ಮೋದಿ ಪ್ರಮಾಣ ವಚನಕ್ಕೆ ದಿನಾಂಕ ಫಿಕ್ಸ್: ವಿಶೇಷ ಅತಿಥಿ ಬರಲಿದ್ದಾರೆ!

Published : May 23, 2019, 03:38 PM ISTUpdated : May 23, 2019, 03:39 PM IST
ಮೋದಿ ಪ್ರಮಾಣ ವಚನಕ್ಕೆ ದಿನಾಂಕ ಫಿಕ್ಸ್: ವಿಶೇಷ  ಅತಿಥಿ ಬರಲಿದ್ದಾರೆ!

ಸಾರಾಂಶ

ಮೋದಿ ಪ್ರಮಾಣವಚನಕ್ಕೆ ದಿನಾಂಕ ನಿಗದಿ| ಸತತ ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆಯಾದ ಮೋದಿ| ಮೋದಿ ಪ್ರಮಾಣವಚನಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಬರಲಿದ್ದಾರೆ| ಪುಟಿನ್ ಗೆ ಖುದ್ದು ಆಮಂತ್ರಣ ನೀಡಿದ ಪ್ರಧಾನಿ ಮೋದಿ| ಇದೇ ಮೇ.29ರಂದು ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭ|

ನವದೆಹಲಿ(ಮೇ.23): ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ನರೇಂದ್ರ ಮೋದಿ ಸತತ ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದಾರೆ.

ಇನ್ನು ಪ್ರಧಾನಿ ಮೋದಿ ಪ್ರಮಾಣವಚನಕ್ಕೆ ದಿನಾಂಕ ಕೂಡ ನಿಗದಿಯಾಗಿದ್ದು, ಇದೇ ಮೇ.29ರಂದು ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇದೇ ವೇಳೆ ಮೋದಿ ಪ್ರಮಾಣವಚನ ಸಮಾರಂಭಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಪ್ರಮಾಣವಚನ ಸಮಾರಂಭಕ್ಕೆ ಬರುವಂತೆ ಖುದ್ದು ಮೋದಿ ಅವರೇ ಆಮಂತ್ರಣ ನೀಡಿದ್ದು, ಪುಟಿನ್ ಈ ಆಮಂತ್ರಣವನ್ನು ಒಪ್ಪಿಕೊಂಡಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!