ಮೋದಿ ಬೆಂಬಲಿಗರನ್ನು ಭೇಟಿಯಾದ ಪ್ರಿಯಾಂಕಾ: ಸೆಲ್ಫಿಗಾಗಿ ನಿಂತರು ಅಕ್ಕಪಕ್ಕ!

Published : May 14, 2019, 12:03 PM IST
ಮೋದಿ ಬೆಂಬಲಿಗರನ್ನು ಭೇಟಿಯಾದ ಪ್ರಿಯಾಂಕಾ: ಸೆಲ್ಫಿಗಾಗಿ ನಿಂತರು ಅಕ್ಕಪಕ್ಕ!

ಸಾರಾಂಶ

ಮೋದಿ ಮೋದಿ ಅಂದವರು ಪ್ರಿಯಾಂಕಾ ಸೆಲ್ಫಿಗಾಗಿ ಮುಗಿಬಿದ್ದರು| ಬೆಂಗಾವಲು ಪಡೆ ವಾಹನ ನಿಲ್ಲಿಸಿ ಮೋದಿ ಬೆಂಬಲಿಗರನ್ನು ಬೇಟಿಯಾದ ಪ್ರಿಯಾಂಕಾ | ಮೋದಿ ಬೆಂಬಲಿಗರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದ ಪ್ರಿಯಾಂಕಾ ಗಾಂಧಿ| ‘ಆಪ್ ಅಪ್ನಿ ಜಗಾ, ಮೇ ಅಪ್ನಿ ಜಗಾ’ ಎಂದ ಪ್ರಿಯಾಂಕಾ| ಪ್ರಿಯಾಂಕಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮೋದಿ ಬೆಂಬಲಿಗರು| 

ಇಂಧೋರ್(ಮೇ.14): ರಸ್ತೆಯಲ್ಲಿ ಸಾಗುತ್ತಿದ್ದಾಗ ಮೋದಿ ಮೋದಿ ಎಂದು ಕೂಗಿದ ಪ್ರಧಾನಿ ಮೋದಿ ಬೆಂಬಲಿಗರನ್ನು, ತಮ್ಮ ಬೆಂಗಾವಲು ಪಡೆ ವಾಹನವನ್ನು ತಡೆದು ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೇಟಿ ಮಾಡಿದ್ದಾರೆ.

ಮಧ್ಯಪ್ರದೇಶದ ಇಂಧೋರ್ ವಿಮಾನ ನಿಲ್ದಾಣದಿಂದ ಬರುತ್ತಿದ್ದ ಪ್ರಿಯಾಂಕಾ ಗಾಂಧಿಗೆ ಭಾರೀ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಕೆಲವು ಯುವಕರು, ಮೋದಿ ಮೋದಿ ಎಂದು ಘೋಷಣೆ ಕೂಗಿದರು.

ಕೂಡಲೇ ತಮ್ಮ ಕಾರು ನಿಲ್ಲಿಸಿದ ಪ್ರಿಯಾಂಕಾ, ಬೆಂಗಾವಲು ಪಡೆ ವಾಹನವನ್ನೂ ನಿಲ್ಲಿಸಿ ಯುವಕರ ಬಳಿ ತೆರಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.  ಅಲ್ಲದೇ ‘ಆಪ್ ಅಪ್ನಿ ಜಗಾ, ಮೇ ಅಪ್ನಿ ಜಗಾ’(ನೀವು ನಿಮ್ಮ ಜಾಗದಲ್ಲಿ, ನಾನು ನನ್ನ ಜಾಗದಲ್ಲಿ) ಎಂದು ಹೇಳಿ ಯುವಕರಿಗೆ ಶುಭಾಶಯ ಕೋರಿದರು. 

ಈ ವೇಳೆ ಮೋದಿ ಮೋದಿ ಎನ್ನುತ್ತಿದ್ದ ಯುವಕರು ಪ್ರಿಯಾಂಕಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದರು. ಎಲ್ಲರೊಂದಿಗೆ ಫೋಟೋಗೆ ಪೋಸ್ ನೀಡಿದ ಪ್ರಿಯಾಂಕಾ, ಬಳಿಕ ಚುನಾವಣಾ ಪ್ರಚಾರ ಸಭೆಗೆ ತೆರಳಿದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!