ಸಿದ್ದರಾಮಯ್ಯ ಚಾಲೆಂಜ್ ಸ್ವೀಕರಿಸಿದ ಪ್ರತಾಪ್ ಸಿಂಹ

Published : Apr 02, 2019, 12:48 PM IST
ಸಿದ್ದರಾಮಯ್ಯ ಚಾಲೆಂಜ್ ಸ್ವೀಕರಿಸಿದ ಪ್ರತಾಪ್ ಸಿಂಹ

ಸಾರಾಂಶ

ಮೋದಿ ಬಹಿರಂಗ ಚರ್ಚೆಗೆ ಕರೆದ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಉತ್ತರ | ಕಾಂಗ್ರೆಸ್‌ ಧುರೀಣರ ಪ್ರಶ್ನೆಗೆ ನಾನೊಬ್ಬನೇ ಉತ್ತರಿಸುತ್ತೇನೆ ಎಂದ ಸಿಂಹ |  

ಬೆಂಗಳೂರು (ಏ. 02): ಮೋದಿ ಬಹಿರಂಗ ಚರ್ಚೆಗೆ ಕರೆದ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಉತ್ತರಿಸಿದ್ದಾರೆ. ಕಾಂಗ್ರೆಸ್ ನ ಎಲ್ಲಾ ಧುರೀಣರು ಒಂದುಕಡೆ ಚರ್ಚೆಗೆ ಬರಲಿ.  ನಾನೊಬ್ಬನೇ ಎಲ್ಲರನ್ನೂ ಸೊಲಿಸ್ತೀನಿ.  ಅವರೆಲ್ಲರ ಮುಂದೆ ದಾಖಲೆ ಸಮೇತ ನಾನೊಬ್ಬನೇ ನಿಲ್ಲುತ್ತೇನೆ. ನನ್ನ ಹಿಂದೆ ಕೇವಲ ಕಾರ್ಯಕರ್ತರು ಮಾತ್ರ ಇರ್ತಾರೆ. ನಿಶ್ಚಿತವಾಗಿ ನಾನು ಬಹಿರಂಗ ಚರ್ಚೆಯಲ್ಲಿ ಗೆಲ್ಲುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ. 

ಹಿನಕಲ್ ಪ್ಲೈ ಓವರ್‌ ಗೆ ಯಾರು ಕಾರಣ ಅನ್ನೋದನ್ನ ಮುಡಾ ದಾಖಲೆಗಳು ಹೇಳುತ್ತವೆ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಕೊಟ್ಟಿರೋ 7.5 ಸಾವಿರ ಕೋಟಿಯಲ್ಲಿ ಇವರದ್ದು ನಯಾ ಪೈಸೆ ಇಲ್ಲ. ಐದು ಬಾರಿ ಚಾಮುಂಡೇಶ್ಚರಿ ಕ್ಷೇತ್ರ ಪ್ರತಿನಿಧಿಸಿದ ಸಿದ್ದರಾಮಯ್ಯಗೆ ಕುಡಿಯೋ ನೀರು ಕೊಡಲು ಆಗಲಿಲ್ಲ. ಇವತ್ತು ನಾವು ಈ ಭಾಗದಲ್ಲಿ ಮಾಡಿರೋ ಅಭಿವೃದ್ಧಿ ಕಾರ್ಯಗಳನ್ನು ಜನರೇ ನೋಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. 

"

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!