6ನೇ ಪ್ರಕರಣದಲ್ಲೂ ಪ್ರಧಾನಿಗೆ ಕ್ಲಿನ್ ಚಿಟ್ ನೀಡಿದ ಆಯೋಗ!

By Web DeskFirst Published May 5, 2019, 1:06 PM IST
Highlights

ಪ್ರಧಾನಿ ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ| 6ನೇ ಪ್ರಕರಣದಲ್ಲೂ ಪ್ರಧಾನಿ ಮೋದಿಗೆ ಕ್ಲಿನ್ ಚಿಟ್| ಪ್ರಧಾನಿ ಮೋದಿ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದ ಚುನಾವಣಾ ಆಯೋಗ|

ನವದೆಹಲಿ(ಮೇ.05): ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಆರನೇ ಪ್ರಕರಣದಲ್ಲೂ ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಕ್ಲೀನ್‌ ಚಿಟ್ ನೀಡಿದೆ. 

ಗುಜರಾತ್‌ನ ಪಠಾಣ್‌ನಲ್ಲಿ ಏ.21ರಂದು ಮಾಡಿದ್ದ ಭಾಷಣದಲ್ಲಿ ಪ್ರಧಾನಿ ಮೋದಿ ಬಾಲಾಕೋಟ್ ವಾಯುದಾಳಿ ಮತ್ತು ವಿಂಗ್ ಕಮಾಂಡರ್ ಅಭಿನಂದನ್ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ವಿಂಗ್ ಕಮಂಡರ್ ಅಭಿನಂದನ್ ಅವರನ್ನು ಬಿಡದಿದ್ದರೆ ಪಾಕಿಸ್ತಾನಕ್ಕೆ ಅಂದು ‘ಖತಲ್ ಕಿ ರಾತ್’ ಆಗುತ್ತಿತ್ತು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು.

ಈ ಕುರಿತು ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿರುವ ಚುನಾವಣಾ ಆಯೋಗ, ಮೋದಿ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಮೂಲಕ ಪ್ರಧಾನಿ ಮೋದಿ ವಿರುದ್ಧ ದಾಖಲಾಗಿದ್ದ ಎಲ್ಲಾ  ಆರೂ ಪ್ರಕರಣಗಳಲ್ಲಿ ಆಯೋಗ ಕ್ಲೀನ್ ಚಿಟ್ ನೀಡಿದಂತಾಗಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!