
ಭೋಪಾಲ್(ಏ.29): ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಅವರನ್ನು ಕಂಡೊಡನೆ ಕಣ್ಣೀರಾಗಿದ್ದಾರೆ.
ತಮ್ಮ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಉಮಾ ಭಾರತಿ ಅವರನ್ನು ಕಂಡ ಸಾಧ್ವಿ, ಕಾರಿನಲ್ಲೇ ಕಣ್ಣೀರಾದರು. ಈ ವೇಳೆ ಸಾಧ್ವಿ ಅವರನ್ನು ಸಂತೈಸಿದ ಉಮಾ ಭಾರತಿ, ಕುಡಿಯಲು ನೀರು ಕೊಟ್ಟು ಧೈರ್ಯ ಹೇಳಿದರು.
ಭೋಪಾಲ್ ಮತ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿದ್ದ ಉಮಾ ಭಾರತಿ, ಇದೀಗ ಸಾಧ್ವಿ ಪರ ಚುನಾವಣಾ ಪ್ರಚಾರ ಮಾಡಿ ಪಕ್ಷ ಮೊದಲು ಎಂಬ ಸಿದ್ಧಾಂತವನ್ನು ಎತ್ತಿ ಹಿಡಿದಿರುವುದು ವಿಶೇಷ.