ಅಡ್ವಾಣಿ-ಜೋಷಿ ಭೇಟಿ ಮಾಡಿದ ಮೋದಿ-ಶಾ ಜೋಡಿ!

Published : May 24, 2019, 02:09 PM IST
ಅಡ್ವಾಣಿ-ಜೋಷಿ ಭೇಟಿ ಮಾಡಿದ ಮೋದಿ-ಶಾ ಜೋಡಿ!

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು| ಎಲ್‌.ಕೆ ಅಡ್ವಾಣಿ ಭೇಟಿಯಾದ ಮೋದಿ-ಶಾ ಭೇಟಿ| ಮುರುಳಿ ಮನೋಹರ್ ಜೋಷಿ ಅವರನ್ನೂ ಭೇಟಿಯಾದ ಜೋಡಿ| ಪಕ್ಷದ ಗೆಲುವನ್ನು ಅಡ್ವಾಣಿ ಆಶೀರ್ವಾದ ಎಂದ ಮೋದಿ|

ನವದೆಹಲಿ(ಮೇ.24): ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಎಲ್‍.ಕೆ ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಷಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ಬಿಜೆಪಿಯ ಈ ಅಭೂತಪೂರ್ವ ಗೆಲುವಿನ ಹಿಂದೆ ಅಡ್ವಾಣಿಯವರ ಕಠಿಣ ಪರಿಶ್ರಮವಿದೆ ಹೇಳಿದ್ದಾರೆ.

ಇದೇ ವೇಳೆ ಮುರುಳಿ ಮನೋಹರ್ ಜೋಷಿ ಅವರನ್ನೂ ಭೇಟಿಯಾದ ಮೋದಿ, ಬಿಜೆಪಿ ಹರಿಯ ನಾಯಕನ ಆಶೀರ್ವಾದ ಪಡೆದರು.

ಈ ಬಾರಿಯ ಚುನಾವಣೆಯಲ್ಲಿ ಇಬ್ಬರೂ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ಅಡ್ವಾಣಿ-ಜೋಷಿ ಮೋದಿ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!