ವಾರಾಣಸಿಯಲ್ಲಿ ಏ.26ಕ್ಕೆ ಮೋದಿ ನಾಮಪತ್ರ?: ಪ್ರಧಾನಿ ವಿರುದ್ಧ ಸ್ಪರ್ಧಿಸುವವರ ಪಟ್ಟಿ ಹೀಗಿದೆ

By Web DeskFirst Published Apr 15, 2019, 9:44 AM IST
Highlights

ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲು ದಿನಾಂಕ ಬಹುತೇಕ ಫಿಕ್ಸ್ ಆಗಿದೆ. ದೇಗುಲ ನಗರಿಯಲ್ಲಿ 2 ದಿನ ಮೋದಿ ರೋಡ್‌ಶೋ, ರಾರ‍ಯಲಿ ಬಳಿಕ ಮೋದಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾಋಎ.

ನವದೆಹಲಿ[ಏ.15]: ಪ್ರಧಾನಿ ನರೇಂದ್ರ ಮೋದಿ ಏ.26ರಂದು ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಏ.25ರಂದೇ ದೇಗುಲ ನಗರಿಗೆ ಆಗಮಿಸಲಿರುವ ಮೋದಿ, ಎರಡು ದಿನಗಳ ಕಾಲ ನಗರದಲ್ಲಿ ರೋಡ್‌ ಶೋ ಮತ್ತು ರಾರ‍ಯಲಿ ನಡೆಸಿ, ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಈ ಭೇಟಿ ಅವಧಿಯಲ್ಲಿ ಪ್ರಧಾನಿ ಅವರು ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಗಂಗಾ ನದಿ ಮೂಲಕ ದಶಾಶ್ವಮೇಧ ಘಾಟ್‌ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ವಾರಣಾಸಿಯಲ್ಲಿ 7ನೇ ಹಂತದಲ್ಲಿ ಮೇ.19ರಂದು ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಇನ್ನೂ ಅಭ್ಯರ್ಥಿ ಯಾರೆಂದು ಪ್ರಕಟಿಸಿಲ್ಲ. ಆದರೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸೋದರಿ ಪ್ರಿಯಾಂಕಾ ಗಾಂಧಿ ಅವರೇ ಈ ಕ್ಷೇತ್ರದಿಂದ ಕಣಕ್ಕೆ ಇಳಿಯಬಹುದು ಎಂಬು ಮಾತುಗಳು ಕೇಳಿಬಂದಿವೆ.

ಇನ್ನು ಮದ್ರಾಸ್‌ ಮತ್ತು ಕಲ್ಕತ್ತಾ ಹೈಕೋಟ್‌ ನ್ಯಾಯಾಧೀಶ ಹಾಗೂ ನ್ಯಾಯಾಂಗ ನಿಂದನೆ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದ ನ್ಯಾ.ಕರ್ಣನ್‌ ಕೂಡ ಇದೇ ಕ್ಷೇತ್ರದಿಂದ ಭ್ರಷ್ಟಾಚಾರ ವಿರೋಧಿ ಡೈನಾಮಿಕ್‌ ಪಕ್ಷದ ವತಿಯಿಂದ ಸ್ಪರ್ಧಿಲಿದ್ದಾರೆ. ಭೀಮ್‌ ಆರ್ಮಿ ಸಂಸ್ಥಾಪಕ ಚಂದ್ರಶೇಖರ್‌ ಆಜಾದ್‌ ಈಗಾಗಲೇ ಪ್ರಧಾನಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. 

ಮತ್ತೊಂದೆಡೆ ಬಿಎಸ್‌ಪಿ- ಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಇನ್ನೊಂದೆಡೆ ಪ್ರಧಾನಿ ಮೋದಿ ಅವರ ಮುಖ ಚಹರೆಯನ್ನೇ ಹೋಲುವ ಅಭಿನಂದನ ಪಾಠಕ್‌ ಕೂಡ ಸ್ಪತಂತ್ರ್ಯವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಇನ್ನು ಸೈನ್ಯದಲ್ಲಿ ನೀಡಲಾಗುವ ಕಳಪೆ ಸೌಲಭ್ಯದ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಭಾರೀ ಸಂಚಲನ ಮೂಡಿಸಿದ್ದ ಮಾಜಿ BSF ಯೋಧ ತೇಜ್ ಬಹದ್ದೂರ್ ಯಾದವ್ ಕೂಡಾ ಿದೇ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಇವೆಲ್ಲರನ್ನು ಹೊರತುಪಡಿಸಿ ತಮಿಳುನಾಡಿನ 111 ರೈತರು ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಅವರೆಲ್ಲರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ರರೈರತರು ತಮ್ಮ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!