ಚುನಾವಣೆ ಕರ್ತವ್ಯದಲ್ಲಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು| ಮತಯಂತ್ರಗಳ ಮಸ್ಟರಿಂಗ್ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಶಿವಪುತ್ರ| ಯಾದಗಿರಿಯ ಸುರಪುರದ ಎಸ್ ಪಿ ಕಾಲೇಜು ಮೈದಾನದಲ್ಲಿ ನಡೆದ ಘಟನೆ| ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿವಾಸಿ|
ಯಾದಗಿರಿ(ಏ.22): ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶಾಲಾ ಶಿಕ್ಷಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಶಿವಪುತ್ರ ಎಂಬ ಶಾಲಾ ಶಿಕ್ಷಕ ಯಾದಗಿರಿಯ ಸುರಪುರದ ಎಸ್ ಪಿ ಕಾಲೇಜು ಮೈದಾನದಲ್ಲಿ, ಮತಯಂತ್ರಗಳ ಮಸ್ಟರಿಂಗ್ ವೇಳೆ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಿವಪುತ್ರ ಅವರಿಗೆ ಹೃದಯಾಘಾತವಾಗಿತ್ತು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿವಾಸಿಯಾಗಿರುವ ಮೃತ ಶಿವಪುತ್ರ, ಶಹಪುರದ ಹಳೆ ಸಗರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.