
ಮುಂಬೈ(ಏ.22): ಲೋಕಸಭೆ ಚುನಾವಣೆಲ್ಲಿ ಮತದಾನ ಮಾಡುವಂತೆ ಮತ ಜಾಗೃತಿ ಮಾಡಿರುವ ಬಾಲಿವುಡ್ ನಟ ಶಾರೂಖ್ ಖಾನ್ ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಮತದಾನದ ಮಹತ್ವದ ಕುರಿತು ಶಾರೂಖ್ ಖಾನ್ ಹೊಸ ಮ್ಯುಸಿಕ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ‘ಕರೋ ಮತದಾನ್’ ಎಂಬ ಹೆಸರಿನ ಈ ವಿಡಿಯೋದಲ್ಲಿ ಶಾರೂಖ್ ಮತದಾನ ಮಾಡುವ ಮೂಲಕ ದೇಶ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಶಾರೂಖ್ ಖಾನ್ ಅವರ ಈ ವಿಡಿಯೋ ಶ್ಲಾಘಿಸಿರುವ ಪ್ರಧಾನಿ ಮೋದಿ, ಮತದಾರರು ಅದರಲ್ಲೂ ಯುವ ಮತದಾರರ ಮೇಲೆ ಶಾರೂಖ್ ಅವರ ಹೊಸ ವಿಡಿಯೋ ಪ್ರಭಾವ ಬೀರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಾರೂಖ್ ಖಾನ್, ತಮ್ಮ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.