ಮೂಲಕ ಸಾಗಲಿದೆ.

ಬೆಳಗಾವಿಯಿಂದ ಬೆಂಗಳೂರಿಗೆ ವಾಪಸ್  [06582] 
ಏ.21 ರಂದು ಸಂಜೆ 5 ಗಂಟೆಗೆ ಬೆಳಗಾವಿಯಿಂದ ಹೊರಡಲಿರುವ ಸಂಖ್ಯೆ 06582 ಯ ರೈಲು ಮರುದಿನ ಮುಂಜಾನೆ 5 ಗಂಟೆಗೆ ಯಶವಂತಪುರಕ್ಕೆ ಬಂದು ತಲುಪಲಿದೆ. 

ಯಶವಂತಪುರ-ಬೆಳಗಾವಿಗೆ 2ನೇ ಟ್ರೈನ್  (06583) 
ಏ.22 ರಂದು ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಡಲಿರುವ ಯಶವಂತಪುರ-ಬೆಳಗಾವಿ ರೈಲು (06583) ಮರುದಿನ ಬೆಳಗ್ಗೆ 11.15 ಕ್ಕೆ ಬೆಳಗಾವಿ ತಲುಪಲಿದೆ. 

ಬೆಳಗಾವಿಯಿಂದ ಬೆಂಗಳೂರಿಗೆ ವಾಪಸ್ (06584]
ಏ.23 ರಂದು ಸಂಜೆ 7 ಗಂಟೆಗೆ ಬೆಳಗಾವಿಯಿಂದ ಹೊರಡಲಿರುವ ರೈಲು (06584) ಮರುದಿನ ಮುಂಜಾನೆ 6.20 ಕ್ಕೆ ಯಶವಂತಪುರಕ್ಕೆ ಬಂದು ತಲುಪಲಿದೆ. ಒಟ್ಟಿನಲ್ಲಿ ಎಲ್ಲರೂ ಮತದಾನ ಮಾಡಬೇಕೆಂಬ. ಮತದಾನ ಮಾಡಲು ತಮ್ಮ-ತಮ್ಮ ಊರಿಗೆ ಹೋಗುವವರಿಗೆ ಅನುಕೂಲವಾಗಲಿ ಎನ್ನುವ ನೈರುತ್ಯ ರೈಲ್ವೆ ವಲಯದ ನಿರ್ಧಾರ ನಿಜಕ್ಕೂ ಶ್ಲಾಘನೀಯ.

ಇಷ್ಟು ಅನುಕೂಲ ಮಾಡಿಕೊಟ್ಟಿರುವ ರೈಲ್ವೆ ಇಲಾಖೆಗೆ ನಾವು ಮತದಾನ ಮಾಡುವ ಮೂಲಕ ಕೃತಜ್ಞೆತೆಗಳನ್ನು ಸಲ್ಲಿಸೋಣ. ಹಾಗಾಗಿ ಬೆಂಗಳೂರಿನಲ್ಲಿರುವ ಪರಸ್ಥಳದವರು ತಮ್ಮ-ತಮ್ಮ ಊರುಗಳಿಗೆ ಹೋಗಿ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸಿ.

ರೈಲಿನ ಸಮಯದ ಬಗ್ಗೆ ಗೊಂದಲವಿದ್ದರೆ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!