ಬಾಡಿಗೆ ಮನೆಯಲ್ಲಿದ್ದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ: ಯಶ್ ಗೆ ನಿಖಿಲ್ ಟಾಂಗ್

Published : Apr 09, 2019, 08:44 AM IST
ಬಾಡಿಗೆ ಮನೆಯಲ್ಲಿದ್ದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ: ಯಶ್ ಗೆ ನಿಖಿಲ್ ಟಾಂಗ್

ಸಾರಾಂಶ

ಬಾಡಿಗೆ ಮನೆಯಲ್ಲಿದ್ದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ| ನಟ ಯಶ್‌ ವಿರುದ್ಧ ನಿಖಿಲ್‌ ಕಿಡಿ

ನಾಗಮಂಗಲ[ಏ.09]: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬಿರುಸಿನ ಪ್ರಚಾರ ನಡೆಸುತ್ತಿರುವ ನಟ ಯಶ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘‘ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಯ ಮಗನೋ ಅಥವಾ ಕಿರಿಯ ಮಗನೋ ಗೊತ್ತಿಲ್ಲ. ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ’’ ಎಂದು ಯಶ್‌ ಹೆಸರೆತ್ತದೆ ಕಿಡಿಕಾರಿದ್ದಾರೆ.

ನಾಗಮಂಗಲ ತಾಲೂಕು ಬೆಳ್ಳೂರು ಕ್ರಾಸ್‌ನಲ್ಲಿ ಪ್ರಚಾರ ಭಾಷಣ ಮಾಡಿದ ನಿಖಿಲ್‌ ಪಾಪ ಹವಾನಿಯಂತ್ರಿತ ಕಾರುಗಳಲ್ಲಿ ಕೂತು, ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಎಲ್ಲಿ ಬಿಸಿಲಿನ ಕಷ್ಟಅರ್ಥ ಆಗುತ್ತದೆ ಎಂದು ಕುಮಾರಣ್ಣ ನೀಡಿದ ಹೇಳಿಕೆ ಚೆನ್ನಾಗಿಯೇ ಇತ್ತು. ಅವರಿಗೆ ಒಂದು ಮಾತು ನೇರವಾಗಿ ಹೇಳಲು ಇಷ್ಟಡ್ತೀನಿ, ದೊಡ್ಡ ಮನುಷ್ಯರು, ಈ ಮಹಾನುಭಾವರೆಲ್ಲ ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!