ಲೋಕಸಭೆಗೆ ಈ ಕ್ಷೇತ್ರದಿಂದ 480 ಅಭ್ಯರ್ಥಿಗಳು: ದಾಖಲೆ

By Web DeskFirst Published Apr 19, 2019, 11:34 AM IST
Highlights

ಲೋಕಸಭಾ ಚುನಾವಣೆಯಲ್ಲಿ ಹಲವು ರೀತಿಯ ವಿಶೇಷಗಳು ವರದಿಯಾಗುತ್ತಿವೆ. ಅದರಂತೆ ಇಲ್ಲೊಂದು ಕ್ಷೇತ್ರದಲ್ಲಿ 480 ಅಭ್ಯರ್ಥಿಗಳು ಸ್ಪರ್ಧೆ ಮಾಡಿ ದಾಖಲೆ ಬರೆದಿದ್ದರು. 

ನಲ್ಗೊಂಡ : ಲೋಕಸಭಾ ಚುನಾವಣೆ ಮಹಾ ಸಮರ ದೇಶದಲ್ಲಿ ಆರಂಭವಾಗಿದೆ. ಮೇ 19ರವರೆಗೂ ಚುನಾವಣೆ ನಡೆಯಲಿದ್ದು, ಹಲವು ರೀತಿಯ ವಿಶೇಷತೆಗಳು ವರದಿಯಾಗುತ್ತಿವೆ. 

ಈ ಹಿಂದಿನ ಚುನಾವಣೆಗಳಲ್ಲಿಯೂ ಕೂಡ ಹಲವು ವಿಶೇಷಗಳು ನಡೆದಿದ್ದವು.  ಲೋಕಸಭೆ ಚುನಾವಣೆಯೊಂದರಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ ದಾಖಲೆ ಆಂಧ್ರಪ್ರದೇಶದ ನಲ್ಗೊಂಡಾ ಹೆಸರಿನಲ್ಲಿದೆ. 

1996 ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಿಂದ 480 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಆ ಪೈಕಿ 477 ಮಂದಿ ಠೇವಣಿ ಕಳೆದುಕೊಂಡಿದ್ದರು. 

1996 ರಲ್ಲಿ ತಮಿಳುನಾಡಿನ ಮೊಡಕುರಿಚಿ ಎಂಬ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 1033 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತಪತ್ರವನ್ನು ಪುಸ್ತಕದ ರೀತಿ ಮುದ್ರಿಸಲಾಗಿತ್ತು. ಇದು ವಿಧಾನಸಭೆ ಚುನಾವಣೆಗಳ ಮಟ್ಟಿಗೆ ದಾಖಲೆ ಎನಿಸಿಕೊಂಡಿತ್ತು.

click me!