ಇದು ಪ್ರಣಬ್ ಮುಖರ್ಜಿ ರಾಜಕೀಯದ ಇಂಟರೆಸ್ಟಿಂಗ್ ಫ್ಯಾಕ್ಟ್

By Web DeskFirst Published Mar 21, 2019, 1:15 PM IST
Highlights

ಲೋಕಸಭಾ ಚುನಾವಣೆ ಸಮೀಪಿಸಿದ್ದು, ಇದೇ ವೇಳೆ ರಾಜಕೀಯ ರಂಗದ ಹಲವು ವಿಶೇಷಗಳನ್ನು ನಾವಿನಲ್ಲಿ ತಿಳಿಯಬಹುದಾಗಿದೆ. 

ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ.  ಇದೇ ವೇಳೆ ಹಲವು ರಾಜಕೀಯ ಕ್ಷೇತ್ರದ ಹಲವು ಕುತೂಹಲಕಾರಿ ವಿಚಾರಗಳನ್ನು ತಿಳಿಯಬಹುದಾಗಿದೆ. 

 ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, 1969 ರಲ್ಲಿ ರಾಜಕಾರಣ ಪ್ರವೇಶಿಸಿದ ಅವರು 5 ಬಾರಿ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಎರಡು ಬಾರಿ ಮಾತ್ರ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ ಜಂಗೀಪುರದಿಂದ ಆಯ್ಕೆಯಾಗಿದ್ದಾರೆ. ಪ್ರಣಬ್ ಮುಖರ್ಜಿ 2012 ರಿಂದ 2017ರವರೆಗೆ ದೇಶದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ.

ವಿವಿ ಪ್ಯಾಟ್ ಬಳಕೆಯಾಗಿದ್ದು ಮೊದಲು ನಾಗಾಲ್ಯಾಂಡ್ ನಲ್ಲಿ

 ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ವಿವಿಪ್ಯಾಟ್ ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ. ತಾವು ಯಾರಿಗೆ ಮತ ಹಾಕಿದ್ದೇವೆ ಎಂಬ ಖಾತ್ರಿಯನ್ನು ಮತದಾರರಿಗೆ ನೀಡುವ ವಿವಿಪ್ಯಾಟ್‌ಗಳನ್ನು
ಮೊದಲ ಬಾರಿಗೆ 2013 ರಲ್ಲಿ ನಾಗಾಲ್ಯಾಂಡ್‌ನ ನೊಕ್‌ಸೆನ್ ಕ್ಷೇತ್ರದ ಉಪಚುನಾವಣೆಯಲ್ಲಿ ಬಳಸಲಾಗಿತ್ತು

ದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 1977 ರಲ್ಲಿ 543 ಕ್ಕೆ ಹೆಚ್ಚಳ ಗೊಳಿಸಲಾಯಿತು. ಅದಕ್ಕೂ ಮುನ್ನ 1977 ದೇಶದಲ್ಲಿ 489 ಕ್ಷೇತ್ರಗಳು ಇದ್ದವು.

click me!