ಮಾಯಾ, ಮೋದಿಗೆ ಸಡ್ಡು ಹೊಡೆದ ಪ್ರಿಯಾಂಕಾ!: ಸಂಚಲನ ಮೂಡಿಸಿದ ಆ ಭೇಟಿ!

Published : Mar 14, 2019, 11:54 AM IST
ಮಾಯಾ, ಮೋದಿಗೆ ಸಡ್ಡು  ಹೊಡೆದ ಪ್ರಿಯಾಂಕಾ!: ಸಂಚಲನ ಮೂಡಿಸಿದ ಆ ಭೇಟಿ!

ಸಾರಾಂಶ

ಮಾಯಾ, ಮೋದಿಗೆ ಸಡ್ಡು ಹೊಡೆದ ಪ್ರಿಯಾಂಕಾ| ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಭೇಟಿ

ಮೀರತ್‌[ಮಾ.14]: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬುಧವಾರ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್‌ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ದಲಿತ ನಾಯಕರಾಗಿ ಗುರುತಿಸಿಕೊಂಡಿರುವ ಚಂದ್ರಶೇಖರ ಆಜಾದ್‌ರನ್ನು, ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಮಂಗಳವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆಜಾದ್‌ ರಾಜಕೀಯ ರಾರ‍ಯಲಿ ನಡೆಸಿದ್ದು, ಕಾರು ಮತ್ತು ದ್ವಿಚಕ್ರ ವಾಹನಗಳನ್ನೂ ಸಹ ಬಳಕೆ ಮಾಡಿಕೊಂಡು ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಾಗ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾರಾಣಸಿಯಲ್ಲಿ ತಾವು ಮೋದಿಯನ್ನು ಸೋಲಿಸಿಯೇ ತೀರುವುದಾಗಿ ಆಜಾದ್‌ ಹೇಳಿದ ಮಾರನೇ ದಿನವೇ ಅವರನ್ನು ಪ್ರಿಯಾಂಕಾ ಭೇಟಿ ಮಾಡಿದ್ದಾರೆ. ಮತ್ತೊಂದೆಡೆ ಉತ್ತರಪ್ರದೇಶದ ಮಹಾಮೈತ್ರಿಯಿಂದ ತಮ್ಮನ್ನು ಹೊರಬಿಟ್ಟಬಿಎಸ್‌ಪಿ ಅಧ್ಯಕ್ಷೆ, ದಲಿತ ನಾಯಕಿ ಮಾಯಾವತಿಗೆ ಪಾಠ ಕಲಿಸಲು ಆಜಾದ್‌ ಅವರನ್ನು ಪ್ರಿಯಾಂಕಾ ಬಳಸಿಕೊಳ್ಳುತ್ತಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!