ತುಮಕೂರಿನ ಕೈ ಟಿಕೆಟ್ ಮಾರಾಟವಾಯ್ತು: ಕೆಪಿಸಿಸಿ ಮಾಜಿ ಸದಸ್ಯ

By Web DeskFirst Published Mar 19, 2019, 8:51 PM IST
Highlights

ಬೆಳಗಾವಿಯಲ್ಲಿ ಕೈ ಮುಖಂಡರ ವಿರುದ್ಧ  ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಹರಿಹಾಯ್ದಿದ್ದಾರೆ. 

ಬೆಳಗಾವಿ [ಮಾ18]  ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಕೈಗೊಂಬೆ ಅಲ್ಲ. ಕಾಂಗ್ರೆಸ್ ಪಕ್ಷ ನಿರ್ನಾಮದ ಹಂತಕ್ಕೆ ಹೋಗಿದೆ.  ಮೂರು ಜನ ಶಾಸಕರು ನಿರಂತರ ಬ್ಲ್ಯಾಕ್ ಮೆಲ್ ಮಾಡುತ್ತಿದ್ದಾರೆ. ಶಾಸಕ ರಮೇಶ  ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿಯಿಂದ ಬ್ಲ್ಯಾಕ್ ಮೆಲ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದರು.

ಭೂಕಬಳಿಕೆ ಕೇಸ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಳುವಂತ ಅಭ್ಯರ್ಥಿ ಆಗಬೇಕು. ಕಾಂಗ್ರೆಸ್ ನಲ್ಲಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದರು.

ಕರ್ನಾಟಕದಲ್ಲಿ ದುಷ್ಟ ಲೀಡರ್ ಇದ್ದಾರೆ. ಅವರನ್ನ ಮಟ್ಟ ಹಾಕಲು ಕಾರ್ಯಕರ್ತರು ಒಂದಾಗಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸುತ್ತೇವೆ. ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರ ಆಸ್ತಿಯಾ ಕಾಂಗ್ರೆಸ್ ಪಾರ್ಟಿ ಎಂದು ಪ್ರಶ್ನೆ ಮಾಡಿದರು.

ಕಾರ್ಯಕರ್ತರು ಕಟ್ಟಿ ಬೆಳಿಸಿರುವ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ನಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವರು ದುಡ್ಡು ತೆಗೆದುಕೊಂಡಿದ್ದಾರೆ. ತುಮಕೂರು ಕ್ಷೇತ್ರದಲ್ಲಿ ಟಿಕೆಟ್ ಮಾರಾಟ‌ ಮಾಡಿಕೊಂಡಿದ್ದಾರೆ ಎಂದು ತಿವಿದರು.

click me!