ಇವಿಎಂ ಜೊತೆ ಶೇ.100ರಷ್ಟು ವಿವಿಪ್ಯಾಟ್ ಹೊಂದಾಣಿಕೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ!

By Web DeskFirst Published May 21, 2019, 1:26 PM IST
Highlights

ಇವಿಎಂ ಮತಗಳ ಜೊತೆ ಶೇ. 100 ವಿವಿಪ್ಯಾಟ್ ಹೊಂದಾಣಿಕೆ| ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್| ಚೆನ್ನೈ ಮೂಲದ ಟೆಕ್ ಫಾರ್ ಆಲ್ ಎಂಬ ಸಂಸ್ಥೆ ಸಲ್ಲಿಸಿದ್ದ ಅರ್ಜಿ| ಅರ್ಜಿ ತಿರಸ್ಕರಿಸಿದ ನ್ಯಾ. ಅರುಣ್ ಮಿಶ್ರಾ ನೇತೃತ್ವದ ರಜಾ ಕಾಲದ ಪೀಠ|

ನವದೆಹಲಿ(ಮೇ.21): ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣೆ ಮತ ಎಣಿಕೆ ಸಮಯದಲ್ಲಿ ಇವಿಎಂ ಮತಗಳ ಜೊತೆ ಶೇ. 100 ವಿವಿಪ್ಯಾಟ್ ಚೀಟಿಗಳ ಹೊಂದಾಣಿಕೆಯಾಗಬೇಕೆಂದು  ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿದೆ.

ತಂತ್ರಜ್ಞರ ಗುಂಪೊಂದು ಚುನಾವಣಾ ಮತ ಎಣಿಕೆ ವೇಳೆ ಶೇ. 100ರಷ್ಟೂ ವಿವಿಪ್ಯಾಟ್ ಚೀಟಿಗಳ ಹೊಂದಾಣಿಕೆ ಆಗಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ರಜಾ ಕಾಲದ ಪೀಠ ಮನವಿಯನ್ನು ತಳ್ಳಿ ಹಾಕಿದೆ.

Supreme Court dismisses the petition filed by a group of technocrats seeking a direction that the number of machines subject to verification of VVPATs to be increased to 100%. A vacation bench of the Apex Court did not find any merit in the petition filed by the technocrats. pic.twitter.com/TEVcHf3VbL

— ANI (@ANI)

ಚೆನ್ನೈ ಮೂಲದ ಟೆಕ್ ಫಾರ್ ಆಲ್ ಎಂಬ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅರುಣ್ ಮಿಶ್ರಾ ನೇತೃತ್ವದ ರಜಾ ಕಾಲದ ಪೀಠ, ಈ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ಪೀಠ ಹಿಂದೆಯೇ ತೀರ್ಪು ನೀಡಿದ್ದು, ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

click me!