‘ಮೋದಿ ದೂರವಿಡಲು ದಕ್ಷಿಣ ಭಾರತದ ಮತದಾನವೇ ಟ್ರಂಪ್ ಕಾರ್ಡ್’

By Web DeskFirst Published May 7, 2019, 6:09 PM IST
Highlights

ಶಶಿ ತರೂರ್ ಈ ಬಾರಿ ರಾಹುಲ್ ಗಾಂಧಿ ಸ್ಪರ್ಧೆ ಬಗ್ಗೆ ಮಾತನಾಡುತ್ತ ದೇಶದಲ್ಲಿ ಹೊಸ ಸರಕಾರ ಬರುವಲ್ಲಿ ದಕ್ಷಿಣ ಭಾರತದ ಪಾತ್ರ ಏನು ಎಂಬುದನ್ನು  ಹೇಳಿದ್ದಾರೆ.

ನವದೆಹಲಿ[ಮೇ. 07]  ಮೋದಿ ಸರಕಾರ ದಕ್ಷಿಣ ಭಾರತದ ಬಗ್ಗೆ ತಾರತಮ್ಯ ಧೋರಣೆ  ಅನುಸರಿಸಿಕೊಂಡು ಬಂದಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಮಾಡಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ  ತಿರುವನಂತಪುರಂ ಸಂಸದ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಮತದಾನ ಮುಖ್ಯ ಪಾತ್ರ ನಿರ್ವಹಿಸಲಿದೆ. ಇಡೀ ದೇಶ ಕಾಂಗ್ರೆಸ್ ಪರವಾಗಿ ಮತ ಹಾಕಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೆಸಿಆರ್ 1996 ಪ್ಲ್ಯಾನ್: ದಕ್ಷಿಣಕ್ಕೆ ಪ್ರಧಾನಿ ಪಟ್ಟದ ಕೂಗು!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸ್ಪರ್ಧಿಸಿರುವುದನ್ನು ಸಮರ್ಥಿಸಿಕೊಂಡ ತರೂರ್ರು, ನರೇಂದರ ಮೋದಿ ಸರಕಾರದಲ್ಲಿ ದಕ್ಷಿಣ ಭಾರತವನ್ನು ಕಡೆಗಣಿಸಲಾಗಿದೆ, ಆದರೆ ಕಾಂಗ್ರೆಸ್ ಆಡಳಿತ ಹಾಗೆ ಮಾಡುವುದಿಲ್ಲ ಎನ್ನುವುದನ್ನು ತಿಳಿಸುವುದಕ್ಕಾಗಿಯೇ ಕೇಳದಿಂದ  ಅಖಾಡಕ್ಕೆ ಇಳಿದಿದ್ದಾರೆ ಎಂದು ಹೇಳಿದರು.

ಎನ್ ಡಿಎ ಜತೆ ಹೋದ ಅನೇಕರಿಗೆ ಈಗಾಗಲೇ ಕೆಟ್ಟ ಅನುಭವವಾಗಿದೆ. ದಕ್ಷಿಣ ಭಾರತಲ್ಲಿ ಪ್ರಕಟವಾಗುವ ಲೋಕಸಭಾ ಭವಿಷ್ಯ ದೇಶದ ರಾಜಕಾರಣದ ದಿಕ್ಕು ತಿಳಿಸಲಿದೆ.

click me!