ನಟಿ ನುಸ್ರತ್‌ ಜತೆ ಸೆಲ್ಫಿಗೆ ದುಂಬಾಲಿಗೆ ವೇದಿಕೆಯೇ ಬಿತ್ತು!

Published : May 09, 2019, 09:31 AM IST
ನಟಿ ನುಸ್ರತ್‌ ಜತೆ ಸೆಲ್ಫಿಗೆ ದುಂಬಾಲಿಗೆ ವೇದಿಕೆಯೇ ಬಿತ್ತು!

ಸಾರಾಂಶ

ಟಿಎಂಸಿ ಪಕ್ಷದ ತಾರಾ ಪ್ರಚಾರಕಿ ಹಾಗೂ ನಟಿ ನುಸ್ರತ್‌ ಜಹಾನ್‌ ಜತೆಗೆ ಸೆಲ್ಫಿ ತೆಗೆಸಿಕೊಳ್ಳಲು ನೂಕು ನುಗ್ಗಲು| ದುಂಬಾಲಿಗೆ ವೇದಿಕೆಯೇ ಬಿತ್ತು!

ಝಾರ್‌ಗ್ರಾಮ್‌[ಮೇ.09]: ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ತಾರಾ ಪ್ರಚಾರಕಿ ಹಾಗೂ ನಟಿ ನುಸ್ರತ್‌ ಜಹಾನ್‌ ಜತೆಗೆ ಸೆಲ್ಫಿಗಾಗಿ ನೂರಾರು ಜನ ಒಂದೇ ಬಾರಿಗೆ ವೇದಿಕೆ ಏರಿದ ಪರಿಣಾಮ ವೇದಿಕೆಯೇ ಕುಸಿದು ಬಿದ್ದ ಘಟನೆ ಗೋಪಿಬಲ್ಲಭಪೋರ್‌ದಲ್ಲಿ ಬುಧವಾರ ನಡೆದಿದೆ.

ಈ ವೇದಿಕೆ ಅತಿ ಕಡಿಮೆ ಎತ್ತರವಿದ್ದ ಕಾರಣ ಈ ಘಟನೆಯಲ್ಲಿ ಯಾರಿಗೂ ಗಾಯ ಸಹ ಆಗಿಲ್ಲ. ಬಸಿರಾತ್‌ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿರುವ ನುಸ್ರತ್‌, ಮಂಗಳವಾರ ಅಲ್ಲಿನ ಟಿಎಂಸಿ ಅಭ್ಯರ್ಥಿ ಬಿರ್ಬಾ ಸೋರೆನ್‌ ಪರ ಪ್ರಚಾರ ನಡೆಸಿದ್ದರು.

ಈ ವೇಳೆ ವೇದಿಕೆ ಏರಿ ಮಾತನಾಡುತ್ತಿದ್ದಾಗ ಅಭಿಮಾನಿಗಳ ಹಿಂಡು ಸೆಲ್ಫಿಗಾಗಿ ಮುಗಿಬಿದ್ದು ಈ ಘಟನೆ ನಡೆದಿದೆ. ಈ ವೇಳೆ ನುಸ್ರತ್‌ ಕೂಡ ಮೈಕ್‌ ಹಿಡಿದುಕೊಂಡು ಬಚಾವಾಗಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!