
ನವದಹೆಲಿ(ಏ.14): ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಶತೃಘ್ನ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸಲು ತಮಗಿಷ್ಟ ಎಂದು ಹೇಳಿದ್ದಾರೆ.
ಈಗಾಗಲೇ ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಟಿಕೆಟ್ ಪಡೆದಿರುವ ಶತೃಘ್ನ ಸಿನ್ಹಾ, ಅವಕಾಶ ಸಿಕ್ಕರೆ ಮೋದಿ ವಿರುದ್ಧವೂ ಸ್ಪರ್ಧೆಗೆ ತಾವು ಸಿದ್ಧವಿರುವುದಾಗಿ ಹೇಳಿದ್ದಾರೆ.
ಬಿಜೆಪಿ ವಿರುದ್ಧ ತಮ್ಮ ಟೀಕಾ ಪ್ರಹಾರ ಮುಂದುವರೆಸಿರುವ ಸಿನ್ಹಾ, ಬಿಜೆಪಿಯವರು ಮೂರ್ಖರೊಂದಿಗೆ ಬದುಕುತ್ತಿದ್ದು ಅವರು ಹಾಗೆ ಇದ್ದರೆನೇ ಒಳ್ಳೆಯದು ಎಂದು ಲೇವಡಿ ಮಾಡಿದ್ದಾರೆ.