ಬೆಳಗಾವಿ: ಕೊನೆ ಕ್ಷಣದಲ್ಲಿ ಕಾಂಗ್ರೆಸ್ಸಿಗರಿಗೆ ಸುರೇಶ್ ಅಂಗಡಿ ಕೊಟ್ಟ ಶಾಕ್ ಅಂತಿಂಥದ್ದಲ್ಲ!

Published : Apr 08, 2019, 05:55 PM ISTUpdated : Apr 08, 2019, 06:07 PM IST
ಬೆಳಗಾವಿ: ಕೊನೆ ಕ್ಷಣದಲ್ಲಿ ಕಾಂಗ್ರೆಸ್ಸಿಗರಿಗೆ ಸುರೇಶ್ ಅಂಗಡಿ ಕೊಟ್ಟ ಶಾಕ್ ಅಂತಿಂಥದ್ದಲ್ಲ!

ಸಾರಾಂಶ

ಬೆಳಗಾವಿ ಬಿಜೆಪಿ ಅಭ್ಯರ್ಥಿ ವಿಪಕ್ಷಗಳಿಗೆ ಭರ್ಜರಿ ಶಾಕ್ ನೀಡಿದ್ದಾರೆ. ಗೆಲುವಿಗಾಗಿ  ಎದುರಾಳಿಗಳು ಮಾಡಿರುವ ತಂತ್ರವನ್ನು ಬುಡಬೇಲು ಮಾಡಿದ್ದಾರೆ.

ಬೆಳಗಾವಿ (ಏ. 08)  ಬೆಳಗಾವಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ.  ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಂಗಡಿ, ಬಿಜೆಪಿಗೆ ಬೆಂಬಲಿಸಿ 6 ಜನ ಪಕ್ಷೇತರರು ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆಯುವಂತೆ ಮಾಡಿದ್ದಾರೆ.

ನಾಲ್ವರು ಎಂ ಇ ಎಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಮೋಹನ ಮೋರೆ, ಅಶೋಕ ಚೌಗಲೆ, ಗುರುಪುತ್ರಪ್ಪ ಕುಳ್ಳೂರ, ಸಂಗಮೇಶ ಚಿಕ್ಕನಗೌಡರ,ಸಂಜೀವ ಗಣಾಚಾರಿ, ಸರ್ವಜನತಾ ಪಾರ್ಟಿ  ಅಶೋಕ ಹಂಜಿ ನಾಮಪತ್ರ ವಾಪಸ್ ಪಡೆದಿದ್ದು ಸುರೇಶ ಅಂಗಡಿಗೆ ಬೆಂಬಲ ಎನ್ನುವಂಥ ಮಾತನ್ನಾಡಿದ್ದಾರೆ.

ಮೋದಿ VS ಸಿದ್ದು,  ರಾಮನ ಕರೆದುಕೊಂಡು ಪ್ರಚಾರಕ್ಕೆ ಹೊರಟ್ರಾ?

ಇದೆ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಂಗಡಿ, ಚುನಾವಣೆ ಎದುರಿಸಲು ಆಗದೇ ಎಂಇಎಸ್ ನಿಂದ 101 ಅಭ್ಯರ್ಥಿಗಳನ್ನ ಕಣಕ್ಕಿಳಿಸಿ ಚುನಾವಣೆ ಮುಂದೂಡಲು ಕುತಂತ್ರ ನಡೆಸಿತ್ತು. ಇನ್ನಾದ್ರು ಕಾಂಗ್ರೆಸ್ ಕುತಂತ್ರ ರಾಜಕಾರಣ ಬಿಡಬೇಕು ಎಂದು ಸಲಹೆ ನೀಡಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!